ಪೊನ್ನಂಪೇಟೆ.ಫೆ.೧೪: ಲೈನ್ ಮನೆಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಪೊನ್ನಂಪೇಟೆಯಲ್ಲಿ ಕಳೆದ ಏಳು ತಿಂಗಳಿನಿAದ ನಡೆಸುತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಇಂದು ಜಿಲ್ಲಾ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಅವರು ಭೇಟಿ ನೀಡಿದ್ದರು. ಈ ವೇಳೆ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಅವರು, ಮತ್ತೂರು, ಹೈಸೊಡ್ಲೂರು, ಬಿರುನಾಣಿ, ರುದ್ರಬೀಡು, ತೆರಾಲು ಗ್ರಾಮಗಳಲ್ಲಿ ಐಟಿಡಿಪಿ ಇಲಾಖೆ ಹೆಸರಿನಲ್ಲಿ ಕಾಯ್ದಿರಿಸಲಾಗಿರುವ ಸ್ಥಳಗಳನ್ನು ಸರ್ವೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭ ಐಡಿಟಿಪಿ ಅಧಿಕಾರಿ ಹೊನ್ನೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಕಾಶ್, ಪೊನ್ನಂಪೇಟೆ ತºಶೀಲ್ದಾರ್ ಪ್ರಶಾಂತ್ ಹಾಗೂ ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಜರಿದ್ದರು. ಈ ಬಗ್ಗೆ ಶಕ್ತಿಯೊಂದಿಗೆ ಮಾತನಾಡಿದ ಬುಡ ಕಟ್ಟು ಕಾರ್ಮಿಕ ಸಂಘದ ಅಧ್ಯಕ್ಷ ಗಪ್ಪು ನಿವೇಶನ ಆದೇಶ ಪತ್ರ ಸಿಗುವವರೆಗೂ ನಾವು ಹೋರಾಟವನ್ನು ಕೈಬಿಡುವುದಿಲ್ಲ, ಮುಂದುವರಿಸುತ್ತೇವೆ ಎಂದು ಹೇಳಿದರು.