ಸಿದ್ದಾಪುರ, ಫೆ. ೧೪: ಕಾರ್ಗಿಲ್ಸ್ ಯುವಕ ಸಂಘ ಹಾಗೂ ಒನ್ ಟೀಂ ಒನ್ ಸೋಲ್ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಗುಹ್ಯ ಗ್ರಾಮದ ಸೆವೆನ್ ಸ್ಟಾರ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕೂಡುಗದ್ದೆ ಗ್ರಾಮದ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಎಂ.ಕೆ ಫ್ರೆಂಡ್ಸ್ ಸಿದ್ದಾಪುರ ತಂಡವನ್ನು ಮಣಿಸಿ, ಸೆವೆನ್ ಸ್ಟಾರ್ ತಂಡ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಟೀಮ್ ಬ್ಲಾö್ಯಕ್ ತಂಡ ಮೂರನೇ ಹಾಗೂ ಹೃದ್ಯಾ ಫ್ರೆಂಡ್ಸ್ ತಂಡ ನಾಲ್ಕನೇ ಬಹುಮಾನ ಪಡೆದುಕೊಂಡಿತು. ಆಸಿಫ್ ಉತ್ತಮ ಆಟಗಾರ, ವಿಬಿನ್ ಉತ್ತಮ ಡಿಫೆಂಡರ್, ಉತ್ತಮ ಆಲ್ ರೌಂಡರ್ ಆಗಿ ಶಾಫಿ ಬಹುಮಾನ ಪಡೆದರು.

ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕಾರ್ಗಿಲ್ ಫ್ರೆಂಡ್ಸ್ ಪ್ರಥಮ, ಮಾರ್ಕೆಟ್ ಬಾಯ್ಸ್ ತಂಡ ದ್ವಿತೀಯ ಬಹುಮಾನ ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಪ್ರಾರ್ಥನ ಫ್ರೆಂಡ್ಸ್ ಪ್ರಥಮ, ಪೂರ್ಣಿಮಾ ಫ್ರೆಂಡ್ಸ್ ದ್ವಿತೀಯ ಬಹುಮಾನ ಪಡೆದುಕೊಂಡಿತು. ಗ್ರಾಮಸ್ಥರಿಗಾಗಿ ಬಾರದ ಗುಂಡು ಎಸೆತ, ಮಕ್ಕಳಿಗೆ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆ.ಜಿ ಬೋಪಯ್ಯ, ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಗ್ರಾಮೀಣ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು. ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಗ್ರಾಮ ಮಟ್ಟದಲ್ಲಿ ಆಯೋಜಿಸಿರುವುದು ಶ್ಲಾಘನೀಯ ಎಂದರು. ಹೈಕೋರ್ಟ್ ವಕೀಲರಾದ ಎ.ಎಸ್ ಪೊನ್ನಣ್ಣ ಮಾತನಾಡಿ, ಗ್ರಾಮಗಳಲ್ಲಿ ಕ್ರೀಡಾಕೂಟ ಹಮ್ಮಿಕೊಳ್ಳುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ ಎಂದರು.

ಈ ಸಂದರ್ಭ ಸಂಘದ ಅಧ್ಯಕ್ಷರಾದ ರಾಜೇಶ್, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷೆ ರೀನಾ ತುಳಸಿ, ಸದಸ್ಯರಾದ ದೇವಜಾನು, ಅಬಿತಾ ಗಿರೀಶ್, ಎ.ಎಸ್ ಹಸ್ಸನ್, ಪೂರ್ಣಿಮಾ, ಎಂ.ಎ ಆನಂದ, ಎಸ್.ಎನ್.ಡಿ.ಪಿ ಯೂನಿಯನ್ ಅಧ್ಯಕ್ಷ ವಿ.ಕೆ ಲೊಕೇಶ್, ಜಿ.ಪಂ ಮಾಜಿ ಸದಸ್ಯ ಎಂ.ಎಸ್ ವೆಂಕಟೇಶ್, ಪ್ರಮುಖರಾದ ಎಂ.ಹೆಚ್ ಮೂಸಾ, ಪಿ.ಕೆ ಚಂದ್ರನ್, ಪ್ರವೀಣ್, ಪೂವಯ್ಯ ಗೌಡ, ಸನೋಜ್, ಬಷೀರ್, ಅಬ್ದುಲ್ ಖಾದರ್, ರಾಜಣ್ಣ ಸೇರಿದಂತೆ ಇನ್ನಿತರರು ಇದ್ದರು.