ಮಡಿಕೇರಿ, ಫೆ. ೧೨: ಯುವ ಸ್ಪಂದನ ಯೂತ್ ಫೌಂಡೇಶನ್ ಹಾಕತ್ತೂರು ವತಿಯಿಂದ ೨೦೨೩ ತಾ. .೨೫,೨೬,೨೭ ರಂದು ೩ನೇ ವರ್ಷದ ‘ಸೂಪರ್ ೮’ (೮ ಜನರ ತಂಡ) ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಮುತ್ತಾರ್ಮುಡಿಯಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಶನ್‌ನ ಅಧ್ಯಕ್ಷ ಕೆ.ಎಂ. ಶಿವರಾಜ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಕತ್ತೂರು ಮೂರ್ನಾಡು ಮುಖ್ಯರಸ್ತೆ ಸಮೀಪದ ಅಳಿಕೆ ವಿಜಯಾನಂದರವರ ಗದ್ದೆಯಲ್ಲಿ ಪಂದ್ಯಾಟ ಆಯೋಜಿಸಲಾಗಿದೆ. ಸುಮಾರು ೬೦ಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆಯಲ್ಲಿದ್ದು, ವಿಜೇತ ತಂಡಕ್ಕೆ ಪ್ರಥಮ ಬಹುಮಾನ ೩೩,೩೩೩ ನಗದು, ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ೧೬,೬೬೬ ನಗದು, ಆಕರ್ಷಕ ಟ್ರೋಫಿ, ಸೆಮಿಫೈನಲ್ ಪ್ರವೇಶಿಸುವ ಉಳಿದ ಎರಡು ತಂಡಗಳಿಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು. ಜೊತೆಗೆ ಮ್ಯಾನ್ ಆಫ್ ದಿ ಮ್ಯಾಚ್, ಮ್ಯಾನ್ ಆಫ್ ದಿ ಸೀರೀಸ್, ಉತ್ತಮ ಬ್ಯಾಟ್ಸ್ಮ್ಯಾನ್, ಉತ್ತರು ಬೌಲರ್ ಪ್ರಶಸ್ತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹೇಶ್ ೭೮೯೯೨೨೬೯೧೫, ಬಾಲಕೃಷ್ಣ ೯೯೦೧೩೨೭೨೩೬, ಸಂಪರ್ಕಿಸಬಹುದು ಎಂದು ತಿಳಿಸಿದರು.

ಹಲವು ಸಮಾಜಮುಖಿ ಕೆಲಸಗಳಲ್ಲಿ ಫೌಂಡೇಶನ್ ತೊಡಗಿಸಿಕೊಂಡಿದೆ. ಈ ಹಿಂದೆ ಸ್ವಚ್ಛತಾ ಅಭಿಯಾನ, ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕ, ಹಾಸಿಗೆ ಹಿಡಿದ ರೋಗಿಗೆ ಔಷಧ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಉಚಿತ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸದಸ್ಯರಾದ ದೀಪಕ್ ನಾಯ್ಡು, ಮನೋಜ್ ದೇರಾಜೆ, ಚೇತನ್ ತೆಕ್ಕಡೆ, ಪ್ರವೀಣ್ ಹಾಜರಿದ್ದರು.