ಕೂಡಿಗೆ, ಫೆ. ೧೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಕಾವೇರಿ ನದಿಯಿಂದ ಪೈಪ್‌ಗಳ ಮೂಲಕ ನೀರನ್ನು ಕೂಡ್ಲೂರು ಗ್ರಾಮದ ರೈತರ ಬೇಸಾಯದ ಜಮೀನಿಗೆ ಹರಿಸಲು ಅನುಕೂಲವಾಗುವಂತೆ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ೧,೭೫ ಲಕ್ಷ ರೂ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಏತ ನೀರಾವರಿ ಯೋಜನೆಗೆ ಸಂಬAಧಿಸಿದAತೆ ಹೊಸ ಕಾಮಗಾರಿಗಳು ನಡೆದು ಕೂಡ್ಲೂರು ಭಾಗದ ೧೧೫ ಎಕರೆಗಳಷ್ಟು ಪ್ರದೇಶದಲ್ಲಿ ಬೇಸಾಯ ಮಾಡಲು ಅನುಕೂಲವಾಗುವಂತೆ ಕಾವೇರಿ ನದಿಯಿಂದ ನೀರನ್ನು ಎತ್ತಿ ರೈತರ ಜಮೀನಿಗೆ ಹರಿಸಲಾಗುತ್ತಿದೆ.

ಸುಸಜ್ಜಿತ ಕಟ್ಟಡ ಅದಕ್ಕೆ ಸಂಬAಧಿಸಿದ ಅಧುನಿಕ ತಂತ್ರಜ್ಞಾನದ ಮೂರು ವಿದ್ಯುತ್ ಮೋಟಾರುಗಳು, ಮತ್ತು ಹೊಳೆಯಿಂದ ನೀರನ್ನು ಎತ್ತಲು ಬೇಕಾಗುವ ಉತ್ತಮ ಗುಣಮಟ್ಟದ ಪೈಪ್‌ಗಳ ಅಳವಡಿಕೆ, ೩೫ ಕೆ ವಿ ಸಾಮಥ್ಯ ದ ವಿದ್ಯುತ್ ಲೈನ್ ಅಳವಡಿಕೆ ಸೇರಿದಂತೆ ಏತ ನೀರಾವರಿ ಯೋಜನೆಗೆ ಬೇಕಾಗುವ ಎಲ್ಲಾ ಕಾಮಗಾರಿಗಳ ಕಲಸಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಈ ಭಾಗದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಲು ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ನೀರಿನ ಸೌಲಭ್ಯ ದೊರೆಯುತ್ತಿರುವ ಹಿನ್ನೆಲೆಯಲ್ಲಿ ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ರೈತರ ಜಮೀನಿಗೆ ನೀರು ಒದಗಿಸುವ ಯೋಜನೆಗೆ ಸಂಬAಧಿಸಿದAತೆ ನದಿಯಿಂದ ಪೈಪ್ ಗಳ ಮೂಲಕ ನೀರು ಹರಿದು ಬಂದು ನಂತರ ಬೃಹತ್ ನೆಲಮಟ್ಟದ ಟ್ಯಾಂಕ್ ನಲ್ಲಿ ಸಂಗ್ರಹವಾಗಿ ನಂತರ ಉಪ ಕಾಲುವೆಗಳ ಮೂಲಕ ರೈತರ ಜಮೀನಿಗೆ ತಲುಪಲು ಬೇಕಾಗುವ ಸಿಮೆಂಟ್ ಕಾಲುವೆಗಳ ಕಾಮಗಾರಿಯು ನಡೆದಿದೆ. ಕೂಡ್ಲೂರು ಸುತ್ತಮುತ್ತಲಿನ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಬೇಸಾಯ ಮಾಡಲು ಅನುಕೂಲವಾಗುವಂತೆ ನೀರಿನ ವ್ಯವಸ್ಥೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಾರ್ಯಗತಗೊಳಿಸಲು ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ರೈತರಿಗೆ ಬೇಸಾಯಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರ ಇಂಜಿನಿಯರ್ ಆರ್ ಎನ್ ಕುಮಾರ ಸ್ವಾಮಿ ತಿಳಿಸಿದ್ದಾರೆ.