ಕುಶಾಲನಗರ, ಫೆ. ೧೨ : ಕುಶಾಲನಗರದ ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಕುಶಾಲನಗರ- ಮಡಿಕೇರಿ ಹೆದ್ದಾರಿ ರಸ್ತೆಯ ಒತ್ತಿನಲ್ಲಿ ಸರಕಾರಿ ಇಂಜಿನಿಯರಿAಗ್ ಕಾಲೇಜು ಮುಂಭಾಗ ನಿರ್ಮಿಸಿರುವ ಬಸ್ ತಂಗುದಾಣದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಇನ್ನರ್ ವೀಲ್ ಕ್ಲಬ್ ಮೂಲಕ ಸುಮಾರು ೨ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ತಂಗುದಾಣವನ್ನು ಜಿಲ್ಲಾ ಅಧ್ಯಕ್ಷೆ ಕವಿತಾ ನಿಯತ್ ಉದ್ಘಾಟನೆ ಮಾಡಿದರು. ವಿದ್ಯಾರ್ಥಿಗಳ ಅನುಕೂಲಕ್ಕೆ ಕ್ಲಬ್ ಮೂಲಕ ಒಂದು ಉತ್ತಮ ರೀತಿಯ ಕೊಡುಗೆ ನೀಡಿರುವುದು ಶ್ಲಾಘನೀಯ ವಿಚಾರ ಎಂದು ಅವರು ಸ್ಥಳೀಯ ಕ್ಲಬ್ ಅಧ್ಯಕ್ಷರು, ಪದಾಧಿಕಾರಿಗಳನ್ನು ಅಭಿನಂದಿಸಿದರು.
ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಅಶ್ವಿನಿ ಪುರುಷೋತ್ತಮ್ ರೈ ಮಾತನಾಡಿ, ಕ್ಲಬ್ ನ ಮೂಲಕ ವಿದ್ಯಾರ್ಥಿಗಳ, ಸಾರ್ವಜನಿಕರ ಅನುಕೂಲಕ್ಕೆ ತ೦ಗುದಾಣ ನಿರ್ಮಿಸಲಾಗಿದೆ, ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪುರಸಭೆ ಸದಸ್ಯ ಅಮೃತ್ರಾಜ್ ಮಾತನಾಡಿ, ಸಮಾಜಮುಖಿ ಕೊಡುಗೆಯನ್ನು ಕುಶಾಲನಗರ ಇನ್ನರ್ ವ್ಹೀಲ್ ಮೂಲಕ ನೀಡಿರುವುದು ಮಾದರಿ ಯೋಜನೆಯಾಗಿದೆ ಎಂದರು.
ಈ ಸಂದರ್ಭ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ರೋಟರಿ ಪ್ರಮುಖರಾದ ಮಹೇಶ್ ನಾಲ್ವಡೆ, ಡಾ.ಹರಿ ಎ ಶೆಟ್ಟಿ, ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಅಶ್ವಿನಿ ಆರ್.ಕುಮಾರ್, ಖಜಾಂಚಿ ದೀಪಾ ಪೂಜಾರಿ, ಐಎಸ್ ಒ ದಿವ್ಯ, ಮಾಜಿ ಅಧ್ಯಕ್ಷರಾದ ರೇಖಾ, ಸುನೀತಾ, ಸುಪ್ರೀತಾ, ಆರತಿ ಶೆಟ್ಟಿ, ಜಾಸ್ಮಿನ್, ಉದ್ಯಮಿ ಪುರುಷೋತ್ತಮ ರೈ ಮತ್ತು ಕ್ಲಬ್ ಸದಸ್ಯರು ಇದ್ದರು.