ವೀರಾಜಪೇಟೆ, ಫೆ. ೧೨: ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯದ ವಾರ್ಷಿಕ ಉತ್ಸವ ಹಾಗೂ ಲೂರ್ದು ಮಾತೆಯ ವಾರ್ಷಿಕ ಮಹೋತ್ಸವ (ಕ್ಯಾಂಡಲ್ ಹಬ್ಬ)ವನ್ನು ವಿಜೃಂಭಣೆಯಿAದ ಆಚರಿಸಲಾಯಿತು.
ವಾರ್ಷಿಕ ಮಹೋತ್ಸವದ ಅಂಗವಾಗಿ ಫೆ.೮ ರಂದು ಧ್ವಜಾರೋಹಣದೊಂದಿಗೆ ಪ್ರಾರಂಭಗೊAಡು ದಿವ್ಯ ಬಲಿಪೂಜೆ, ಜಪಸರ ನಡೆದು ಫೆ.೧೧ ರಂದು ಹಾಸನದ ಸಂತ ಅಂತೋಣಿ ಧರ್ಮಕೇಂದ್ರದ ಧರ್ಮಗುರು ಪ್ಯಾಟ್ರಿಕ್ ಜೊವಾನ್ನೆಸ್ ಅವರಿಂದ ಸಂತ ಅನ್ನಮ್ಮ ದೇವಾಲಯದಲ್ಲಿ ಆಡಂಬರ ಗಾಯನ ಬಲಿಪೂಜೆ ನಡೆಯಿತು.
ಕ್ರೆöÊಸ್ತ ಬಾಂಧವರು ಹಾಗೂ ಭಕ್ತಾಧಿಗಳು ಸಂತ ಅನ್ನಮ್ಮ ದೇವಾಲಯದಿಂದ ಮೇಣದ ಬತ್ತಿ ಹಿಡಿದು ಲೂರ್ದು ಮಾತೆ ಹಾಗೂ ಸಂತ ಅನ್ನಮ್ಮ ಅವರ ವಿದ್ಯುತ್ ಅಲಂಕೃತ ಮಂಟಪ, ವಾದ್ಯಗೋಷ್ಠಿಯೊಂದಿಗೆ ದೇವರ ಕೀರ್ತನೆಗಳನ್ನು ಜಪಿಸುತ್ತ ಪಟ್ಟಣದ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಟಿ ಚೌಕಿ ಮುಖ್ಯ ರಸ್ತೆ, ಗಡಿಯಾರ ಕಂಬದ ಮಾರ್ಗವಾಗಿ ಖಾಸಗಿ ಬಸ್ಸು ನಿಲ್ದಾಣದಿಂದ ಮುಖ್ಯ ರಸ್ತೆಯಲ್ಲಿ ಸಂತ ಅನ್ನಮ್ಮ ದೇವಾಲಯದವರೆಗೆ ಮೆರವಣಿಗೆ ನಡೆಸಿದರು.
ಮೆರವಣಿಗೆ ಮತ್ತು ಗಾಯನ ಬಲಿಪೂಜೆಯಲ್ಲಿ ಸಂತ ಅನ್ನಮ್ಮ ದೇವಾಲಯದ ಪ್ರಧಾನ ಧರ್ಮಗುರು ಡಾ. ದಯಾನಂದ ಪ್ರಭು, ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಧರ್ಮಗುರು ಐಸಾಕ್ ರತ್ನಾಕರ, ಸಹಾಯಕ ಧರ್ಮಗುರು ಯೇಸು ಪ್ರಸಾದ್ ಸೇರಿದಂತೆ ಕೊಡಗಿನ ವಿವಿಧೆಡೆಯ ಧರ್ಮಗುರುಗಳು ಪಾಲ್ಗೊಂಡಿದ್ದರು.