*ಗೋಣಿಕೊಪ್ಪ, ಫೆ. ೧೩: ಲಾರಿ ಹಾಗೂ ಕಾರು ನಡುವಿನ ಅಪಘಾತದಲ್ಲಿ ಕಾರು ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗೋಣಿಕೊಪ್ಪ ಸಮೀಪದ ಕೈಕೇರಿಯಲ್ಲಿ ನಡೆದಿದೆ.

ನಂದೆಟ್ಟಿರ ಸದನ್ ಚಂಗಪ್ಪ (೪೯) ಮೃತಪಟ್ಟ ದುರ್ದೈವಿ. ಸೋಮವಾರ ಮಧ್ಯಾಹ್ನ ಕೈಕೇರಿ ಭಗವತಿ ದೇವಸ್ಥಾನದ ಸಮೀಪದಲ್ಲಿ ಈ ಘಟನೆ ನಡೆದಿದ್ದು, ವೀರಾಜಪೇಟೆಯಿಂದ ಮೈಸೂರು ಭಾಗಕ್ಕೆ ತೆರಳುತ್ತಿದ್ದ ಲಾರಿ ಹಾಗೂ ಹುದಿಕೇರಿಯಿಂದ ಬಿಟ್ಟಂಗಾಲಕ್ಕೆ ತೆರಳುತ್ತಿದ್ದ ಕಾರು

(ಮೊದಲ ಪುಟದಿಂದ) ನಡುವೆ ಅಪಘಾತ ಸಂಭವಿಸಿದೆ. ಮೃತಪಟ್ಟ ನಂದೆಟ್ಟಿರ ಸದನ್ ಹುದಿಕೇರಿಯಲ್ಲಿ ತನ್ನ ಪತ್ನಿಯ ಸಂಬAಧಿಕರ ಮನೆಯವರ ತಿಥಿ ಕರ್ಮಾಂತರವನ್ನು ಮುಗಿಸಿ ೧೪ ವರ್ಷದ ಮಗ ಶ್ರೇಯಸ್ಸ್ ಮಾದಪ್ಪನೊಂದಿಗೆ ಮನೆಯತ್ತ ಸಂಚರಿಸುತ್ತಿದ್ದರು. ಲಾರಿ ಗುದ್ದಿದ ರಭಸಕ್ಕೆ ಕಾರು ಚಾಲನೆ ಮಾಡುತ್ತಿದ್ದ ಸದನ್‌ಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃಪಟ್ಟಿದ್ದಾರೆ. ಕಾರಿನಲ್ಲಿದ್ದ ಶ್ರೇಯಸ್ಸ್ ಮಾದಪ್ಪ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಾರಿ ಚಾಲಕ ಬಸವರಾಜ್ ಎಂಬಾತನನ್ನು ಗೋಣಿಕೊಪ್ಪ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಡಿಕೇರಿ ಸುಬ್ರಮಣ್ಯ ನಗರದ ನಿವಾಸಿಯಾಗಿರುವ ಸದನ್ ಚಂಗಪ್ಪ ಅವರ ಅಂತ್ಯಕ್ರಿಯೆ ತಾ. ೧೪ರಂದು (ಇಂದು) ಬೆಳಿಗ್ಗೆ ೯ ಗಂಟೆಗೆ ಮಡಿಕೇರಿಯ ಕೊಡವ ಸಮಾಜ ರುದ್ರಭೂಮಿಯಲ್ಲಿ ನೆರವೇರಲಿದೆ. -ಎನ್.ಎನ್. ದಿನೇಶ್