ನಾಪೋಕ್ಲು, ಫೆ. ೧೩: ಸಮೀಪದ ಮೂಟೇರಿ - ನಾಪೋಕ್ಲು ಸಂಪರ್ಕ ರಸ್ತೆಯ ಮೂಟೇರಿಯಲ್ಲಿ ಭಾರೀ ಗಾತ್ರದ ಮರವೊಂದು ಸೋಮವಾರ ಮುರಿದು ಬಿದ್ದ ಪರಿಣಾಮ ರಸ್ತೆ ಸಂಪರ್ಕ ಕಡಿತಗೊಂಡು ಸಂಚಾರಕ್ಕೆ ಅಡಚಣೆಯಾಯಿತು. ಮರ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡಾಗಿದ್ದು, ಗ್ರಾಮ ಕತ್ತಲೆಯಲ್ಲಿ ಮುಳುಗಿದೆ. ಸಂಜೆ ವೇಳೆಗೆ ಮರದ ಒಂದು ಭಾಗವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು ಗ್ರಾಮಸ್ಥರು ಕೋಕೇರಿ- ಕೊಳಕೇರಿ- ಬೊಮ್ಮಂಜಿಕೆರಿ ಪರ್ಯಾಯ ಮಾರ್ಗವನ್ನು ಅವಲಂಬಿಸಿ ಪ್ರಯಾಸದಿಂದ ಪಟ್ಟಣಕ್ಕೆ ಬರುವಂತಾಯಿತು.

ಮರ ಮುರಿದು ಬಿದ್ದ ಪರಿಣಾಮ ಎಂಟು ವಿದ್ಯುತ್ ಕಂಬಗಳು ತುಂಡಾಗಿವೆ, ಕೂಡಲೇ ಸಿಬ್ಬಂದಿಯನ್ನು ಕರೆಸಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲಾಗಿದೆ. ಎರಡು ದಿನಗಳಲ್ಲಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಕಿರಿಯ ಅಭಿಯಂತರ ಹರೀಶ್ ತಿಳಿಸಿದ್ದಾರೆ.

- ದುಗ್ಗಳ.