ಅನಿಲ್ ಎಚ್.ಟಿ.
ನನಗೀಗ ಯಾವುದೇ ಹೆದರಿಕೆ ಇಲ್ಲವೇ ಇಲ್ಲ.. ಏಕೆಂದರೆ ನನ್ನ ಬಳಿ ಈಗ ಏನೇನೂ ಇಲ್ಲ... ಎಲ್ಲವೂ ಮಣ್ಣಿನಡಿ ಹೋಗಿಬಿಟ್ಟಿದೆ…
ಹೀಗೆಂದು ಹೇಳಿದಾಕೆ ೬೪ ವರ್ಷದ ಸಿರಿಜಾನ್ ಅಗ್ಬಸ್.... ಈಕೆ ಟರ್ಕಿಯಲ್ಲಿ ಶತಮಾನದ ಭೂಕಂಪದಲ್ಲಿ ಬದುಕುಳಿದ ಭಾಗ್ಯವಂತರಲ್ಲಿ ಒಬ್ಬಳು.
ಟರ್ಕಿಯ ಶ್ರೀಮಂತರ ಸಾಲಿಗೆ ಸೇರಿದ್ದ ಈಕೆಯ ಬಂಗಲೆ.. ಕಳೆದ ವಾರ ಸಂಭವಿಸಿದ ಭೂಕಂಪದಡಿ ಮಣ್ಣಿನಡಿ ಸೇರಿಬಿಟ್ಟಿತು. ಬಂಗಲೆಯೊಳಗಡೆ ನಿದ್ರಿಸುತ್ತಿದ್ದ ಈಕೆ ಭೂಮಿ ಕಂಪಿಸುತ್ತಿದ್ದAತೆಯೇ ತಡಮಾಡದೇ ಹೊರಗೋಡಿ ಬಂದು ಪ್ರಾಣ ಉಳಿಸಿಕೊಂಡಳು. ಆದರೆ ಈಕೆಯ ಮಗ, ಸೊಸೆ, ಮೊಮ್ಮಕ್ಕಳು, ಕೆಲಸದವರಿಗೆ ಈ ಅದೃಷ್ಟ ಇರಲಿಲ್ಲ. ತನ್ನವರನ್ನು ಮಣ್ಣಿನಡಿ ಹುಡುಕುವ ತ್ರಾಣವೂ ಇಲ್ಲದೇ ಈಕೆ ಈಗ ಕೊರೆಯುವ ಛಳಿ ತಾಳಲಾರದೇ ರಸ್ತೆ ಬದಿಯಲ್ಲಿ ಕಾಗದಕ್ಕೆ ಬೆಂಕಿ ಹಾಕಿಕೊಂಡು ಮೈ ಬಿಸಿ ಮಾಡಿಕೊಳ್ಳುತ್ತಿದ್ದಾಳೆ. ತಾನು ಕೂಡಿಟ್ಟಿದ್ದ ಅಷ್ಟೂ ಹಣ, ಐಶ್ವರ್ಯವೆಲ್ಲವೂ ಮಣ್ಣು ಪಾಲಾಯಿತು ಎಂದು ನೋವಿನಲ್ಲಿ ಸಿರಿಜಾನ್ ಹೇಳಿಕೊಳ್ಳುತ್ತಿದ್ದಾಳೆ.
ಹೀಗಾಗಿಯೇ ಈಕೆ ಹೇಳಿದ್ದು.. ನನ್ನ ಬಳಿ ಕದ್ದುಬಿಡುತ್ತಾರೆ ಎಂದು ಹೆದರಿಕೊಳ್ಳುವಂಥದ್ದು ಈಗ ಏನೇನೂ ಉಳಿದಿಲ್ಲ.. ಎಲ್ಲವೂ ನನ್ನಿಂದ ಭೂಕಂಪ ಕಿತ್ತುಕೊಂಡು ಹೋಗಿದೆ.
ಟರ್ಕಿ ಎಂಬ ದೇಶದಲ್ಲಿ ಈಗ ದೊಡ್ಡ ದೊಡ್ಡ ಕಟ್ಟಡಗಳೇ ಇಲ್ಲ.. ಮುಗಿಲು ಚುಂಬಿಸುವ ರೀತಿಯಲ್ಲಿ.. ಟರ್ಕಿಯ ಅಹಂನ ಸಂಕೇತದAತೆ ಕಾಣುತ್ತಿದ್ದ ಕಟ್ಟಡಗಳೆಲ್ಲಾ ನಿಮಿಷ ಮಾತ್ರದಲ್ಲಿ ಒಂದೇ ಒಂದು ಕಂಪನಕ್ಕೆ ಧರಾಶಾಹಿಯಾಗಿದೆ. ಅದರೊಳಗಿದ್ದವರೆಲ್ಲಾ ಮಣ್ಣಿನಡಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
ಸದ್ಯದ ಅಂದಾಜಿನ ಪ್ರಕಾರ ಟರ್ಕಿಯ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ ೩೦ ಸಾವಿರವನ್ನೂ ಮೀರಿದೆ. ಇಷ್ಟಕ್ಕೂ ಸತ್ತವರು, ಕಾಣೆಯಾದವರ ಖರಾರುವಕ್ಕು ಲೆಕ್ಕ ಹೇಳುವವರು ಯಾರು.. ಬದುಕುಳಿದವರಿಗೆ ಭವಿಷ್ಯದ ಜೀವನದ ಚಿಂತೆ.. ಕಳೆದುಹೋದ ಅಮೂಲ್ಯ ಸಂಪತ್ತಿಗಿAತ ಪ್ರಾಣ ಕಳೆದುಕೊಳ್ಳಲಿಲ್ಲ ಎಂಬುದೇ ಸಮಾಧಾನ..
ಭೂಕಂಪ ಪ್ರಬಲವಾಗಿ ಬೃಹತ್ ಕಟ್ಟಡಗಳೇ ಧರೆಗುರುಳಿದ್ದರೂ ಈ ಕಟ್ಟಡದ ಅವಶೇಷಗಳಡಿ ಇನ್ನೂ ಕೆಲವರು ಉಸಿರು ಬಿಗಿಹಿಡಿದು ಬದುಕುಳಿದಿದ್ದಾರೆ.
೧೧೦ ಗಂಟೆಗಳ ಬಳಿಕವೂ ಜೀವ ಕಾಪಾಡಿಕೊಂಡವರು ಇತಿಹಾಸ ಬರೆದಿದ್ದಾರೆ. ಕೆಲವರು ತಮ್ಮದೇ ಮೂತ್ರ ಕುಡಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ತಮಗೇನಾಗುತ್ತಿದೆ ಎಂಬ ಅರಿವೂ ಇಲ್ಲದೇ ಬಿದ್ದ ಕಟ್ಟಡಗಳಡಿಯಲ್ಲಿ... ಗಂಟಲು ಆರಿ ಹೋಗಿ ಅಳಲೂ ಆಗದೇ ಕಿರುಚಲೂ ಸಾಧ್ಯವಾಗದೇ ಪಿಳಿ ಪಿಳಿ ಕಣ್ಣು ಬಿಡುತ್ತಾ ಸಹಾಯಕ್ಕೆ ಧಾವಿಸಿದ ಕಾರ್ಯಪಡೆಯವರಿಗೆ ಕಂಡು ಬರುತ್ತಿದ್ದಾರೆ. ಇಂಥ ಅನೇಕ ಭಾಗ್ಯಶಾಲಿಗಳನ್ನು ರಕ್ಷಣಾ ಪಡೆಗಳ ಸದಸ್ಯರು ಅವಶೇಷಗಳಿಂದ ಹೊರತೆಗೆದಿದ್ದಾರೆ.
ಟರ್ಕಿ, ಸಿರಿಯಾ ದೇಶಗಳಲ್ಲಿ ಸಂಭವಿಸಿದ ಈ ಶತಮಾನದ ಅತ್ಯಂತ ದೊಡ್ಡ ದುರಂತ ಎಂದೇ ಬಣ್ಣಿತವಾದ ಭೂಕಂಪಕ್ಕೆ ಈ ದೇಶಗಳು ನಲುಗಿವೆೆ. ಆಂತರಿಕ ಕಿತ್ತಾಟದಿಂದ ನಾಶದ ಹಾದಿಯಲ್ಲಿದ್ದ ಟರ್ಕಿ, ಸಿರಿಯಾಗಳು ಈಗ ಪಾಕೃತಿಕ ವಿಕೋಪದಿಂದ ಸರ್ವನಾಶಕ್ಕೆ ತಲುಪಿಬಿಟ್ಟಿವೆ. ಹೀಗಿದ್ದರೂ ಟರ್ಕಿ, ಸಿರಿಯಾಗಳಿಗೆ ಜಗತ್ತಿನ ಎಲ್ಲಾ ದೇಶಗಳೂ ಸಹಾಯ ಹಸ್ತ ನೀಡಲು ಮುಂದಾಗಿವೆÉ. ಭೂಕಂಪ ಪೀಡಿತ ಸಿರಿಯಾ, ಟರ್ಕಿಯಲ್ಲಿ ಈಗ ವಿವಿಧ ದೇಶಗಳ ರಕ್ಷಣಾ ಪಡೆಗಳು ಕಾರ್ಯಾಚರಣೆ ಕೈಗೊಂಡಿವೆÉ. ಈ ಮೂಲಕ ನಾವೆಲ್ಲಾ ಒಂದೇ ಎಂಬ ಮಾನವೀಯತೆಯ ಸಂದೇಶ ಸಾರಿವೆ.
ಟರ್ಕಿ, ಸಿರಿಯಾ ದೇಶಗಳೊಂದಿಗೆ ಸಂಬAಧ ಸರಿ ಇಲ್ಲದೇ ಹೋದರೂ ಈ ದೇಶಗಳು ಭೂಕಂಪದಡಿ ನಲುಗಿದ ಸಂದರ್ಭ ಭಾರತ ಸಹಾಯಕ್ಕೆ ವಿಳಂಬರಹಿತವಾಗಿ ಮುಂದಾಗಿ ಗಮನ ಸೆಳೆದಿದೆ. ಈವರೆಗೂ ಟರ್ಕಿ, ಸಿರಿಯಾ ದೇಶಗಳಿಗೆ ಭಾರತದಿಂದ ೮ ವಿಮಾನಗಳು ನೆರವಿನ ಸಾಮಾಗ್ರಿಗಳನ್ನು ಹೊತ್ತೊಯ್ದಿವೆ.
ಮುಖ್ಯವಾಗಿ, ತಾತ್ಕಾಲಿಕ ಆಸ್ಪತ್ರೆಗಳನ್ನು ಭಾರತದ ರಕ್ಷಣಾ ತಂಡ ಟರ್ಕಿ, ಸಿರಿಯಾಗಳಲ್ಲಿ ಸ್ಥಾಪಿಸಿದೆ. ಕೇವಲ ೬ ಗಂಟೆಗಳ ಅವಧಿಯಲ್ಲಿ ಭಾರತೀಯ ರಕ್ಷಣಾ ಪಡೆಗಳಿಂದ ನಿರ್ಮಿಸಲ್ಪಟ್ಟ ಈ ಆಸ್ಪತ್ರೆಯಲ್ಲಿ ಭಾರತೀಯ ಸೇನಾ ಪಡೆಯ ಪರಿಣಿತ ವೈದ್ಯರ ತಂಡ ಹಗಲೂ ರಾತ್ರಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸುವ ಕೆಲಸ ಮಾಡುತ್ತಿದೆ. ಒಂದು ಆಸ್ಪತ್ರೆಯಲ್ಲಿ ಏಕಕಾಲಕ್ಕೆ ೮೦೦ ಮಂದಿಗೆ ಚಿಕಿತ್ಸೆ ನೀಡಲಾಗುವ ಸೌಲಭ್ಯವನ್ನು ಭಾರತದ ತಾತ್ಕಾಲಿಕ ಆಸ್ಪತ್ರೆಗಳು ಹೊಂದಿವೆÉ. ಆಸ್ಪತ್ರೆಯಲ್ಲಿ ಜೀವ ಉಳಿಸಿಕೊಂಡವರೋರ್ವರು ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದು, ಧನ್ಯವಾದ ಹಿಂದೂಸ್ಥಾನ್, ನೀವು ನಮ್ಮೊಂದಿಗಿದ್ದೀರಿ ಎಂಬುದೇ ನಮಗೆ ಸಂತೋಷ ಮತ್ತು ನೆಮ್ಮದಿ ಎಂದಿದ್ದಾರೆ. ಭಾರತೀಯ ಸೇನೆಯ ಮಹಿಳಾ ಸಿಬ್ಬಂದಿಗೆ ಕೆನ್ನೆಗೆ ಟರ್ಕಿಯ ಸಂತ್ರÀ್ರಸ್ಥೆಯೋರ್ವಳು ಮುತ್ತು ನೀಡುವ ಫೋಟೋ ಸಾಕಷ್ಟು ವೈರಲ್ ಆಗಿದೆ.
ಶಸ್ತçಚಿಕಿತ್ಸೆ ಕೂಡ ಈ ಆಸ್ಪತ್ರೆಯ ಆಪರೇಷನ್ ವಿಭಾಗದಲ್ಲಿ ನಡೆಯುತ್ತಿದೆ. ಮಣ್ಣಿನ ಅವಶೇಷಗಳಡಿ ಸಿಲುಕಿಕೊಂಡವರನ್ನು ಗುರುತಿಸಲು ನವನವೀನ ತಂತ್ರಜ್ಞಾನಗಳೂ ವಿಫಲವಾದ ಹಿನೆÀ್ನಲೆಯಲ್ಲಿ ಭಾರತೀಯ ಸೇನೆಯ ಪರಿಣಿತ ಶ್ವಾನ ಪಡೆಗಳು ಈ ಕೆಲಸ ಮಾಡುತ್ತಿದೆ. ಈಗಾಗಲೇ ಶ್ವಾನಪಡೆ ಅನೇಕರನ್ನು ಗುರುತಿಸಿ ಜೀವ ಉಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ.
ಆಹಾರ ಪದಾರ್ಥಗಳು, ಔಷಧಿಗಳು, ರಕ್ಷಣಾ ಸಾಮಾಗ್ರಿಗಳು, ಯಂತ್ರೋಪಕರಣಗಳು. ಹೀಗೆ ಒಂದೇ ಎರಡೇ ಭಾರತದ ೮ ವಿಮಾನಗಳಲ್ಲಿ ಕೋಟಿಗಟ್ಟಲೆ ಮೌಲ್ಯದ ಸಾಮಾಗ್ರಿಗಳು ಟರ್ಕಿ, ಸಿರಿಯಾದ ಸಂತ್ರಸ್ಥರಿಗೆ ತಲುಪುತ್ತಿದೆ.
ಅಂದAತೆ, ಭಾರತ ತನ್ನ ಈ ನೆರವಿನ ಕಾರ್ಯಾಚರಣೆಗೆ ಇಟ್ಟ ಅರ್ಥಪೂರ್ಣ ಹೆಸರು.. ಆಪರೇಷನ್ ದೋಸ್ತ್..!!
ಭಾರತದ ಈ ನೆರವಿನ ಉದಾರತೆಗೆ ಟರ್ಕಿಯ ರಾಯಭಾರಿ ಟ್ವೀಟ್ ಮೂಲಕ ಕೃತಜ್ಞತೆ ಹೇಳಿದ ರೀತಿಯೂ ಅನನ್ಯ.. ಆಪತ್ತಿಗಾದವನೇ ನಿಜವಾದ ಗೆಳೆಯ. ಭಾರತ ತನ್ನ ಗೆಳೆತನವನ್ನು ಈ ನೆರವಿನ ಮೂಲಕ ನಿರೂಪಿಸಿದೆ.!
ವಿಪರ್ಯಾಸ ನೋಡಿ.. ಟರ್ಕಿ, ಸಿರಿಯಾದಲ್ಲಿ ಭೂಕಂಪನಕ್ಕೀಡಾದ ಬಹುತೇಕ ಕಟ್ಟಡಗಳಿಗೆ ವಿಮೆ ಮಾಡಿಸಿಲ್ಲ. ಹೀಗಾಗಿ ಇಂಥ ಕಟ್ಟಡಗಳಲ್ಲಿ ವಾಸವಿದ್ದವರಿಗೂ ಈಗ ಪರಿಹಾರದ ವಿಮೆ ದೊರಕುವುದಿಲ್ಲ. ಟರ್ಕಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿತ್ತು. ಹೀಗಾಗಿ ಅನಧಿಕೃತ ಕಟ್ಟಡಗಳು ವಿಮೆಯ ನಿಯಮ ಪಾಲಿಸದೇ ತಲೆ ಎತ್ತಿದ್ದವು. ಅಧಿಕೃತ ಕಟ್ಟಡಗಳು ಹೌದು... ಅಲ್ಲ ಎಂಬುದನ್ನು ತಿಳಿದುಕೊಳ್ಳಲು ಹೋಗದೇ ಇಂಥ ಕಟ್ಟಡಗಳಲ್ಲಿ ಅನೇಕರು ವಾಸವಾಗಿದ್ದರು. ಇದೀಗ ಕಟ್ಟಡಗಳು ಕುಸಿದು ಬಿದ್ದ ಮೇಲೆ ವಿಮೆಯೂ ದೊರಕದ ಮೇಲೆ ತಮ್ಮ ತಲೆಗೆ ತಮ್ಮದೇ ಕೈ ಇಟ್ಟುಕೊಳ್ಳುವಂಥ ದುಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ. ಒಂದೇ ಒಂದು ಕಂಪನಕ್ಕೆ ಮೊದಮೊದಲು ಬಿದ್ದ ಬಹುತೇಕ ಕಟ್ಟಡಗಳು ಅತ್ಯಂತ ಕಳಪೆ ಮಟ್ಟದಲ್ಲಿ ನಿರ್ಮಾಣವಾಗಿದ್ದವು ಎಂದು ಈಗ ಪರಿಣಿತರು ಹೇಳುತ್ತಿದ್ದಾರೆ. ಬದುಕೇ.. ಕಟ್ಟಡದಂತೆ ಸರ್ವನಾಶವಾದ ಮೇಲೆ ಹಳೇ ತಪ್ಪುಗಳನ್ನು ಹೇಳಿ ಯಾರಿಗೆ ಏನು ಪ್ರಯೋಜನ ಎಂದು ರಸ್ತೆಗೆ ಬಿದ್ದವರು ಪ್ರಶ್ನಿಸುತ್ತಿದ್ದಾರೆ.
ಶ್ರೀಮಂತ, ಬಡವ, ಉದ್ಯಮಿ, ಕಾರ್ಮಿಕ, ದೇಶ, ವಿದೇಶ, ಆ ಧರ್ಮ, ಈ ಧರ್ಮ.. ಇವೆಲ್ಲಾ ಬೇಧಗಳು ಟರ್ಕಿ, ಸಿರಿಯಾದಲ್ಲಿ ಈಗ ಕಾಣುತ್ತಿಲ್ಲ. ಅಲ್ಲಿ ಈಗ ಕಾಣುತ್ತಿರುವುದು ಒಂದೇ ಅಂಶ.. ಜೀವಂತ ಉಳಿದವರು.. ಕಟ್ಟಡಗಳಡಿ ಕೊನೇ ಉಸಿರೆಳೆದವರು... ಅಷ್ಟೇ..
ಸುಮಾರು ೬೦೦ ಬೃಹತ್ ಕಟ್ಟಡಗಳು ಟರ್ಕಿಯಲ್ಲಿ ಕುಸಿದು ಬಿದ್ದಿದ್ದರೆ, ೧೫೭೦ ಕಟ್ಟಡಗಳು ವಾಸಕ್ಕೆ ಯೋಗ್ಯವಿಲ್ಲದಂತೆ ಭಾಗಶಃ ಹಾನಿಗೊಳಗಾಗಿದೆ. ಒಂದು ಕಡೆ ಕಟ್ಟಡಗಳು ಮಣ್ಣು ಪಾಲಾಗಿರುವ ದುರಂತ ಸಂಭವಿಸಿದ್ದರೆ ಮತ್ತೊಂದು ಕಡೆ ಇರುವ ಕಟ್ಟಡದೊಳಕ್ಕೆ ನುಗ್ಗುತ್ತಿರುವ ಜನರು ದರೋಡೆಕೋರರಂತೆ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ಕೊಂಡೊಯ್ಯುತ್ತಿದ್ದಾರೆ. ಇದರಿಂದಾಗಿ ಅನೇಕ ಮಾಲ್ಗಳು, ಅಂಗಡಿಗಳ ಮಾಲೀಕರು ಇಂಥ ಘಟನೆಗಳಿಂದ ವಿಚಲಿತರಾಗಿ ಅಂಗಡಿ ಖಾಲಿ ಮಾಡಲೂ ಆಗದೇ ನಿಸ್ಸಾಹಾಯಕರಾಗಿ ತಮ್ಮದೇ ಆಸ್ತಿಯ ದೋಚುವಿಕೆಯನ್ನು ಕಣ್ಣೆದುರೇ ನೋಡುವಂತಾಗಿದೆ. ಟರ್ಕಿಯಲ್ಲಿ ಸೈನಿಕರು, ಪೊಲೀಸರು ಕೂಡ ಸಿಕ್ಕಸಿಕ್ಕಲ್ಲಿ ದೋಚುವಂಥ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಅವರೆಲ್ಲಾ ಈಗ ಭವಿಷ್ಯದ ಜೀವನ ನೋಡುತ್ತಿದ್ದಾರೆಯೇ ವಿನಾ ನಿಯಮ, ಕಾನೂನುಗಳು ಮಣ್ಣುಪಾಲಾಗಿಬಿಟ್ಟಿವೆÉ. ಹೀಗಾಗಿ ಕಳ್ಳತನ ಕಣ್ಣೆದುರೇ ಸಂಭವಿಸುತ್ತಲೇ ಇದ್ದರೂ ಯಾರ ಬಳಿ ಹೇಳಿಕೊಳ್ಳುವುದು ಎಂಬ ನೋವು ವರ್ತಕ ಸಮುದಾಯದ್ದು.
ಟರ್ಕಿ, ಸಿರಿಯಾ ದೇಶಗಳ ಸ್ಮಶಾನಗಳು ಸಾವಿರಾರು ಮೃತದೇಹಗಳಿಂದ ತುಂಬಿಕೊAಡಿವೆÉ. ಮಣ್ಣಿನಡಿ ಸತ್ತವರ ದೇಹಗಳನ್ನು ಸಮಾಧಿ ಮಾಡಲು ಸಾವಿರಾರು ಜನರು ಸ್ವಯಂ ಪ್ರೇರಣೆಯಿಂದ ಮುಂದಾಗಿದ್ದಾರೆ. ಇದು ದೇವರು ಮೆಚ್ಚುವ ಕೆಲಸ. ಹೀಗಾಗಿಯೇ ನಾವು ಗೌರವಯುತ ಅಂತ್ಯಸAಸ್ಕಾರಕ್ಕೆ ಸಹಾಯ ಮಾಡುತ್ತಿದ್ದೇವೆ ಎಂದು ಅನೇಕರು ತಿಳಿಸಿದ್ದಾರೆ. ಸ್ಮಶಾನಗಳಲ್ಲಿಯೂ ಸಮಾಧಿ ಮಾಡಲು ಜಾಗವಿಲ್ಲದೆ ಸಿಕ್ಕಸಿಕ್ಕಲ್ಲಿ ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಈ ದೇಶಗಳಲ್ಲಿ ಸೃಷ್ಟಿಯಾಗಿದೆ. ಟರ್ಕಿಯಲ್ಲಿ ಇದೇ ಮೊದಲ ಬಾರಿ ಭೂಕಂಪ ಉಂಟಾಗಿರುವುದೇನಲ್ಲ. ಈ ಮೊದಲು ೧೯೩೯ ರಲ್ಲಿ ಸಂಭವಿಸಿದ ಭೂಕಂಪನಕ್ಕೆ ೩೩ ಸಾವಿರ ಮಂದಿ ಬಲಿಯಾಗಿದ್ದರು. ಈಗ ಈ ಸಂಖ್ಯೆ ೫೦ ಸಾವಿರ ತಲುಪುವ ಸಾಧ್ಯತೆ ಹೆಚ್ಚಾಗಿದೆ.
ನವತಾಂತ್ರಿಕತೆ, ಆಧುನಿಕ ತಂತ್ರಜ್ಞಾನಗಳು ಎಷ್ಟೇ ನಾಗಾಲೋಟದಲ್ಲಿ ಸಾಗಿರಲಿ.. ಪ್ರಕೃತಿಯ ಮುಂದೆ ಎಲ್ಲವೂ ನಶ್ವರ ಎಂಬುದನ್ನು ಮತ್ತೊಮ್ಮೆ ಈ ಕಂಪನ ಸಾಬೀತುಪಡಿಸಿದೆ. ಪವಿತ್ರವಾದ ಭೂಮಿ ಅಲುಗಾಡಿದರೆ ಅಷ್ಟೇ ಮತ್ತೆ....!