ಮಡಿಕೇರಿ, ಫೆ. ೧೩: ಕುಟ್ಟ ಸರಕಾರಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಸೋಮವಾರದ “ಶಕ್ತಿ” ಯಲ್ಲಿ ಪ್ರಕಟಗೊಂಡ ವರದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್ ಅವರು ಈ ಕೆಳಗಿನ ಪ್ರತಿಕ್ರಿಯೆ ನೀಡಿದ್ದಾರೆ.
``ಕುಟ್ಟದಲ್ಲಿ ವೈದ್ಯರುಗಳ ಕೊರತೆಯಿದೆ. ಅಲ್ಲಿ ಕಾರ್ಯ ನಿರ್ವಹಿಸಲು ವೈದ್ಯರುಗಳೇ ಬರುತ್ತಿಲ್ಲ. ಜೊತೆಯಲ್ಲಿ ಪ್ರಯೋಗಾಲಯ ತಜ್ಞರ ಕೊರತೆಯೂ ಇದೆ. ಇದೀಗ ಬದಲಿ ವ್ಯವಸ್ಥೆ ಮಾಡಲಾಗುವುದು. ವೀರಾಜಪೇಟೆ ಆಸ್ಪತ್ರೆಯಲ್ಲಿ ಮೂವರು ಪ್ರಯೋಗಾಲಯ ತಜ್ಞರಿದ್ದು, ಅವರ ಪೈಕಿ ಓರ್ವರನ್ನು ತಾತ್ಕಾಲಿಕವಾಗಿ ಕುಟ್ಟ ಆಸ್ಪತ್ರೆಗೆ ನಿಯೋಜಿಸಲಾಗುತ್ತದೆ. ಬಳಿಕ ಹೊರ ಗುತ್ತಿಗೆ ಆಧಾರದಲ್ಲಿ ಖಾಯಂ ತಜ್ಞರನ್ನು ನೇಮಿಸಲು ಪ್ರಯತ್ನಿಸ ಲಾಗುತ್ತದೆ. ಎಕ್ಸ್ರೇ ತಜ್ಞರು ಇಲ್ಲದಿರುವುದರಿಂದ ವಾರಕ್ಕೊಮ್ಮೆ ಯಾದರೂ ಗೋಣಿಕೊಪ್ಪಲು ಆಸ್ಪತೆಯಲ್ಲಿರುವ ತಜ್ಞರನ್ನು ನಿಯೋಜಿಸಲು ಪ್ರಯತ್ನಿಸಲಾಗುತ್ತದೆ, ಇನ್ನು ಆಸ್ಪತ್ರೆೆ ಆವರಣದಲ್ಲಿ ಕುರುಚಲು ಗಿಡ ಬೆಳೆÀದು ಮಾಲಿನ್ಯವಾಗಿರುವುದಕ್ಕೆ ಆಸ್ಪತ್ರೆಯ ರಕ್ಷಾ ಸಮಿತಿಯೇ ಜವಾಬ್ದಾರಿಕೆ ಹೊರಬೇಕಿದೆ. ಅವರಿಗೆ ಅದಕ್ಕಾಗಿ ಹಣವೂ ಲಭ್ಯವಿದ್ದು ಆ ಕೆಲಸ ಅವರು ಮಾಡಬೇಕಾಗಿದೆ” ಎಂದು ಡಾ. ಆನಂದ್ ಮಾಹಿತಿಯಿತ್ತಿದ್ದಾರೆ.