ಮಡಿಕೇರಿ, ಫೆ. ೧೩: ಮಡಿಕೇರಿ- ಚೆಟ್ಟಳ್ಳಿ ರಸ್ತೆ ದುರಸ್ತಿಗೆ ಈ ಹಿಂದೆಯೇ ರೂ. ೪ ಕೋಟಿ ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಕೂಡ ನಡೆದಿದೆ. ಆದರೆ, ಟೆಂಡರ್ ಗುತ್ತಿಗೆ ಪಡೆದುಕೊಂಡಿದ್ದ ದಿನೇಶ್ ಎಂಬವರು ಕೆಲಸವನ್ನು ಸಕಾಲಕ್ಕೆ ಪ್ರಾರಂಭಿಸದೆ ವಿಳಂಬವಾಗಿದೆ. ಇದೀಗ ಶುಕ್ರವಾರದಿಂದ ಕೆಲಸÀವನ್ನು ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ “ಶಕ್ತಿ”ಗೆ ತಿಳಿಸಿದ್ದಾರೆ. ಅಗತ್ಯ ಇರುವ ಕೆಲವೆಡೆ ಸಿಮೆಂಟ್ ರಸ್ತೆಯನ್ನು ಮಾಡಲಾಗುವುದು ಎಂದಿದ್ದಾರೆ.
ಇತ್ತೀಚೆಗೆ ಚೆಟ್ಟಳ್ಳಿಯ ಮಣಿ ಉತ್ತಪ್ಪ ಮೊದಲಾದವರು ಈ ಕಾಮಗಾರಿ ಕೈಗೊಳ್ಳಲು ಆಗ್ರಹಿಸಿರುವುದಕ್ಕೆ ಶಾಸಕ ರಂಜನ್ ಈ ಪ್ರತಿಕ್ರಿಯೆ ನೀಡಿದ್ದಾರೆÀ.