ಮಡಿಕೇರಿ, ಫೆ. ೯: ಮಡಿಕೇರಿಯಿಂದ ಮೇಕೇರಿ ಮೂಲಕ ವೀರಾಜಪೇಟೆಗೆ ಹಾದು ಹೋಗುವ ರಸ್ತೆ ಬದಿಯಲ್ಲಿ ಪ್ರತಿನಿತ್ಯ ರಾಶಿ ರಾಶಿ ಕಸ ಸುರಿಯುತ್ತಿರುವ ಕುರಿತು ‘ಶಕ್ತಿ’ಯಲ್ಲಿ ಸುದ್ದಿ ಪ್ರಕಟಗೊಂಡ ಹಿನ್ನೆಲೆ ಎಚ್ಚೆತ್ತುಕೊಂಡ ಮಡಿಕೇರಿ ನಗರಸಭೆ ಕಸ ವಿಲೇವಾರಿಗೊಳಿಸಿ, ಕಸ ಹಾಕಿದವರನ್ನು ಪತ್ತೆ ಹಚ್ಚಿ ದಂಡ ವಿಧಿಸಿದೆ.
ಚೀಲ ಮತ್ತು ಬಾಕ್ಸ್ಗಳಲ್ಲಿ ತ್ಯಾಜ್ಯ ತುಂಬಿಕೊAಡು ವಾಹನಗಳಲ್ಲಿ ಬಂದು ರಸ್ತೆಯ ಬದಿಯಲ್ಲೇ ಕಸ ಸುರಿಯುತ್ತಿದ್ದು, ಮೆಡಿಕಲ್ ತ್ಯಾಜ್ಯ, ಮಾಂಸದ ಅಂಗಡಿಯ ತ್ಯಾಜ್ಯ, ಹೊಟೇಲ್ನ ವಸ್ತುಗಳು, ಪ್ಲಾಸ್ಟಿಕ್ ತಿಂಡಿ ಪೊಟ್ಟಣಗಳು, ಹಳೇ ಬಟ್ಟೆಗಳ ರಾಶಿ, ಮೂಟೆ ಕಟ್ಟಿ ಎಸೆದಿರುವ ಚೀಲ ಹೀಗೆ ಹತ್ತು ಹಲವು ಬಗೆಯ ತ್ಯಾಜ್ಯಗಳನ್ನು ಇಲ್ಲಿ ಪ್ರತಿನಿತ್ಯ ಎಸೆಯಲಾಗುತ್ತಿತ್ತು.
ಗುರುವಾರ ಬೆಳಗ್ಗೆ ೮ ಗಂಟೆಯಿAದಲೇ ಕಸ ವಿಲೇವಾರಿಗೆ ಕ್ರಮಕೈಗೊಂಡ ಮಡಿಕೇರಿ ನಗರಸಭೆಯ ೨೨ನೇ ವಾರ್ಡ್ನ ಸದಸ್ಯೆ ಸಬಿತಾ, ನಗರಸಭೆಯ ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ರಸ್ತೆ ಬದಿಯ ತ್ಯಾಜ್ಯವನ್ನು ಶುಚಿಗೊಳಿಸಿ ಟ್ರಾö್ಯಕ್ಟ್ರ್ ಮೂಲಕ ವಿಲೇವಾರಿಗೊಳಿಸಿದರು. ಕೆಲವು ಕಸದ ಚೀಲಗಳಲ್ಲಿ ಇದ್ದ ಅಂಗಡಿ ಬಿಲ್, ವಿದ್ಯುತ್ ಬಿಲ್, ಆನ್ಲೈನ್ ಆರ್ಡರ್ಗಳ ರಿಸಿಪ್ಟ್, ಕೆಲ ಹೋಂಸ್ಟೇ ಯವರಿಗೆ ಸೇರಿದ ವಿಸಿಟಿಂಗ್ ಕಾರ್ಡ್ಗಳು, ಬಿಲ್ ಬುಕ್ಗಳ ವಿಳಾಸ ಮತ್ತು ಪೋನ್ ನಂಬರನ್ನು ಆಧರಿಸಿ ದಂಡ ವಿಧಿಸಲಾಯಿತು.
ರಸ್ತೆ ಬದಿ ಎಸೆದಿದ್ದ ಕಸದ ಬ್ಯಾಗ್ವೊಂದರಲ್ಲಿ ಕರೆಂಟ್ ಬಿಲ್, ಪ್ರತಿಷ್ಠಿತ ಸೇವಾ ಸಂಸ್ಥೆಯೊAದರ ಮಾಹಿತಿ ಕಾರ್ಡ್ ಆಧರಿಸಿ ಆ ವ್ಯಕ್ತಿಯನ್ನು ಫೋನ್ ಮಾಡಿ ಸ್ಥಳಕ್ಕೆ ಕರೆಸಿಕೊಳ್ಳಲಾಯಿತು. ಈ ಸಂದರ್ಭ ತಪ್ಪೊಪ್ಪಿಕೊಂಡ ಮೂರ್ನಾಡಿನ ಗಣೇಶ್ ಎಂಬವರಿಗೆ ೨,೦೦೦ ರೂಪಾಯಿಗಳ ದಂಡವನ್ನು ನಗರಸಭೆ ಸಿಬ್ಬಂದಿಗಳ ಮೂಲಕ ವಿಧಿಸಲಾಯಿತು. ಇದರೊಂದಿಗೆ ಮೇಕೇರಿಯ ಹೋಂಸ್ಟೇಯೊAದರ ವಿಳಾಸವಿರುವ ತ್ಯಾಜ್ಯವೂ ಪತ್ತೆಯಾಗಿ, ಹೋಂಸ್ಟೇ ಬಳಿ ತೆರಳಿದ ನಗರಸಭೆ ಸದಸ್ಯೆ ಸಬಿತಾ ಮತ್ತು ಸಿಬ್ಬಂದಿಗಳು ಅಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಈ ಕುರಿತು ಮೇಕೇರಿ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದರು. ಇಷ್ಟೇ ಅಲ್ಲದೇ ಕಸದ ರಾಶಿಯಲ್ಲಿ ಕಾಟಕೇರಿಯ ವ್ಯಕ್ತಿಯೊಬ್ಬರಿಗೆ ಸೇರಿದ ಬಿಲ್, ಮಡಿಕೇರಿಯ ಪೆನ್ಶನ್ ಲೇನ್ನ ವ್ಯಕ್ತಿಯೊಬ್ಬರ ಆನ್ಲೈನ್ ಆರ್ಡರ್ನ ಬಿಲ್ಗಳು ಪತ್ತೆಯಾಗಿವೆ. ಈ ಸಂದರ್ಭ ನಗರಸಭೆಯ ಸಿಬ್ಬಂದಿಗಳಾದ ನಿಶಾ ಮತ್ತು ಸತ್ಯನಾರಾಯಣ ಇದ್ದರು.