ವೀರಾಜಪೇಟೆ, ಫೆ. ೮: ಮದುವೆಗೆಂದು ತೆರಳಿ ಹಿಂದಿರುಗುತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿ ಏಳು ಮಂದಿ ದಾರುಣವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಇವರ ಕುಟುಂಬದವರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ಪರಿಹಾರ ವಿತರಿಸಿದರು. ಶಾಸಕರ ಕಚೇರಿಯಲ್ಲಿ ಕುಟುಂಬದ ಸದಸ್ಯರಿಗೆ ಸರಕಾರದಿಂದ ಮಂಜೂರಾದ ಪರಿಹಾರದ ಚೆಕ್ ವಿತರಣೆ ಮಾಡಿದರು.
ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿಗಳು ದಿನಾಂಕ ೨೦೨೨ ರ ಏಪ್ರಿಲ್ ೨೦ ರಂದು ಮದುವೆಗೆಂದು ತೆರಳಿ ಹಿಂದಿರುಗುವ ವೇಳೆ ಹುಣಸೂರು ಹೊರ ವಲಯದ ಮುಖ್ಯ ರಸ್ತೆಯಲ್ಲಿ ರಸ್ತೆ ಬದಿಯಲ್ಲಿದ್ದ ಮರ ಒಂದಕ್ಕೆ ವಾಹನ ಡಿಕ್ಕಿಯಾಗಿ ಏಳು ಮಂದಿ ಸ್ಥಳದಲ್ಲೇ ಮೃತ ಹೊಂದಿದ್ದರು. ಮೃತರ ಕುಟುಂಬ ವರ್ಗ ಬಡ ಕೂಲಿ ಕಾರ್ಮಿಕರಾಗಿದ್ದು ಆರ್ಥಿಕವಾಗಿ ಹಿಂದುಳಿದಿರುವ ಹಿನ್ನೆಲೆಯಲ್ಲಿ ಅರ್ಜಿದಾರರ ಕೋರಿಕೆಯ ಮೇರೆಗೆ ಮುಖ್ಯ ಮಂತ್ರಿಗಳ ಪರಿಹಾರ ನಿಧಿಯಿಂದ ಮೇಕೂರು ಹೊಸ್ಕೇರಿ ಗ್ರಾಮದ ನಿವಾಸಿಗಳಾದ ರಾಜೇಶ್ ಹೆಚ್.ಎಸ್., ಅನಿಲ್ ಎಂ.ಆರ್., ದಿಲೀಪ್ ಅಲಿಯಾಸ್ ಪಿಲೀಫ್ ಮತ್ತು ಜಿ.ಎ. ಬಾಬು ಅವರುಗಳ ಎರಡು ಲಕ್ಷ ರೂಗಳಂತೆ ಕುಟುಂಬಕ್ಕೆ ಪರಿಹಾರ ಚೆಕ್ ನೀಡಲಾಯಿತು.
ಮೃತರಾದ ಏಳು ವ್ಯಕ್ತಿಗಳಲ್ಲಿ ಮೂವರು ಕಾರ್ಮಿಕ ಇಲಾಖೆಯಲ್ಲಿ ನೋಂದಾಣೆಯಾಗಿದ್ದರು. ಅವರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಪರಿಹಾರ ಧನ ಸಹಾಯ ಒದಗಿದೆ. ಉಳಿದಂತೆ ನಾಲ್ಕು ಮಂದಿಯ ಕುಟುಂಬ ವರ್ಗದವರಿಗೆ ಸರ್ಕಾರದ ವತಿಯಿಂದ ಪರಿಹಾರ ಧನವನ್ನು ನೀಡಲಾಗಿದೆ ಎಂದು ಶಾಸಕರು ಹೇಳಿದರು. ಈ ಸಂದರ್ಭದಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಿ.ಎಂ. ನಿಶಾನ್, ಪುತ್ತಂ ಪ್ರದೀಪ್ ಪಾಲಿಬೆಟ್ಟ, ಮತ್ತಿತರರು ಹಾಜರಿದ್ದರು.