ಶ್ರೀಮAಗಲ, ಫೆ. ೮: ಶ್ರೀಮಂಗಲ ಫ್ರೆಂಡ್ಸ್ ಕ್ರಿಕೆಟರ್ಸ್ ಆಯೋಜಿಸಿದ್ದ ಗ್ರಾಮೀಣ ಮಟ್ಟದ ೩ ದಿನಗಳ ಕ್ರಿಕೆಟ್ ಪಂದ್ಯಾಟವು ಸಮಾಪ್ತಿಗೊಂಡಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಸುಮಾರು ೧೫ ತಂಡಗಳು ಭಾಗವಹಿಸಿದ್ದವು. ಶ್ರೀಮಂಗಲ ಕೊಡವ ಸಮಾಜ ಮೈದಾನದಲ್ಲಿ ನಡೆದ ಈ ಪಂದ್ಯಾಟವನ್ನು ಉದ್ಘಾಟಿಸಿದ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಗ್ರಾಮೀಣ ಮಟ್ಟದಲ್ಲಿ ಕ್ರೀಡಾಪಟುಗಳಿಗೆ ಇನ್ನಷ್ಟು ಪ್ರೋತ್ಸಾಹ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ಪಂದ್ಯಾಟದಲ್ಲಿ ಸಿವೈಸಿ ಕುಟ್ಟ ತಂಡವು ಮೊದಲ ಸ್ಥಾನ ಪಡೆದುಕೊಂಡರೆ, ಹೈಸೊಡ್ಲೂರು ಸ್ಟೆçöÊಕರ್ಸ್ ಹಾಗೂ ಟೀಮ್ ಎಬಿಡಿ ಶ್ರೀಮಂಗಲ ಕ್ರಮವಾರಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡವು.

ಕಾರ್ಯಕ್ರಮದಲ್ಲಿ ಸ್ಥಳೀಯರಾದ ಪೆಮ್ಮಂಡ ರಾಜ, ಆಲೆಮಾಡ ಸೋಮಣ್ಣ, ಕಾಳಿಮಾಡ ಸೀಮಾ ಪ್ರಶಾಂತ್, ಚೋನಿರ ರತನ್ , ಅಜ್ಜಮಾಡ ಬೋಪಣ್ಣ , ಮಾಧಿರ ಸುಧಿ ಹಾಗೂ ಇತರರು ಭಾಗಹಿಸಿದ್ದರು.