ಪೊನ್ನಂಪೇಟೆ, ಫೆ. ೭: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಕರ ಸಂಘಟನೆ ವತಿಯಿಂದ ಬೆಂಗಳೂರು ಯಲಹಂಕ ಕೆ.ಬಿ.ಎಂ. ಬ್ಲಾಸಮ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಕೊಡಗಿನ ಐವರು ನಿಕಟಪೂರ್ವ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ೨೦೨೨-೨೩ನೇ ಸಾಲಿನ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುಶಾಲನಗರ ತಾಲೂಕಿನ ಬಿ.ಎಸ್. ಸತ್ಯನಾರಾಯಣ, ಪೊನ್ನಂಪೇಟೆ ತಾಲೂಕಿನ ತಿರುನೆಲ್ಲಿಮಡ ಜೀವನ್, ಸೋಮವಾರಪೇಟೆ ತಾಲೂಕಿನ ಎಸ್.ಎಂ. ಸುರೇಶ್, ಮಡಿಕೇರಿ ತಾಲೂಕಿನ ಯು.ಎಸ್. ರೇಖಾ, ವೀರಾಜಪೇಟೆ ತಾಲೂಕಿನ ವಿ.ಟಿ. ವೆಂಕಟೇಶ್ ಅವರು ಶಿಕ್ಷಣ ಸೇವಾರತ್ನ ಪ್ರಶಸ್ತಿ ಪಡೆದುಕೊಂಡರು.ಈ ಸಂದರ್ಭ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಅಧ್ಯಕ್ಷರಾದ ಡಾ. ಹುಲಿಕಲ್ ನಟರಾಜು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜಂಟಿ ನಿರ್ದೇಶಕರಾದ ಎಂ. ರೇವಣಸಿದ್ಧಪ್ಪ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು ಇದರ ಸಂಸ್ಥಾಪಕ ಅಧ್ಯಕ್ಷರಾದ ಪಿ. ಮಹೇಶ್, ಚಲನಚಿತ್ರ ನಟಿ ಅನು ಅಯ್ಯಪ್ಪ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಅಧ್ಯಕ್ಷ ಜಿ. ಸದಾನಂದ ಸ್ವಾಮಿ, ಚಲನಚಿತ್ರ ನಿರ್ದೇಶಕ ನೀನಾಸಂ ಮಂಜು, ವ್ಯಕ್ತಿತ್ವ ವಿಕಸನ ತರಬೇತುದಾರ ವಿ.ಆರ್. ಸತ್ಯನಾರಾಯಣ, ಶಿಕ್ಷಕರಾದ ಪಿ.ಆರ್. ಪ್ರದೀಸ್, ತಿರುನೆಲ್ಲಿಮಡ ಧನು ಜೀವನ್, ಪವನ್ ಪೂಣಚ್ಚ, ಕಳ್ಳೇಂಗಡ ಕಾನು ಕಾರ್ಯಪ್ಪ, ನಿಸರ್ಗ ಆನಂದ್ ಹಾಜರಿದ್ದರು.