ಸೋಮವಾರಪೇಟೆ, ಫೆ. ೭: ಇಲ್ಲಿನ ವಿನಾಯಕ ಗೆಳೆಯರ ಬಳಗದ ವತಿಯಿಂದ ತಾ.೧೧ ಮತ್ತು ೧೨ರಂದು ಸ್ಥಳೀಯ ಮಹಿಳಾ ಸಮಾಜದಲ್ಲಿ ರಾಜ್ಯಮಟ್ಟದ ಕೇರಂ ಪಂದ್ಯಾಟ ಆಯೋಜಿಸಲಾಗಿದೆ ಎಂದು ಬಳಗದ ಅಧ್ಯಕ್ಷ ರಾಮು ತಿಳಿಸಿದ್ದಾರೆ.

ಕೇರಂ ಡಬಲ್ಸ್ ಹಾಗೂ ಸಿಂಗಲ್ಸ್ ವಿಭಾಗದಲ್ಲಿ ಪಂದ್ಯಾವಳಿ ನಡೆಯಲಿದ್ದು, ಹೆಚ್ಚಿನ ಮಾಹಿತಿಗೆ ಮೊ:೯೪೪೮೩೭೧೮೪೧, ೯೯೮೦೧೧೯೩೧೪ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.