ನಾಪೋಕ್ಲು, ಫೆ. ೭: ನಾಪೋಕ್ಲು - ವೀರಾಜಪೇಟೆ ಮುಖ್ಯರಸ್ತೆಯ ಕೊಳಕೇರಿಯಿಂದ ಕೋಕೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ದುಸ್ಥಿತಿಯಿಂದ ಕೂಡಿದ್ದು ನಡೆದಾಡಲು ಸಾಧ್ಯವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ರಸ್ತೆಯನ್ನು ಕೂಡಲೇ ದುರಸ್ತಿ ಮಾಡುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು ತಪ್ಪಿದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ಕೋಕೇರಿ-ಕೊಳಕೇರಿ ಸಂಪರ್ಕ ರಸ್ತೆಯಲ್ಲಿ ಹಲವು ವರ್ಷಗಳಿಂದ ರಸ್ತೆ ಕಾಮಗಾರಿ ನಡೆದಿಲ್ಲ ಹಲವು ವರ್ಷಗಳಿಂದ ರಸ್ತೆ ಡಾಂಬರೀಕರಣ ಕಂಡಿಲ್ಲ. ವಾಹನ ಸಂಚಾರವಾಗಲಿ ನಡೆದಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋಗಳು ಕೂಡ ಬಾಡಿಗೆಗೆ ಸಿಗುತ್ತಿಲ್ಲ. ಜನಪ್ರತಿನಿಧಿಗಳಿಗೆ ತಿಳಿಸಿದರೆ ಭರವಸೆ ಮಾತ್ರ ದೊರೆತಿದೆ ಎಂದು ಪ್ರತಿಭಟನಾಕಾರರ ಪರವಾಗಿ ಗ್ರಾಮಸ್ಥ ಹರೀಶ್ ಆರೋಪಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ರಜಾಕ್ ಮಾತನಾಡಿ ಕೊಳಕೇರಿ-ಕೋಕೇರಿ ಸಂಪರ್ಕ ರಸ್ತೆಯ ದುರಸ್ತಿಗಾಗಿ ನಾಲ್ಕೆöÊದು ಬಾರಿ ಪ್ರತಿಭಟನೆ ನಡೆಸಲಾಗಿದೆ. ಗ್ರಾಮಸ್ಥರೇ ಹೊಂಡ-ಗುAಡಿಗಳನ್ನು ಮುಚ್ಚಿ ರಸ್ತೆ ದುರಸ್ತಿಪಡಿಸಿದ್ದಾರೆ. ಸಂಬAಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಹೇಳಿದರು. ಈ ಸಂದರ್ಭ ನಾಪೋಕ್ಲು ಪೊಲೀಸ್ ಠಾಣೆ ಎಸ್.ಐ. ಗೋಪಾಲಕೃಷ್ಣ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಸದಸ್ಯ ಕೆ.ವೈ. ಅಶ್ರಫ್, ಗ್ರಾಮಸ್ಥರಾದ ಎಂ.ಎ.ಮೊಯ್ದು, ಎಂ.ಎA. ಮಹಮ್ಮದ್, ಎಂ.ಎA. ಇಸ್ಮಾಯಿಲ್, ಟಿ.ಪಿ.ಬಶೀರ್, ಅಸಿನಾರ್, ಎಂ.ಎ.ಅಲಿ, ಎಂ.ಎ. ಫಲ್ಹಾಲು, ಎಂ.ಯು.ಲತೀಫ್, ಎಂ.ಯು. ಮಮ್ಮು, ಕೆ.ಎ. ಸಲಾಮು, ಎಂ.ವೈ. ಸಂಶುದ್ದೀನ್, ಅಬ್ದುರಹ್ಮಾನ್, ಅರುಣಾ ಕೊಕೇರಿ, ಗಿರೀಶ್ ಕೊಕೇರಿ, ನಂದ ಕೊಕೇರಿ, ಅಬ್ದುಲ್ ರಹಮಾನ್ ಕೊಳಕೇರಿ, ಟಿ ಸಿ.ಲವ ಕೊಳಕೇರಿ ಮತ್ತಿತರರು ಪಾಲ್ಗೊಂಡಿದ್ದರು.