ಗ್ರಾಮಸ್ಥರ ಅಸಮಾಧಾನ

ಕೂಡಿಗೆ, ಫೆ. ೭: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳ ವಿಷಯಕ್ಕೆ ಸಂಬAಧಿಸಿದAತೆ ಅಧ್ಯಕ್ಷರ ಮತ್ತು ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದಂತಾಗಿದೆ. ನಡೆದ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ನಂತರ ಸಭೆಯನ್ನು ನಡೆಸಿ ಎಂಬುದು ೮ ಮಂದಿ ಸದಸ್ಯರ ವಾದವಾದರೆ, ಮೊದಲ ಮಾಸಿಕ ಸಭೆ ನಡೆಯಲಿ ನಂತರ ಕಾಮಗಾರಿಗಳ ವೀಕ್ಷಣೆ ಮಾಡುತ್ತೇನೆ ಎಂದು ಅಧ್ಯಕ್ಷರ ವಾದವಾಗಿದೆ. ಪರಿಣಾಮ ಮೂರು ತಿಂಗಳಿನಿAದ ಗ್ರಾಮ ಪಂಚಾಯಿತಿ ಮಾಸಿಕ ಸಭೆಯೆ ನಡೆದಿಲ್ಲ. ಸಭೆಯ ದಿನಾಂಕವನ್ನು ಮೂರು ಬಾರಿ ನಿಗದಿ ಮಾಡಿ ಸಭೆಗೆ ಸದಸ್ಯರು ಸೇರಿದರೂ ಅಧ್ಯಕ್ಷರ ಮತ್ತು ಸದಸ್ಯರ ನಡುವೆ ಹೊಂದಾಣಿಕೆ ಕೊರತೆಯಿಂದ ಮಾತಿಗೆ ಮಾತು ಬೆಳೆದು ಮೂರು ಬಾರಿ ಸಭೆ ಮುಂದೂಡಲ್ಪಟ್ಟಿದ್ದು, ಅಭಿವೃದ್ಧಿಗೆ ಅಡ್ಡಿಯುಂಟಾಗಿದೆ.

ಕಳೆದ ಮೂರು ತಿಂಗಳಿನಿAದ ಸಾವಿರಾರು ಸಾರ್ವಜನಿಕರ ಅರ್ಜಿಗಳು ಮಾಸಿಕ ಸಭೆಗೆ ಬಂದಿವೆ. ಸಾರ್ವಜನಿಕರು ಸ್ಥಳೀಯ ರೈತರ ದೃಢೀಕರಣ ಪತ್ರದ ಬಗ್ಗೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳು ತಮ್ಮ ಮನೆಗಳ ನಿರ್ಮಾಣಕ್ಕೆ ಅನುಮತಿ ಪತ್ರವನ್ನು ಕೋರಿ ಅರ್ಜಿ ಮತ್ತು ೯/೧೧ ಹಕ್ಕುಪತ್ರಕ್ಕಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಮಾಸಿಕ ಸಭೆಗಳು ನಡೆಯದ ಕಾರಣ ಅರ್ಜಿಗಳಿಗೆ ಸಂಬAಧಿಸಿದAತೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಅರ್ಜಿದಾರರು ಪತ್ರಿಕೆಯ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕಳೆದ ಮೂರು-ನಾಲ್ಕು ತಿಂಗಳುಗಳ ಹಿಂದೆ ಸರಕಾರದಿಂದ ಬಿಡುಗಡೆಯಾದ ಗ್ರಾಮ ಪಂಚಾಯಿತಿ ಸದಸ್ಯರ ಅನುದಾನ ಮತ್ತು ೧೫ನೇ ಹಣಕಾಸು ಯೋಜನೆ ಅಡಿಯಲ್ಲಿ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದ್ದರೂ ಕೆಲ ಕಾಮಗಾರಿಗಳು ನಡೆಯದೆ ಬಾಕಿ ಉಳಿದಿವೆ.

ಕಳೆದ ಮೂರು ವರ್ಷಗಳಿಂದ ೬ ಗ್ರಾಮ ಸಭೆಗಳು ನಡೆದು, ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ನೂರಾರು ಅಹವಾಲುಗಳನ್ನು ಮತ್ತು ಕಾಮಗಾರಿಗಳು ನಡೆಯಬೇಕಾದ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಅರ್ಜಿಗಳ ಪ್ರಗತಿಗೆ ಪೂರಕವಾಗಿ ಮಾಸಿಕ ಸಭೆಯಲ್ಲಿ ಚರ್ಚೆ ನಡೆಸಿ ಕಾಮಗಾರಿ ಕೈಗೊಳ್ಳುವ ಸಂಬAಧ ಗ್ರಾ.ಪಂ. ಮಾಸಿಕ ಸಭೆಯ ಆಡಳಿತ ಮಂಡಳಿಯ ತೀರ್ಮಾನ ಮುಖ್ಯವಾಗಿರುತ್ತದೆ. ಅವುಗಳನ್ನು ಅಭಿವೃದ್ಧಿ ಅಧಿಕಾರಿ ಕಾರ್ಯಗತಗೊಳಿಸಬೇಕಾಗುತ್ತದೆ. ಈ ನಡುವೆ ೬ ಗ್ರಾಮ ಸಭೆಗಳಲ್ಲಿ ಕೈಗೊಂಡ ಯಾವುದೇ ನಿರ್ಣಯ ಇದುವರೆಗೂ ಕಾರ್ಯಗತವಾಗಿಲ್ಲ. ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆ, ಶಾಸಕರ ಅನುದಾನದ ಕಾಮಗಾರಿಗಳು ಅಲ್ಪ ಪ್ರಮಾಣದಲ್ಲಿ ನಡೆದರೂ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಡುವೆ ಹೊಂದಾಣಿಕೆ ಇಲ್ಲದೆ ಕಳೆದ ೧ ವರ್ಷದಿಂದ ಗುತ್ತಿಗೆದಾರರಿಗೆ ಗ್ರಾ.ಪಂ. ಅನುದಾನದ ಬಿಲ್ ಪಾವತಿಯಾಗದೆ ಗುತ್ತಿಗೆದಾರರು ಸಹ ಗ್ರಾ.ಪಂ.ಗೆ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಿಗೆ ಗ್ರಾ.ಪಂ. ಆಡಳಿತ ಮಂಡಳಿಯ ನಿರ್ಲಕ್ಷö್ಯದಿಂದಾಗಿ ಅನುಷ್ಠಾನಗೊಂಡ ಯೋಜನೆಗಳು ಕುಂಠಿತಗೊAಡು ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.

ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಅಭಿವೃದ್ಧಿ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಕೂಡಿಗೆ ಗ್ರಾ.ಪಂ.ನಲ್ಲಿ ಉಂಟಾಗಿರುವ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಥವಾ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ