ಮಡಿಕೇರಿ, ಫೆ. ೭: ಸರಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಭತ್ತ ಮತ್ತು ರಾಗಿ (ಎಂಎಸ್‌ಪಿ ದರದಲ್ಲಿ) ಖರೀದಿಸುವ ಎಂಪಿಎAಸಿಯಲ್ಲಿರುವ ಕೇಂದ್ರಗಳಲ್ಲಿ ರೈತರಿಗೆ ಸಮಸ್ಯೆ ಎದುರಾಗುತ್ತಿದ್ದು, ಇದನ್ನು ಸರಿಪಡಿಸುವಂತೆ ಜಿಲ್ಲಾ ಸಾರ್ವಜನಿಕರ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.

ಈ ಬಗ್ಗೆ ಸಮಿತಿ ಅಧ್ಯಕ್ಷ ಎ.ಎಸ್. ಕಟ್ಟಿಮಂದಯ್ಯ ಹಾಗೂ ಪದಾಧಿಕಾರಿಗಳು ಕೃಷಿ ಸಚಿವರು, ಜಿಲ್ಲಾಧಿಕಾರಿ ಸೇರಿದಂತೆ ಶಾಸಕ ಬೋಪಯ್ಯ ಹಾಗೂ ಸುಜಾ ಕುಶಾಲಪ್ಪ ಅವರುಗಳಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸರಕಾರದ ಎಂಎಸ್‌ಪಿ ಖರೀದಿ ನಿಯಮದಂತೆ, ಪ್ರತೀ ರೈತರಿಂದ ಗರಿಷ್ಠ ೪೦ ಕ್ವಿಂಟಾಲ್ ಭತ್ತವನ್ನು ಖರೀದಿಸಲು ನಿಗದಿಪಡಿಸಲಾಗಿದೆ. ರೈತರು ನೋಂದಾಣಿ ಮಾಡಿದ ನಂತರ ಸ್ವಂತ ಖರ್ಚಿನಲ್ಲಿ ನಿಗದಿ ಪಡಿಸಿದ ಖರೀದಿ ಕೇಂದ್ರಕ್ಕೆ ಭತ್ತ ಮತ್ತು ರಾಗಿ ಸರಬರಾಜು ಮಾಡುವಂತೆ ತಮ್ಮ ಭಿತ್ತಿ ಪತ್ರದಲ್ಲಿ ಸೂಚಿಸಿದೆ. ಅದರಂತೆ ರೈತರು ಪೊನ್ನಂಪೇಟೆ ತಾಲೂಕು, ಗೋಣಿಕೊಪ್ಪ ಎಪಿಎಂಸಿ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡಲು ಹೋದಾಗ ಎಲ್ಲಾ ಕಾನೂನುಗಳು ಭಿನ್ನವಾಗಿದೆ.

ಈ ಖರೀದಿ ಕೇಂದ್ರದಲ್ಲಿ ೫೦ ಕೆ.ಜಿ. ಗೋಣಿಚೀಲದಲ್ಲಿ ೩೭ ಕೆ.ಜಿ.ಯಿಂದ ೪೦ ಕೆ.ಜಿ. ತೂಕದಷ್ಟು ಭತ್ತವನ್ನು ತುಂಬಿಸಿ ತರಲು ಸೂಚಿಸಲಾಗುತ್ತಿದೆ. ತೂಕ ಮಾಡಿದ ನಂತರ ಪ್ರತಿ ಚೀಲವನ್ನು ವಾಹನದಿಂದ ಇಳಿಸಲು ೭ ರೂಪಾಯಿ ಬಾಡಿಗೆ ನೀಡಬೇಕೆಂದು ಹಾಗೂ ಪ್ರತಿ ೪೦ ಕೆ.ಜಿ. ಭತ್ತದ ಚೀಲಕ್ಕೆ ೨ ಕೆ.ಜಿ. ಭತ್ತ ಕಡಿತಗೊಳಿಸುತ್ತಿರುವರು. ಇದು ಈ ಮೊದಲು ೧೦೦ ಕೆ.ಜಿ. (ಒಂದು ಕ್ವಿಂಟಾಲ್‌ಗೆ) ೨ ಕೆ.ಜಿ. ಮಾತ್ರ ಇತ್ತು ಇದನ್ನು ಪ್ರಶ್ನೆ ಮಾಡಿದರೆ ಸಿಬ್ಬಂದಿ ಉದ್ದಟತನದಿಂದ ನೀವುಗಳು ಕುಶಾಲನಗರ ಉಗ್ರಾಣಾಲಯಕ್ಕೆ ತೆಗೆದುಕೊಂಡು ಹೋಗಬೇಕೆಂದು ಹೇಳುತ್ತಿದ್ದಾರೆ. ಹಾಗೆಯೇ ಪ್ರಶ್ನೆ ಮಾಡಿದ ರೈತರ ಭತ್ತವನ್ನು ವಾಹನದಿಂದ ಇಳಿಸದೆ (Uಟಿಟoಚಿಜ) ಹೆಚ್ಚು ಸಮಯ ಕಾಯುವಂತೆ ಸತಾಯಿಸಲಾಗುತ್ತಿದೆ. ಸರಕಾರದ ನಿಯಮದಂತೆ ರೈತರು ತಮ್ಮ ಭತ್ತವನ್ನು ಎಪಿಎಂಸಿಗೆ ತಂದ ನಂತರ ಯಾವುದೇ ಖರ್ಚು ನೀಡಬೇಕಾಗಿಲ್ಲವೆಂದು ಸೂಚಿಸಲಾಗಿದೆ.

ಆದರೆ ರೈತರು ಇಲ್ಲಿ ಸಮಸ್ಯೆ ಎದುರಿಸುವಂತಾಗಿದೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ. ಇದಕ್ಕೆ ಸಂಬAಧಪಟ್ಟAತೆ, ಗೋಣಿಕೊಪ್ಪಲು ಎಪಿಎಂಎಸ್ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ತನಿಖೆ ನಡೆಸಿ ರೈತರಿಗೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಬೇಕಾಗಿ ಸಮಿತಿ ಆಗ್ರಹಿಸಿದೆ.