ಚೆಟ್ಟಳ್ಳಿ, ಫೆ. ೬: ಪುತ್ತೂರಿನ ಗಾನಸಿರಿ ಕಲಾ ಕೇಂದ್ರ ಆಯೋಜಿಸಿದ ಮಧುರ ಮಧುರವೀ ಕನ್ನಡ ಗಾಯನ ರಾಜ್ಯಮಟ್ಟದ ರಿಯಾಲಿಟಿ ಶೋನಲ್ಲಿ ಕೊಡಗಿನಿಂದ ಸ್ಪರ್ಧಿಸಿ ದ್ವಿತೀಯ ಸ್ಥಾನ ಪಡೆದು, ಗಾನಸಿರಿ ಸಂಗೀತ ರತ್ನ ಪ್ರಶಸ್ತಿ ಹಾಗೂ ಟ್ರೋಫಿ ನಗದು ಬಹುಮಾನವನ್ನು ಬಾಳೆಲೆಯ ಗಣಪತಿ ದೇವಸ್ಥಾನದ ಅರ್ಚಕ ವಿಷ್ಣುಮೂರ್ತಿ ಮತ್ತು ಚಂದ್ರಕಲಾ ದಂಪತಿ ಪುತ್ರ ಅನ್ವಿತ್ ಕುಮಾರ್ ಪಡೆದಿದ್ದಾರೆ. ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ಬಿ.ಸಿ.ಎ ವಿದ್ಯಾರ್ಥಿಯಾಗಿದ್ದು, ಸಂಗೀತವನ್ನು ಗುರುಗಳಾದ, ವತ್ಸಲಾ ನಾರಾಯಣ್ ಮತ್ತು ವಿದ್ವತ್ತನ್ನು ಮದ್ರಾಸಿನ ಬಾಲಸುಬ್ರಹ್ಮಣ್ಯಂ ಅಯ್ಯರ್ ಅವರಲ್ಲಿ ಅನ್ವಿತ್ ಕಲಿಯುತ್ತಿದ್ದಾರೆ.