ಕುಶಾಲನಗರ, ಫೆ. ೬: ಟಿಬೇಟಿಯನ್ ಬೌದ್ಧ ಭಿಕ್ಷÄಗಳು ಕುಶಾಲನಗರದಲ್ಲಿ ಸಾವಿರಾರು ಸಂಖ್ಯೆಯ ಮೀನು ಮರಿಗಳನ್ನು ಕಾವೇರಿ ನದಿಗೆ ಬಿಡುವ ಕಾರ್ಯಕ್ರಮ ಹಮ್ಮಿಕೊಂಡರು.
ಬೈಲುಕೊಪ್ಪೆ ಟಿಬೇಟಿಯನ್ ನಿರಾಶ್ರಿತ ಶಿಬಿರದ ಸೆರಾಕ್ಯಾಂಪ್‌ನ ಹಲವು ಲಾಮಾಗಳು ತಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಎಲ್ಲರ ಒಳಿತಿಗಾಗಿ ಪ್ರಾರ್ಥಿಸಿ, ಮೀನು ಮರಿಗಳನ್ನು ಕುಶಾಲನಗರ ಅಯ್ಯಪ್ಪ ಸ್ವಾಮಿದೇವಾಲಯ ಬಳಿ ಕಾವೇರಿ ನದಿಗೆ ಬಿಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡ ದೃಶ್ಯ ಕಂಡುಬAತು.