ಹೂಡಿಕೆದಾರರಿಗೆ ಕರ್ನಾಟಕವೇ ಮೊದಲ ಆಯ್ಕೆ: ಪ್ರಧಾನಿ ಮೋದಿ
ತುಮಕೂರು, ಫೆ. ೬: ಆಧ್ಯಾತ್ಮಿಕ ನೆಲೆಯಾಗಿರುವ ಕರ್ನಾಟಕದಲ್ಲಿ ಡ್ರೋನ್‌ನಿಂದ ತೇಜಸ್ ವಿಮಾನಗಳ ತಯಾರಿಕೆ ನಡೆಯುತ್ತಿದೆ. ಹೂಡಿಕೆದಾರರಿಗೆ ರಾಜ್ಯವೇ ಮೊದಲ ಆಯ್ಕೆಯಾಗಿದ್ದು, ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆಯಿಂದ ತುಮಕೂರು ಔದ್ಯೋಗಿಕ ಜಿಲ್ಲೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿ ಹೆಚ್‌ಎಎಲ್ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಲೋಕಾರ್ಪಣೆ ಹಾಗೂ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕ ಯುವ ಪ್ರತಿಭೆ, ಆವಿಷ್ಕಾರದ ತಾಣವಾಗಿದ್ದು, ಡಬಲ್ ಇಂಜಿನ್ ಸರ್ಕಾರ ರಾಜ್ಯದ ಪ್ರಗತಿಗಾಗಿ ಶ್ರಮಿಸುತ್ತಿದೆ. ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆಯಿಂದ ಸಾವಿರಾರು ಸಂಖ್ಯೆಯಲ್ಲಿ ಯುವ ಜನತೆಗೆ ಉದ್ಯೋಗ ದೊರೆಯಲಿದೆ. ಅಲ್ಲದೇ, ತುಮಕೂರು ಸುತ್ತಮುತ್ತ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ ಎಂದರು. ಕಳೆದ ೯ ವರ್ಷಗಳಲ್ಲಿ ಏರೋಸ್ಪೆಸ್ ಬೆಳವಣಿಗೆಯಾಗಿದೆ. ರಕ್ಷಣಾ ಉಪಕರಣಗಳ ರಫ್ತು ಪ್ರಮಾಣ ಹೆಚ್ಚಾಗಿದೆ. ಆಧುನಿಕ ಅಸಾಲ್ಟ್ ರೈಫಲ್‌ಗಳು, ವಿಮಾನ ವಾಹಕ ನೌಕೆ, ಯುದ್ಧ ವಿಮಾನಗಳವರೆಗೂ ದೇಶದಲ್ಲಿಯೇ ತಯಾರಿಸಲಾಗುತ್ತಿದೆ. ದೇಶದಲ್ಲಿಯೇ ರಕ್ಷಣಾ ಉಪಕರಣಗಳನ್ನು ತಯಾರಿಸಲಾಗುತ್ತಿದ್ದು, ಸೇನೆ ಕೂಡಾ ಬಳಸುತ್ತಿದೆ. ಹೆಚ್‌ಎಎಲ್ ರಕ್ಷಣೆಯಲ್ಲಿ ನಮ್ಮ ಸ್ವಾವಲಂಬನೆಯನ್ನು ಹೆಚ್ಚಿಸಲಿದೆ ಎಂದ ಪ್ರಧಾನಿ ಮೋದಿ, ನಮ್ಮ ರಕ್ಷಣೆಗಾಗಿ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು, ಆತ್ಮನಿರ್ಭರ್ ಮೂಲಕ ಹೆಲಿಕಾಪ್ಟರ್ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ೪ ಲಕ್ಷ ಕೋಟಿ ವ್ಯಾಪಾರ ವಹಿವಾಟು ನಡೆಯಲಿದೆ. ಹೆಚ್‌ಎಎಲ್ ಹೆಸರು ಬಳಸಿ ನಮ್ಮನ್ನು ಬೆದರಿಸಲು ಯತ್ನಿಸಿದರು. ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಸಂಸತ್ತಿನ ಹಲವು ಕೆಲಸದ ಸಮಯಗಳು ಅದಕ್ಕಾಗಿ ವ್ಯರ್ಥವಾಯಿತು. ಹೆಚ್‌ಎಎಲ್‌ನ ಹೆಲಿಕಾಪ್ಟರ್ ಫ್ಯಾಕ್ಟರಿ ಮತ್ತು ಅದರ ಹೆಚ್ಚುತ್ತಿರುವ ಶಕ್ತಿ ಸುಳ್ಳು ಆರೋಪ ಮಾಡಿದವರನ್ನು ಬಯಲು ಮಾಡಲಿದೆ ಎಂದು ಹೆಸರು ಹೇಳದೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
೧೨ ಕಿ.ಮೀ. ಉದ್ದದ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು
ಬೆಂಗಳೂರು, ಫೆ. ೬: ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದೆ. ನಾಯಂಡಹಳ್ಳಿ ಜಂಕ್ಷನ್‌ನಿAದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್‌ವರೆಗಿನ ಹೊರವರ್ತುಲ ರಸ್ತೆಗೆ ‘ಕರ್ನಾಟಕ ರತ್ನ’ ಪುನೀತ್ ರಾಜ್ ಕುಮಾರ್ ಹೆಸರು ಇಡಲು ರಾಜ್ಯ ಸರ್ಕಾರ ಗೆಜೆಟ್ ಹೊರಡಿಸಿದ್ದು, ರಸ್ತೆಯ ನಾಮಕರಣ ಕಾರ್ಯಕ್ರಮ ತಾ. ೭ ರಂದು ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್. ಅಶೋಕ, ಪದ್ಮನಾಭನಗರ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಅಂದು ಸಂಜೆ ೬ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆಯ ನಾಮಫಲಕ ಉದ್ಘಾಟಿಸಲಿದ್ದಾರೆ ಎಂದರು. ಬಿಬಿಎಂಪಿ ಆಯೋಜಿಸಲಿರುವ ಕಾರ್ಯಕ್ರಮದಲ್ಲಿ ನಟರಾದ ಡಾ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಉಪಸ್ಥಿತರಿದ್ದರು. ರಸ್ತೆ ನಾಮಕರಣ ಕಾರ್ಯಕ್ರಮದಲ್ಲಿ ಮಾರ್ಚ್ನಲ್ಲಿ ನಡೆಯಲಿರುವ ೧೪ನೇ ಬೆಂಗಳೂರು ಅಂರ‍್ರಾಷ್ಟಿçÃಯ ಚಲನಚಿತ್ರೋತ್ಸವದ ಲಾಂಛನವನ್ನೂ ಮುಖ್ಯಮಂತ್ರಿ ಅನಾವರಣ ಮಾಡಲಿದ್ದಾರೆ ಎಂದು ಆರ್. ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಭೀಕರ ಅಪಘಾತ: ಸವಾರ ದುರ್ಮರಣ
ಬೆಂಗಳೂರು, ಫೆ. ೬: ಶಾಸಕ ಹಲತಾಳು ಹಾಲಪ್ಪ ಪಾಸ್ ಹೊಂದಿದ್ದ ಇನೋವಾ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೃಪತುಂಗ ರಸ್ತೆಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಸರಣಿ ಅಪಘಾತ ಸಂಭವಿಸಿದ್ದು ಇನೋವಾ ಕಾರು ೨ ಬೈಕ್ ಹಾಗೂ ಎರಡು ಕಾರಿಗೆ ಡಿಕ್ಕಿ ಹೊಡೆದಿದೆ. ಇನ್ನು ಬೈಕ್‌ನಲ್ಲಿ ತೆರಳುತ್ತಿದ್ದ ಹೆಚ್‌ಎಸ್‌ಆರ್ ಲೇಔಟ್ ನಿವಾಸಿ ೩೯ ವರ್ಷದ ಮಾಜಿದ್ ಖಾನ್ ಎಂಬಾತ ಮೃತಪಟ್ಟಿದ್ದರೆ ಬೈಕ್ ಹಿಂಬದಿ ಕುಳಿತಿದ್ದ ರಿಯಾಜ್ ಕಾಲು ಮುರಿದಿದೆ. ಇನ್ನು ಗಾಯಾಳು ರಿಯಾಜ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸರಣಿ ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಲಸೂರು ಗೇಟ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿದ್ದು, ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಾ. ೭ ರಂದು ೧೦೮ ನಮ್ಮ ಕ್ಲಿನಿಕ್‌ಗೆ ಸಿಎಂ ಚಾಲನೆ
ಬೆಂಗಳೂರು, ಫೆ. ೬: ಆರೋಗ್ಯ ವಲಯದ ಮೂಲಸೌಕರ್ಯ ವೃದ್ಧಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ೧೦೮ ‘ನಮ್ಮ ಕ್ಲಿನಿಕ್'ಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾ. ೭ ರಂದು (ಇಂದು) ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ಮಹಾಲಕ್ಷ್ಮಿ ಬಡಾವಣೆಯ ಮಹಾಲಕ್ಷ್ಮಿಪುರ ವಾರ್ಡ್ನಲ್ಲಿ ಆರಂಭಿಸಿರುವ ನಮ್ಮ ಕ್ಲಿನಿಕ್‌ಅನ್ನು ಉದ್ಘಾಟಿಸಲಾಗುತ್ತಿದೆ. ಇದೇ ವೇಳೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆರಂಭವಾಗಿರುವ ಉಳಿದ ೧೦೭ ಕ್ಲಿನಿಕ್‌ಗಳಿಗೂ ಚಾಲನೆ ನೀಡಲಾಗುತ್ತದೆ. ಈ ದಿನದಿಂದ ಈ ಆರೋಗ್ಯ ಕೇಂದ್ರಗಳು ಜನಸೇವೆಗೆ ಮುಕ್ತವಾಗಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಡಿಸೆಂಬರ್ ೧೪, ೨೦೨೨ ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಧಾರವಾಡದ ಬೈರದೇವರಕೊಪ್ಪದಲ್ಲಿ ನಮ್ಮ ಕ್ಲಿನಿಕ್ ಅನ್ನು ಉದ್ಘಾಟಿಸುವ ಮೂಲಕ ರಾಜ್ಯದಲ್ಲಿ ಏಕಕಾಲಕ್ಕೆ ೧೦೦ ನಮ್ಮ ಕ್ಲಿನಿಕ್‌ಗಳಿಗೆ ವರ್ಚುವಲ್ ಮೂಲಕ ಚಾಲನೆ ನೀಡಿದ್ದರು.
ಖ್ಯಾತ ಚಿತ್ರ ಕಲಾವಿದ ಬಿಕೆಎಸ್ ವರ್ಮ ನಿಧನ
ಬೆಂಗಳೂರು, ಫೆ. ೬: ಖ್ಯಾತ ಅಂರ‍್ರಾಷ್ಟಿçÃÃಯ ಚಿತ್ರ ಕಲಾವಿದ ಬಿ.ಕೆ.ಎಸ್. ವರ್ಮ (೭೪) ಅವರು ಸೋಮವಾರ ಬೆಳಿಗ್ಗೆ ನಿಧನರಾದರು. ಅತ್ತಿಬೆಲೆ ಬಳಿಯ ಕರ್ನೂರಿನಲ್ಲಿ ೧೯೪೯ರಲ್ಲಿ ವರ್ಮ ಅವರು ಜನಿಸಿದ್ದರು. ವರ್ಮ ಸಾಧನೆಗೆ ರಾಜ್ಯ ಲಲಿತಕಲಾ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜೀವ್‌ಗಾಂಧಿ ಪ್ರಶಸ್ತಿ ಲಭಿಸಿದ್ದವು. ೨೦೧೧ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ವರ್ಮ ಅವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಬಿಕೆಎಸ್ ವರ್ಮಾ ಅವರ ಕಲಾಕೃತಿಗಳು ನಾಡಿನ ಗಡಿಯನ್ನೂ ಮೀರಿ ವಿಶ್ವವಿಖ್ಯಾತವಾಗಿದ್ದವು. ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ರಾಘವೇಂದ್ರ ಸ್ವಾಮಿಗಳ ಬೃಹತ್ ವರ್ಣಚಿತ್ರವನ್ನು ಇವರಿಂದಲೇ ಕೇಳಿ ಬರೆಸಿಕೊಂಡಿದ್ದರು. ರಜನಿಕಾಂತ್ ಅವರು ತಮ್ಮ ಚೆನ್ನೆöÊಯಲ್ಲಿರುವ ಮನೆಯಲ್ಲಿ ಸ್ವಾಮಿ ರಾಘವೇಂದ್ರರ ಒಂದು ಬೃಹತ್ ವರ್ಣಚಿತ್ರ ಇರಬೇಕೆಂದು ಬಯಸಿದ್ದರು. ಇದಕ್ಕೆ ಸೂಕ್ತ ಕಲಾವಿದರಿಗಾಗಿ ಅವರು ಹೆಚ್ಚೇನೂ ಹುಡುಕಾಡಿರಲಿಲ್ಲ. ವರ್ಮಾ ಅವರ ದೇವಾನುದೇವತೆಗಳ ಚಿತ್ರಗಳು ಅವರ ಮನಸ್ಸನ್ನು ಆಗಲೇ ಸೆಳೆದಿದ್ದುದರಿಂದ, ವರ್ಮಾ ಅವರಿಂದಲೇ ಆ ಚಿತ್ರ ಬರೆಸಲು ಮುಂದಾದರು. ರಜನಿಕಾಂತ್ ಅವರ ಒತ್ತಾಯಕ್ಕೆ ಮಣಿದಿದ್ದ ವರ್ಮಾ, ಚೆನ್ನೆöÊಯಲ್ಲಿದ್ದ ರಜನಿ ಮನೆಗೆ ಹೋಗಿ ಅಲ್ಲಿ ವರ್ಣಚಿತ್ರವನ್ನು ಬಿಡಿಸಿಕೊಟ್ಟು ಬಂದಿದ್ದರು.
ಲಾಹೌಲ್-ಸ್ಪಿತಿಯಲ್ಲಿ ಹಿಮಪಾತ: ಇಬ್ಬರು ಕಾರ್ಮಿಕರ ಸಾವು
ಹಿಮಾಚಲ ಪ್ರದೇಶ, ಫೆ. ೬: ಹಿಮಾಚಲ ಪ್ರದೇಶದ ಲಾಹೌಲ್ ಸ್ಪಿತಿ ಬುಡಕಟ್ಟು ಜಿಲ್ಲೆಯಲ್ಲಿ ಹಿಮಪಾತ ಸಂಭವಿಸಿದ್ದು ಪರಿಣಾಮ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಾರ್ಮಿಕರು ಸಾವನ್ನಪ್ಪಿದ್ದು ಓರ್ವ ಕಾರ್ಮಿಕ ಕಾಣೆಯಾಗಿದ್ದಾರೆ. ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದು ಎರಡೂ ಮೃತದೇಹಗಳನ್ನು ಹೊರತೆಗೆದಿದ್ದಾರೆ. ನಾಪತ್ತೆಯಾದ ಯುವಕ ನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮೃತ ಕಾರ್ಮಿಕರನ್ನು ನೇಪಾಳದ ನಿವಾಸಿಗಳಾದ ೧೯ ವರ್ಷದ ರಾಮ್ ಬುದ್ಧ ಮತ್ತು ಚಂಬಾ ನಿವಾಸಿ ರಾಕೇಶ್ ಎಂದು ಗುರುತಿಸಲಾಗಿದೆ. ಜಿಲ್ಲಾ ಕೇಂದ್ರ ಕೀಲಾಂಗ್‌ನಿAದ ೩೫ ಕಿ.ಮೀ. ದೂರದಲ್ಲಿರುವ ಶಿಕುನ್ಲಾ ಪಾಸ್ ಬಳಿ ಅಪಘಾತ ಸಂಭವಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಕ್ತಾರರ ಪ್ರಕಾರ, ಲಾಹೌಲ್ ಉಪವಿಭಾಗದ ದರ್ಚಾ-ಶಿಂಕುಲಾ ರಸ್ತೆಯ ಚಿಕಾ ಗ್ರಾಮದ ಬಳಿ ಭಾನುವಾರ ಸಂಜೆ ೪ ಗಂಟೆ ಸುಮಾರಿಗೆ ಹಿಮಪಾತವಾಗಿದೆ. ಈ ವೇಳೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಾರ್ಮಿಕರು ರಸ್ತೆಯಲ್ಲಿದ್ದ ಹಿಮ ತೆಗೆಯುತ್ತಿದ್ದರು. ಹಠಾತ್ ಹಿಮಕುಸಿತದಿಂದ ಸ್ಥಳದಲ್ಲಿ ಅಸ್ತವ್ಯಸ್ತವಾಗಿತ್ತು. ಕಾರ್ಮಿಕರ ಜೊತೆಗೆ ಸ್ನೋ ಕಟರ್ ಮತ್ತು ಯಂತ್ರೋಪಕರಣಗಳು ಸಹ ಹಿಮಪಾತಕ್ಕೆ ಸಿಲುಕಿದೆ.