ಗ್ರೀಕ್ ಸಾಹಿತ್ಯ ದಲ್ಲಿ ಗಿಲ್ಗಮೇಶನ ಉಲ್ಲೇಖವಿರು ವಂತೆ ಭಾರತದಲ್ಲಿ ನೈಗ ಮೇಷನ ಪುರಾಣವು ಕೂಡ ಇದೆ. ನೈಗ ಮೇಷನನ್ನು ಉತ್ತರ ಭಾರತದಲ್ಲಿ ಕಾಣಬಹು ದಾಗಿದೆ ಚಿತ್ರದಲ್ಲಿ ಕಾಣಿಸುವ ಎರಡು ಪ್ರಾಚೀನ ದ್ವಾರಪಾಲ ಶಿಲ್ಪಗಳನ್ನು ತೆಲಂಗಾಣದ ‘ಆಲಂಪುರ'ದ ವಸ್ತು ಸಂಗ್ರಹಾಲಯದಲ್ಲಿ ಇರಿಸ ಲಾಗಿದೆ. ಪ್ರಾಣಿಗಳ ಮುಖವನ್ನು ಹೊಂದಿರುವ ಈ ದ್ವಾರಪಾಲಕರನ್ನು ನೈಗಮೇಷ ಅಥವಾ ಹರಿನೈಗಮೇಶಿ ಎಂದು ಹೆಸರಿಸಲಾಗಿದೆ. ಇವರು ದೇವತೆಗಳ ಅಧಿಪತಿಯಾದ ಇಂದ್ರನ ಬಾಗಿಲು ಕಾಯುವವರು. ಇವರ ಪ್ರಸ್ತಾಪವು ದೇವಾಸುರ ಸಂಗ್ರಾಮದ ನಾಯಕತ್ವ ವಹಿಸಿ ತಾರಕಾಸುರನನ್ನು ವಧಿಸಿದ ಸ್ಕಂದನ ವಿಷಯದಲ್ಲೂ ಬಂದಿದೆ. ದಕ್ಷಿಣ ಭಾರತದಲ್ಲಿ ಕಂಡುಬರುವ ಮೇಕೆ ತಲೆಯ ಶಿಲ್ಪವೆಂದರೆ ಅದು ದಕ್ಷಬ್ರಹ್ಮನದು. ಇದು ಕೆಳದಿಯ ರಾಮೇಶ್ವರ ದೇವಾಲಯದಲ್ಲಿ ಕಾಣುತ್ತದೆ.

ನೈಗಮೇಷವೆಂದರೆ ಮೇಕೆಯ ಇಲ್ಲವೇ ಜಿಂಕೆಯ ತಲೆ ಹೊಂದಿರುವ ಎಂದು ವಿವರಗಳು ಲಭ್ಯವಾಗುತ್ತದೆ. ಇದು ಜೈನ ಮತ್ತು ಶೈವ ಪರಂಪರೆಗಳಲ್ಲೂ ಕಾಣಿಸುತ್ತದೆ. ಇದರ ಹೆಸರಿನ ಇತರ ರೂಪಗಳೆಂದರೆ ನೆಗಮೇಷ, ನೆಮೇಷ. ನೈಗಮೇಷಿನ್, ನೆಗಮೇಸಿ, ಹರಿನೆಗಮೇಸಿ ಇತ್ಯಾದಿ. ಕೊನೆಯ ಹೆಸರನ್ನು ನೋಡುವಾಗ ಇದು ಹರಿಣ ಮತ್ತು ಮೇಷಗಳ ಸಂಕ್ರಮಣವಿದ್ದAತೆ ಭಾಸವಾಗುತ್ತದೆ. ಮೇಕೆಯು ಕಾಮ ಹಾಗೂ ಸಂತಾನಗಳ ಸಂಕೇತವಾಗಿದೆ.

ಜೈನಧರ್ಮದಲ್ಲಿ ನೈಗಮೇಷನು ಸಂತಾನಪ್ರದನೆAದು ತಿಳಿಯಲಾಗಿದೆ. ಶ್ವೇತಾಂಬರ ಪಂಥದಲ್ಲಿ ನೇಮಿನಾಥ ಜೀವನ ಚರಿತೆಯಿದೆ. ಅದರಂತೆ ನೇಮಿನಾಥನ ಸೋದರ ಸಂಬAಧಿಯಾದ ಕೃಷ್ಣನು (ಈತನು ಹಿಂದೂ ದೇವತೆ ಕೃಷ್ಣ) ನೈಗಮೇಷನನ್ನು ಅರ್ಚಿಸಿ, ತನ್ನ ಎರಡನೇ ಪತ್ನಿಯಾದ ಸತ್ಯಭಾಮಳಿಂದ ಸಂತಾನಪಡೆಯಲು ಆಶಿಸಿದನು. ರುಕ್ಮಿಣಿಯಿಂದ ಜನಿಸಿದವನು ಮೊದಲ ಮಗ ಪ್ರದ್ಯುಮ್ನ. ಸತ್ಯಭಾಮೆಯೇ ನೈಗಮೇಷನನ್ನು ಪ್ರಾರ್ಥಿಸಿದಳೆಂದು ಹೇಳುವ ಇನ್ನೊಂದು ಆವೃತ್ತಿಯೂ ಪ್ರಚಲಿತದಲ್ಲಿದೆ. ಹಿಂದೂ ಪುರಾಣಗಳ ಅನ್ವಯ ನೈಗಮೇಷನು ಕಾರ್ತಿಕೇಯನ ಅವತಾರ ವೆಂದೇ ಹೇಳಲಾಗಿದೆ. ಕೆಲವೆಡೆಗಳಲ್ಲಿ ಆತನು ಸ್ಕಂದನ ಸೋದರನೆಂದೂ ತಿಳಿಯಲಾಗಿದೆ. ಆತನು ದುಷ್ಟಸಂಹಾರಕರ್ತ, ಸಂತಾನದಾಯಕನೆAಬ ಉಲ್ಲೇಖಗಳಿವೆ. ನೈಗಮೇಷನ ಶಿಲ್ಪಗಳು ಅಪರೂಪವೆನ್ನುವಂತಿದ್ದು, ಉತ್ತರ ಭಾರತದಲ್ಲಿ, ಅದರಲ್ಲೂ ಮೂರನೇ ಶತಮಾನದ ಕಾಲದಲ್ಲಿನ ವಿಗ್ರಹಗಳಿವೆ. ಮಥುರಾ ಪ್ರಾಂತದಲ್ಲಿ ಈ ಶಿಲ್ಪಗಳು ಕಾಣಸಿಗುತ್ತವೆ. ಸಾ.ಯು.ಪೂರ್ವ ೨ನೇ ಶತಮಾನಕ್ಕೆ ಸೇರಿದ ಸುಟ್ಟ ಜೇಡಿ ಮಣ್ಣಿನ ವಿಗ್ರಹಗಳು ಇವೆ. ಕ್ರಿ. ಶ. ೧ ಮತ್ತು ೩ನೆಯ ಶತಮಾನದ ಶಿಲ್ಪಗಳಲ್ಲಿ ನೈಗಮೇಷನಿಗೆ ಮೇಕೆಯ ತಲೆ, ಜೋಲು ಕಿವಿಗಳು, ಹಿಂಬಾಗಿದ ಕೋಡುಗಳಿರುವಂತೆ ತೋರಿಸಲಾಗಿದೆ ಆದರೆ ಕ್ರಿ, ಶ ೧೦ನೆಯ ಮತ್ತು ೧೩ನೆಯ ಶತಮಾನದ ಶಿಲ್ಪಗಳಲ್ಲಿ ಈತನು ಹಿಂದೂ ದೇವತೆಗಳೊಂದಿಗೆ ಇರುವನು. ಸಂತಾನಪ್ರದರಾದ ಸಪ್ತಮಾತೃಕೆಯರ ಶಿಲ್ಪಪಟ್ಟಿಕೆಗಳಲ್ಲೂ, ನೈಗಮೇಷನು ಕಾಣಿಸಿಕೊಂಡಿರುವು ದಿದೆ. ಈತನು ಎಡತೋಳಿನಲ್ಲಿ ಒಂದು ಮಗುವನ್ನು ಎತ್ತಿಕೊಂಡಿದ್ದರೆ, ಮತ್ತೆರಡು ಮಕ್ಕಳು ಆತನ ಎಡ ಮತ್ತು ಬಲಗಾಲುಗಳನ್ನು ಆಶ್ರಯಿಸಿದಂತೆ ತೋರಿರುವ ಶಿಲ್ಪಗಳಿವೆ.

ಮೇಕೆಯ ತಲೆಯಲ್ಲದೆ, ನೈಗಮೇಷನು ಜಿಂಕೆಯ ತಲೆಯನ್ನು ಹೊಂದಿರುವAಥ ಶಿಲ್ಪಗಳೂ ಇವೆ. ನೈಗಮೇಷನು ಸಿಂಹಾಸನದ ಮೇಲೆ ಕುಳಿತು, ಅವನು ತೊಡೆಯ ಮೇಲೆ ಮಕ್ಕಳನ್ನು ಕೂರಿಸಿಕೊಂಡಿರು ವಂತೆಯೂ ತೋರಿಸಲಾಗಿದೆ. ಕೆಲವೆಡೆ ಮೇಕೆಯ ಮುಖವಿರುವ ಸ್ತ್ರೀ ಕೂಡ ಈತನೊಂದಿಗೆ ಇರುವಂತೆಯೂ ತೋರಿಸಿರುವುದಿದೆ.

-ಸತೀಶ್ ಕುಮಾರ್ ಎ. ಎಸ್., ಇತಿಹಾಸ ಉಪನ್ಯಾಸಕರು

ವೀರಾಜಪೇಟೆ. ಮೊ: ೯೬೩೨೪೩೨೩೧೫