ಡಾ. ಪಿ.ಎಲ್. ಧರ್ಮ
ಕುಶಾಲನಗರ, ಫೆ. ೬: ಬಹು ಸಂಸ್ಕೃತಿ, ಬಹುಭಾಷೆಗಳ ನಡುವೆ ಎಲ್ಲರೂ ಒಂದೇ ಸೂರಿನಡಿಯಲ್ಲಿ ಸೇರುವ ಅವಕಾಶವನ್ನು ಕನ್ನಡ ಸಾಹಿತ್ಯ ಸಮ್ಮೇಳನ ಒದಗಿಸಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಪತಿ ಡಾ. ಪಿ.ಎಲ್. ಧರ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು, ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಜನತೆ ಇಂತಹ ಸಮ್ಮೇಳನಗಳಲ್ಲಿ ಎಲ್ಲಾ ಆಶೋತ್ತರಗಳನ್ನು ಮರೆತು ಒಂದಾಗಿ ಸೇರಬೇಕು. ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಪ್ರಭಾವ ಬೀರುವಂತೆ ಮಾಡುವುದು ಪರಿಷತ್‌ನ ಜವಾಬ್ದಾರಿಯಾಗಿದೆ ಎಂದರು.
ಸಾಹಿತ್ಯಕ್ಕೂ ಸಮಾಜಕ್ಕೂ ಯಾವುದೇ ರೀತಿಯ ಸಂಬAಧ ಕಲ್ಪಿಸಿದಲ್ಲಿ ನಾಡಿನ ಅಥವಾ ದೇಶದ ಏಕತೆಗೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದ ಅವರು, ಬಂಡಾಯ ಸಾಹಿತ್ಯ, ಸ್ತಿçÃ, ಮಹಿಳಾ ಸಾಹಿತ್ಯ, ದಲಿತ, ಮಕ್ಕಳ ಪ್ರತ್ಯೇಕ ಸಾಹಿತ್ಯಗಳು ಏಕತೆಗೆ ಧಕ್ಕೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯಾವುದೇ ಸಾಹಿತ್ಯ ವರ್ಗಗಳಿಗೆ ಸೀಮಿತವಾಗಬಾರದು. ಭಾಷೆ ಕಟ್ಟಬೇಕಾದ ನಿರ್ಣಯಗಳು ಅನುಷ್ಠಾನವಾಗಬೇಕೇ ಹೊರತು, ಅದು ವರ್ಗಗಳಿಗೆ ಸೀಮಿತವಾಗ ಬಾರದೆಂದು ಹೇಳಿದರು.
ಪ್ರತಿಯೊಬ್ಬರು ಕೇಳುವಂತವರಾಗ ಬೇಕೆ ಹೊರತು ಎಲ್ಲರು ಹೇಳುವಂತವರಾಗಬಾರದು ಎಂಬ ಕಿವಿಮಾತು ಹೇಳಿದ ಧರ್ಮ, ದುಶ್ಚಟಗಳಿಂದ ಹೊರಬೇಕು ಎಂದರು. ಭಾಷೆ, ಬೆಳಕು, ನೆಲ, ಜಲ ಉಳಿಸುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿ ಇರುವುದಾಗಿ ತಿಳಿಸಿದರು.
ನಂತರ ತಾಲೂಕಿನ ಉದ ಯೋನ್ಮುಖ ಗಾಯಕರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರಬಾಬು ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆದು, ತಾಲೂಕು ರಚನಾ ಹೋರಾಟಗಾರ ವಿ.ಪಿ. ಶಶಿಧರ್ ಕುಶಾಲನಗರ ತಾಲೂಕಿನ ಅಭಿವೃದ್ಧಿಯ ಆಶೋತ್ತರಗಳು ವಿಷಯದಡಿ ಆಶಯ ನುಡಿಗಳನ್ನಾಡಿದರು. ಉಪನ್ಯಾಸಕ ವೆಂಕಟನಾಯಕ ಅವರು, ಕುಶಾಲನಗರ ತಾಲೂಕಿನ ಸಾಹಿತಿಗಳ ಬಗ್ಗೆ ಮಾಹಿತಿ ಒದಗಿಸಿದರು. ಧರ್ಮಸ್ಥಳ ಯೋಜನಾಧಿಕಾರಿ ಹೆಚ್. ರೋಹಿತ್ ಅವರು, ಗ್ರಾಮೀಣ ಮಹಿಳೆ ಮತ್ತು ಸಬಲೀಕರಣ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ನಂತರ ನಡೆದ ಕವಿಗೋಷ್ಠಿಯಲ್ಲಿ ೧೩ ಮಂದಿ ಕವನ ವಾಚಿಸಿದರು. ಕವಿಗೋಷ್ಠಿಯನ್ನು ಸಾಹಿತಿ ಫ್ಯಾನ್ಸಿ ಮುತ್ತಣ್ಣ ಉದ್ಘಾಟಿಸಿದರು. ಸಾಹಿತಿ ಮಾಲಾ ಮೂರ್ತಿ ಆಶಯ ನುಡಿಗಳನ್ನಾಡಿದರು. ಸುನೀತಾ ಲೋಕೇಶ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ನಂತರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಮೂರ್ತಿ ಅಧ್ಯಕ್ಷತೆಯಲ್ಲಿ ಸಂಘದ ನಿರ್ಣಯ ಮಂಡನೆ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಭಾಷಣ ಮಾಡಿದ ಟಿ.ಪಿ ರಮೇಶ್ ಅವರು, ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಜನರು ಸಭೆಯ ಚರ್ಚೆ, ಚಟುವಟಿಕೆ ಗಳ ಬಗ್ಗೆ ಆಸಕ್ತಿ ವಹಿಸುವುದರೊಂದಿಗೆ ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳು ವಂತಾಗಬೇಕು ಎಂದರು.
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯಶಸ್ವಿ ಸಮ್ಮೇಳನ ನಡೆದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮ್ಮೇಳನಾಧ್ಯಕ್ಷ ಬಿ.ಆರ್. ನಾರಾಯಣ ಅವರು ಆಶಯ ನುಡಿಗಳನ್ನಾಡಿದರು. ಇದೇ ಸಂದರ್ಭ ಸಮ್ಮೇಳನದ ಸರ್ವಾಧ್ಯಕ್ಷರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.
ಕೆ.ಎಸ್. ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹಾಸನ ಕಸಾಪ ಅಧ್ಯಕ್ಷ ಡಾ. ಮಲ್ಲೇಶ್‌ಗೌಡ ಮಾತನಾಡಿದರು. ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಹಾಗೂ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಜಿಲ್ಲಾಧ್ಯಕ್ಷರ ನುಡಿಗಳನ್ನಾಡಿದರು.
- ಸಿಂಚು