ಮಡಿಕೇರಿ, ಫೆ. ೬: ಸಬ್ಸಿಡಿ ಸಾಲ ಮಂಜೂರಾತಿಗೆ ಸಂಬAಧಿಸಿದAತೆ ಫಲಾನುಭವಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂವರು ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ನಗರದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹಂದಿ, ಕೋಳಿ ಸಾಕಾಣೆ ಸಂಬAಧ ಸ್ವಯಂ ಉದ್ಯೋಗ ಯೋಜನೆಯಡಿ ಸಬ್ಸಿಡಿ ಸಾಲ ದೊರೆಯಲಿದೆ ಎಂಬ ಮಾಹಿತಿ ತಿಳಿದುಕೊಂಡ ಸಿದ್ದಾಪುರ ಗೂಡುಗದ್ದೆಯ ವಿ. ವಿಜಯಲಕ್ಷಿö್ಮ ಎಂಬವರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರು.
ಒಟ್ಟು ೩ ಲಕ್ಷ ರೂ. ಸಾಲದಲ್ಲಿ ೧ ಲಕ್ಷ ಹಣವನ್ನು ಮೊದಲ ಹಂತವಾಗಿ ಈ ಹಿಂದೆ ಮಂಜೂರು ಮಾಡಲಾಗಿತ್ತಾದರೂ ಎರಡನೇ ಹಂತದ ಒಂದು ಲಕ್ಷ ಹಣ ಮಂಜೂರಾತಿಗೆ ೧೦ ಸಾವಿರ ರೂ. ಲಂಚ ನೀಡುವಂತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ವ್ಯವಸ್ಥಾಪಕಿ ಚೆಲುವಾಂಭ, ಜಿಲ್ಲಾ ವ್ಯವಸ್ಥಾಪಕ ಚಂದ್ರಶೇಖರ್ ಹಾಗೂ ಚಾಲಕ ತಿರುಮಲ ಇವರುಗಳು ಬೇಡಿಕೆ ಇಟ್ಟಿದ್ದು, ಈ ಬಗ್ಗೆ ವಿಜಯಲಕ್ಷಿö್ಮ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಇಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಚೆಲುವಾಂಭ, ಚಂದ್ರಶೇಖರ್, ತಿರುಮಲ ಇವರುಗಳು ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿ ಮೂವರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಲೋಕಾಯುಕ್ತದ ಅಪರ ಪೊಲೀಸ್ ಮಹಾನಿರ್ದೇಶಕರಾದ ಪ್ರಶಾಂತ್ ಕುಮಾರ್ ಠಾಕೂರ್, ಪೊಲೀಸ್ ಮಹಾನಿರೀಕ್ಷಕರಾದ ಡಾ. ಎ. ಸುಬ್ರಮಣ್ಯೇಶ್ವರರಾವ್ ಮಾರ್ಗದರ್ಶನದಲ್ಲಿ ಮೈಸೂರು ಲೋಕಾಯುಕ್ತ
(ಮೊದಲ ಪುಟದಿಂದ) ಪೊಲೀಸ್ ಅಧೀಕ್ಷಕರಾದ ಎಸ್. ಸುರೇಶ್ ಬಾಬು ಮತ್ತು ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ಎಂ.ಎಸ್. ಪವನ್ ಕುಮಾರ್ ನೇತೃತ್ವದಲ್ಲಿ ಮಡಿಕೇರಿ ಪೊಲೀಸ್ ನಿರೀಕ್ಷಕ ಲೋಕೇಶ್, ಮೈಸೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕಿ ರೂಪಶ್ರೀ ಮತ್ತು ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.