ಮಡಿಕೇರಿ, ಫೆ. ೩: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಶ್ರೀಶಕ್ತಿ ವೃದ್ಧಾಶ್ರಮದ ವಾಸಿಗಳಿಗೆ ಉಚಿತ ದಂತ ತಪಾಸಣೆ ಶಿಬಿರ ಆಯೋಜಿಸಲಾಗಿತ್ತು.

ನಗರದ ತ್ಯಾಗರಾಜ ಕಾಲೋನಿ ಯಲ್ಲಿರುವ ಶ್ರೀಶಕ್ತಿ ವೃದ್ಧಾಶ್ರಮದ ೨೫ ವಾಸಿಗಳಿಗೆ ಉಚಿತವಾಗಿ ದಂತ ತಪಾಸಣೆ ಕೈಗೊಳ್ಳಲಾಯಿತು. ತಂಬಾಕಿನಿAದ ಉಂಟಾಗುವ ದುಷ್ಪರಿ ಣಾಮಗಳು, ಬಾಯಿಯ ಕ್ಯಾನ್ಸರ್ ಬಗ್ಗೆ ಇನ್ನರ್ ವೀಲ್ ಸಂಸ್ಥೆಯ ಸದಸ್ಯೆ, ದಂತ ವೈದ್ಯೆ ಡಾ. ದೀಪ ಮಾಹಿತಿ ನೀಡಿದರು. ಸಂಸ್ಥೆಯ ವ್ಯವಸ್ಥಾಪಕ ಸತೀಶ್, ಇನ್ನರ್ ವೀಲ್ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್, ಸದಸ್ಯೆಯರಾದ ಉಮಾಗೌರಿ, ಅಗ್ನೇಸ್ ಮುತ್ತಣ್ಣ ಹಾಜರಿದ್ದರು.