ಸಿದ್ದಾಪುರ, ಫೆ. ೨: ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ಗುಣಶೇಖರ್ ಆರೋಪಿಸಿದರು.

ನಗರದ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಾರ್ಮಿಕರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದರು. ಇಂದು ತೋಟಗಳಲ್ಲಿ ಬೆಲೆ ಏರಿಕೆಗೆ ಅನುಗುಣವಾದ ಸಂಬಳ ಸಿಗುತ್ತಿಲ್ಲ. ತೋಟ ಕಾರ್ಮಿಕರಿಗೆ ೬೦೦ ರೂ. ಸಂಬಳ ನೀಡಬೇಕು. ಕನಿಷ್ಟ ವೇತನ ಕಾಯಿದೆ ಅಡಿಯಲ್ಲಿ ಸುಮಾರು ೮೯ ಕೈಗಾರಿಕೆಗಳು ಒಳಪಟ್ಟಿದ್ದು, ೧೯೪೮ ಕನಿಷ್ಟ ಕಾಯ್ದೆ ಪ್ರಕಾರ ಪ್ರತಿ ೫ ವರ್ಷಕ್ಕೊಮ್ಮೆ ಕುಟುಂಬ ನಿರ್ವಹಣೆಯ ಆಧಾರದಲ್ಲಿ ವೇತನ ನಿಗದಿಪಡಿಸಬೇಕು. ಸರ್ವೋಚ್ಛ ನ್ಯಾಯಾಲಯ ಕೂಡ ಇದನ್ನೇ ಹೇಳಿದೆ. ಕಾಯ್ದೆಯಲ್ಲಿ ಒಳಪಡುವ ಕಾರ್ಮಿಕರಿಗೆ ೩೧,೫೦೦ ನಿಗದಿಪಡಿಸಬೇಕು ಎಂದು ವೇತನ ಆಯೋಗಕ್ಕೆ ಶಿಫಾರಸ್ಸು ಮಾಡಿದರು ಕೂಡ ರಾಜ್ಯ ಸರ್ಕಾರ ವೇತನ ಪರಿಷ್ಕರಣೆಗೆ ಮುಂದಾಗುತ್ತಿಲ್ಲವೆAದು ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿ, ಬಿಸಿಯೂಟ ತಯಾರಿಸುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಇ.ಎಸ್.ಐ, ಪ್ರವಿಷನ್ ಫಂಡ್ ಗ್ರಾö್ಯಜುಟಿ ಸೇರಿದಂತೆ ಸೌಲಭ್ಯಗಳನ್ನು ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪ್ರಾಥಮಿಕ ಶಿಕ್ಷಣ ನೀಡುವ ಕೇಂದ್ರ ಸರ್ಕಾರದ ಹೊಸ ಶೈಕ್ಷಣಿಕ ಕ್ರಮವನ್ನು ಕೈ ಬಿಡಬೇಕು. ಇದರಿಂದ ಅಂಗನವಾಡಿ ಎಂಬ ಸಂಸ್ಥೆ ಮುಚ್ಚುವ ಅಪಾಯವಿದೆ. ತೋಟದ ಲೈನ್‌ಮನೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಕಾರ್ಮಿಕರು ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಲೈನ್‌ಮನೆಗಳಲ್ಲಿ ವಾಸಿಸುವವರಿಗೆ ನಿವೇಶನ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಕೈಬಿಡಬೇಕು ಎಂಬ ೧೨ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ಮಟ್ಟದ ಬೃಹತ್ ಸಮಾವೇಶ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಫೆಬ್ರವರಿ ೮ರಂದು ಹಮ್ಮಿಕೊಂಡಿದ್ದು ಜಿಲ್ಲೆಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಕೈ ಜೋಡಿಸಬೇಕು ಎಂದರು. ಈ ಸಂದರ್ಭದಲ್ಲಿ ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ಗುಣಶೇಖರ್, ಮಲ್ನಾಡ್ ಹಾಜರಿದ್ದರು.