ಸೋಮವಾರಪೇಟೆ, ಫೆ. ೨: ಪಟ್ಟಣದ ನಿವಾಸಿ ಸಿವಿಲ್ ಇಂಜಿನಿಯರ್ ಹಾಗೂ ಪುಷ್ಪಗಿರಿ ಜೇಸಿ ಸಂಸ್ಥೆ ಪೂರ್ವ ವಲಯ ಉಪಾಧ್ಯಕ್ಷರಾದ ಎ.ಆರ್.ಮಮತ ಅವರು ಏಷ್ಯಾಬುಕ್ ಆಫ್ ರೆಕಾರ್ಡ್ ವತಿಯಿಂದ ನೀಡುವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದಲ್ಲಿ ಏಕಕಾಲಕ್ಕೆ ಅತೀಹೆಚ್ಚು ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಕರ್ನಾಟಕದ ವಿವಿಧ ವಿಭಾಗಗಳಲ್ಲಿ ಒಂದೇ ಬಾರಿಗೆ ಆಯೋಜಿಸಿ ಅನುಷ್ಠಾನಗೊಳಿಸಿದ್ದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ಇತ್ತೀಚೆಗೆ ತುಮಕೂರು ಜೇಸಿಐ ಮೆಟ್ರೋ ವತಿಯಿಂದ ತುಮಕೂರು ಚೇತನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಈ ಸಂದರ್ಭ ಜೇಸೀಐ ಪದಾಧಿಕಾರಿಗಳಾದ ಜನಾರ್ಧನ್, ಯೋಜನಾ ನಿರ್ದೇಶಕಿ ನಯನ, ಉಮಾಮಹೇಶ್, ಕುನಾಲ್ ಮಾಣಿಕ್‌ಚಂದ್ ಸೇರಿದಂತೆ ಇತರರು ಇದ್ದರು.