ಮಡಿಕೇರಿ, ಫೆ. ೧: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಗಳನ್ನು ನೇರಪಾವತಿಗೊಳಪಡಿಸಿ ಹಂತಹAತವಾಗಿ ಖಾಯಂ ಗೊಳಿಸುವಂತೆ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಕೆಲಸ ಸ್ಥಗಿತಗೊಳಿಸಿರುವ ಪರಿಣಾಮ ಮಡಿಕೇರಿಯಲ್ಲಿ ಕಸ ವಿಲೇವಾರಿ ಹಾಗೂ ನೀರು ಸರಬರಾಜಿನಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ತಾ. ೧ ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಡಿಕೇರಿ ನಗರಸಭೆ, ವೀರಾಜಪೇಟೆ, ಕುಶಾಲನಗರ ಪುರಸಭೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ಸಿಬ್ಬಂದಿಗಳು ಬೆಂಬಲ ಸೂಚಿಸಿದ್ದಾರೆ. ಇದರ ಭಾಗವಾಗಿ ಮಡಿಕೇರಿಯಲ್ಲಿ ಕೆಲಸ ಸ್ಥಗಿತಗೊಳಿಸಿ ಹೋರಾಟಕ್ಕಿಳಿ ದಿದ್ದಾರೆ. ಸೋಮವಾರಪೇಟೆಯಲ್ಲಿ ಸಾಂಕೇತಿಕ ಹೋರಾಟ ನಡೆಸಿ ಕೆಲಸಕ್ಕೆ ಹಾಜರಾದರೆ, ತಾ. ೩ ರಂದು ತಾಲೂಕು ಸಮ್ಮೇಳನ ಹಿನ್ನೆಲೆ ಕುಶಾಲನಗರ ಪುರಸಭೆ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ವೀರಾಜಪೇಟೆಯ ಸಿಬ್ಬಂದಿಗಳು ಕೆಲಸಕ್ಕೆ ಹಾಜರಾಗಿ ಬಳಿಕ ಮಡಿಕೇರಿ ಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಗಳಾಗಿದ್ದಾರೆ.

ಮಡಿಕೇರಿಯಲ್ಲಿ ಸಮಸ್ಯೆ

ಮಡಿಕೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿರುವ ೧೨ ಚಾಲಕರು, ೧೪ ನೀರುಗಂಟಿಗಳು ಮುಷ್ಕರದಲ್ಲಿ ಭಾಗವಹಿಸಿದ ಹಿನ್ನೆಲೆ ಇಂದು ಕಸ ವಿಲೇವಾರಿಗೆ ತೊಡಕು ಉಂಟಾಯಿತು. ನಗರಸಭೆಯಲ್ಲಿ ೬ ಟ್ರಾö್ಯಕ್ಟರ್ ಹಾಗೂ ೬ ಗೂಡ್ಸ್ ಆಟೋ ಗಳಿವೆ. ಆದರೆ ಸಿಬ್ಬಂದಿಗಳಿಲ್ಲದೆ ಒಂದು ವಾಹನ ಮಾತ್ರ ಕಾರ್ಯ ನಿರ್ವಹಿಸಿತು. ನೇರನೇಮಕಾತಿ ಯಲ್ಲಿರುವ ಓರ್ವ ಚಾಲಕ ಮಾತ್ರ ಕರ್ತವ್ಯಕ್ಕೆ ಹಾಜರಾದರು.

ಮಡಿಕೇರಿಯಲ್ಲಿ ನಿತ್ಯ ದೊಡ್ಡ ಮಟ್ಟದಲ್ಲಿ ಕಸ ಸಂಗ್ರಹವಾಗುವುದ ರಿಂದ ದಿನನಿತ್ಯ ಕಸ ವಿಲೇವಾರಿ ಯಾಗಲೆಬೇಕಾಗಿದೆ. ಹೊಟೇಲ್, ಮಾಂಸದ ಅಂಗಡಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ವಿಲೇವಾರಿಯಾಗದಿದ್ದಲ್ಲಿ ತೀವ್ರ ಸಮಸ್ಯೆ ಉಂಟಾಗುತ್ತದೆ.

ಮುಂದಿನ ದಿನಗಳಲ್ಲಿ

ವಿಲೇವಾರಿಯ

(ಮೊದಲ ಪುಟದಿಂದ) ಕುರಿತು ಗೊಂದಲ ಏರ್ಪಟ್ಟಿದೆ. ನೀರು ಸರಬರಾಜಿಗೆ ಮಾತ್ರ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕಸ ವಿಲೇವಾರಿಗೆ ಚಾಲನೆ ಬರುವ ಪೌರಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಮುಷ್ಕರದಲ್ಲಿರುವ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ ಎಂದು ಪೌರಾಯುಕ್ತ ವಿಜಯ ತಿಳಿಸಿದ್ದಾರೆ.

ಪ್ರತಿಭಟನೆ

ಹೊರಗುತ್ತಿಗೆ ಸಿಬ್ಬಂದಿಗಳು ನಗರಸಭೆ ಎದುರು ಅನಿರ್ದಿಷ್ಟವಧಿ ಮುಷ್ಕರ ನಡೆಸಿದರು. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಖಾಯಂ ಮಾಡಲು ಮುಂದಾಗಿರುವ ಸರಕಾರ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಾಹನ ಚಾಲಕರು, ನೀರು ಸರಬರಾಜು ಸಹಾಯಕರು, ಡಾಟ ಆಪರೇಟರ್‌ಗಳನ್ನು ಗುತ್ತಿಗೆಯಲ್ಲಿಯೇ ಉಳಿಸಿಕೊಂಡಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಸರಕಾರ ಸಮಸ್ಯೆ ಬಗೆಹರಿಸಿ ಸೂಕ್ತ ಕ್ರಮವಹಿಸುವ ತನಕ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಜಿಲ್ಲಾಧ್ಯಕ್ಷ ಈರಪ್ಪ ಶೆಟ್ಟಿ, ಸಂಘದ ಉಪಾಧ್ಯಕ್ಷ ಎ.ಎ. ಬೋಪಯ್ಯ, ಕಾರ್ಯದರ್ಶಿ ಟಿ.ಬಿ. ರಮೇಶ್ ಕುಟ್ಟಪ್ಪ, ಖಜಾಂಚಿ ಕಬೀರ್ ಅಹಮ್ಮದ್, ಸಂಚಾಲಕ ಮಹಾದೇವ್, ನೀರು ಸರಬರಾಜು ವಿಭಾಗದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಸಾಹಿತ್ಯ ಸಮ್ಮೇಳನಕ್ಕೆ ಸಾಥ್

ಕುಶಾಲನಗರ ಪುರಸಭೆಯ ಹೊರಗುತ್ತಿಗೆ ನೌಕರರು ತಾ. ೩ ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವಿರುವ ಹಿನ್ನೆಲೆ ೧೯ ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿ ಸಹಕರಿಸಿದರು.

ಸೋಮವಾರಪೇಟೆಯಲ್ಲಿ ಪ್ರತಿಭಟನೆ

ಸೋಮವಾರಪೇಟೆ : ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಗಳನ್ನು ನೇರಪಾವತಿಗೊಳಪಡಿಸಿ ಹಂತಹAತವಾಗಿ ಖಾಯಂಗೊಳಿಸುವAತೆ ಆಗ್ರಹಿಸಿ ಇಲ್ಲಿನ ಪಟ್ಟಣ ಪಂಚಾಯತಿ ಹೊರಗುತ್ತಿಗೆ ನೌಕರರು ಪಂಚಾಯಿತಿ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.

ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘ ಕರೆ ನೀಡಿದ್ದ ಪ್ರತಿಭಟನೆಗೆ ಸಾಂಕೇತಿಕ ಬೆಂಬಲ ನೀಡಿದ ಇಲ್ಲಿನ ಹೊರಗುತ್ತಿಗೆ ನೌಕರರು, ಪಂಚಾಯಿತಿ ಆವರಣದಲ್ಲಿ ಕೆಲ ಸಮಯ ಪ್ರತಿಭಟನೆ ನಡೆಸಿ ನಂತರ ಕರ್ತವ್ಯಕ್ಕೆ ಹಾಜರಾದರು.

ಈ ಸಂದರ್ಭ ಹೊರಗುತ್ತಿಗೆ ನೌಕರರಾದ ಆದಿಲ್, ಶೇಖರ್, ಶಶಿಕಲಾ ಸೇರಿದಂತೆ ಹೊರಗುತ್ತಿಗೆ ನೌಕರರು ಉಪಸ್ಥಿತರಿದ್ದರು.