ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ: ಸಂತಸ ವ್ಯಕ್ತಪಡಿಸಿದ ಸಿಎಂ
ಬೆAಗಳೂರು, ಫೆ. ೧: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ಒದಗಿಸಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಸಂಬAಧ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಈ ಸಾಲಿನ ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ. ೫೩೦೦ ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಲೋಕಸಭೆಯಲ್ಲಿಂದು ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಕರ್ನಾಟಕದಲ್ಲಿನ ಮಹತ್ವಕಾಂಕ್ಷೆಯ ಭ್ರದ್ರಾ ಮೇಲ್ದಂಡೆ ಯೋಜನೆಗೆ ರೂ. ೫.೬೩೦ ಕೋಟಿ ಅನುದಾನ ಘೋಷಿಸಿದ್ದಾರೆ.
ಕಾರಿನ ಮೇಲೆ ಬಿದ್ದ ಕಾಂಕ್ರಿಟ್ ಲಾರಿ, ತಾಯಿ-ಮಗಳ ದುರ್ಮರಣ!
ಆನೇಕಲ್, ಫೆ. ೧: ಬನ್ನೇರುಘಟ್ಟ ಸಮೀಪದ ಬ್ಯಾಲಮರದ ದೊಡ್ಡಿ ಬಳಿ ನಿಯಂತ್ರಣ ತಪ್ಪಿದ ಕಾಂಕ್ರಿಟ್ ಮಿಕ್ಸರ್ ಲಾರಿಯೊಂದು ಕಾರಿನ ಮೇಲೆ ಉರುಳಿ ಬಿದ್ದಿದ್ದು ಕಾರಿನಲ್ಲಿದ್ದ ತಾಯಿ-ಮಗಳು ಮೃತಪಟ್ಟಿದ್ದಾರೆ. ಮೃತರನ್ನು ಐಟಿ ಉದ್ಯೋಗಿ ೪೭ ವರ್ಷದ ಗಾಯತ್ರಿ ಕುಮಾರ್ ಹಾಗೂ ೧೬ ವರ್ಷದ ಸಮತಾ ಕುಮಾರ್ ಎಂದು ಗುರುತಿಸಲಾಗಿದೆ. ಮಗಳನ್ನು ಶಾಲೆಗೆ ಬಿಡಲು ಕಾರಿನಲ್ಲಿ ಬರುತ್ತಿದ್ದಾಗ ತಿರುವಿನಲ್ಲಿ ಅತಿವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಮೃತ ಗಾಯತ್ರಿ ಕುಮಾರ್ ತರಳು ನಿವಾಸಿ ಸುನೀಲ್ ಕುಮಾರ್ ಎಂಬುವರ ಪತ್ನಿಯಾಗಿದ್ದು ದಂಪತಿ ೨೦ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು.
ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಸಿಎಂ ಭರವಸೆ
ವಿಜಯಪುರ, ಫೆ. ೧: ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸುವು ದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು. ವೃತ್ತಿ ಆಧಾರಿತವಾದ ಕುಲಕಸುಬುಗಳ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ, ನಿಮಗದ ಮುಖಾಂತರ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಮಾಜದ ಕುಲಶಾಸ್ತç ಅಧ್ಯಯನ ಮಾಡಿ ಸಮಾಜಕ್ಕೆ ನ್ಯಾಯ ದೊರಕಿಸಲು ಸರ್ಕಾರ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಸಮಾಜದ ನಿಗಮದಲ್ಲಿ ಹಡಪದ ಸಮುದಾಯ ಒಳಗೊಂಡಿಲ್ಲ. ಶಿವಶರಣ ಹಡಪದ ಅಪ್ಪಣ್ಣ ಅವರ ಜನ್ಮಸ್ಥಳ ಮಸಬಿನಾಳ, ಹಡಪದ ಅಪ್ಪಣ್ಣನವರ ಶರಣ ಲಿಂಗಮ್ಮ ತಾಯಿಯವರ ಜನ್ಮಸ್ಥಳ ದೇಗಿನಾಳ ಗ್ರಾಮವನ್ನು ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ತಮ್ಮ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ರೂ. ೧ ಕೋಟಿ ನೀಡಲಾಗಿತ್ತು. ನನ್ನ ಅವಧಿಯಲ್ಲಿ ರೂ. ೩ ಕೋಟಿ ಅನುದಾನ ನೀಡಲಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡಿಗಲ್ಲು ಹಾಕಲಾಗಿದೆ ಎಂದರು. ಶೈಕ್ಷಣಿಕವಾಗಿ ಶಾಲೆ, ವಿದ್ಯಾರ್ಥಿನಿಲಯ ಸ್ಥಾಪಿಸಬೇಕೆಂಬ ಇಚ್ಛೆಯಿದ್ದು, ಈಗಾಗಲೇ ಒದಗಿಸಿರುವ ಮೂರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ಹೆಚ್ಚುವರಿಯಾಗಿ ಅಗತ್ಯವಿರುವ ಮೊತ್ತವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಕಾಯಕ ಯೋಜನೆಯಡಿ ಅನುದಾನ ನೀಡಲಾಗುತ್ತಿದೆ. ಅವರ ಕುಲ ಕಸುಬುಗಳನ್ನು ಉನ್ನತೀಕರಿಸುವ ಯೋಜನೆ ಇದಾಗಿದೆ. ಪ್ರಥಮ ಬಾರಿಗೆ ಅವರ ಕುಲಕಸುಬುಗಳ ಬಗ್ಗೆ ಮನ್ನಣೆ ನೀಡಿ, ಚಿಂತಿಸಿರುವುದು ನಮ್ಮ ಸರ್ಕಾರ ಎಂದರು. ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಚರAಡಿ ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭ
ಬೆAಗಳೂರು, ಫೆ. ೧: ಮಳೆ ನೀರು ಚರಂಡಿ (ಎಸ್‌ಡಬ್ಲ್ಯುಡಿ) ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪುನರಾರಂಭಿಸಿದೆ. ಕರ್ನಾಟಕ ಭೂಕಂದಾಯ ಸೆಕ್ಷನ್ ೧೦೪ ರ ಅಡಿಯಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಅವರ ಆದೇಶದ ಮೇರೆಗೆ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಚಿನ್ನಪನಹಳ್ಳಿ ಹಾಗೂ ಪಟ್ಟಂದೂರು ಅಗ್ರಹಾರದಲ್ಲಿ ಕೆಲ ಮನೆಗಳ ಕಾಂಪೌAಡ್ ಗೋಡೆಗಳನ್ನು ಬಿಬಿಎಂಪಿ ನೆಲಸಮಗೊಳಿಸಿದೆ. ಮಹದೇವಪುರ ವಲಯದ ದೊಡ್ಡನೆಕುಂದಿ ವಾರ್ಡ್ನ ರಾಜಕಾಲುವೆಯಲ್ಲಿ ನಿರ್ಮಿಸಲಾಗಿದ್ದ ಎರಡು, ಮೂರು ಮತ್ತು ನಾಲ್ಕು ಅಂತಸ್ತಿನ ಕಟ್ಟಡಗಳು ಸೇರಿದಂತೆ ಮೂರು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟç: ಸ್ಫೋಟದಲ್ಲಿ ಇಬ್ಬರ ಸಾವು
ಥಾಣೆ, ಫೆ. ೧: ಮಹಾರಾಷ್ಟçದ ಥಾಣೆ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ದಹನಕಾರಿ ರಾಸಾಯನಿಕ ತುಂಬಿದ ಡ್ರಮ್‌ಗಳು ಸ್ಫೋಟಗೊಂಡು ಇಬ್ಬರು ಸ್ಕಾçö್ಯಪ್ ವಿತರಕರು ಮೃತಪಟ್ಟಿದ್ದಾರೆ ಎಂದು ನಾಗರಿಕ ಅಧಿಕಾರಿ ತಿಳಿಸಿದ್ದಾರೆ. ಸಂತ್ರಸ್ತರು ಭಿವಂಡಿಯ ಕಂಬೆಯಲ್ಲಿ ಕಂಟೈನರ್‌ಗಳಿAದ ಡೈಥಿಲೀನ್ ಗ್ಲೈಕೋಲ್ ಅನ್ನು ತೆಗೆದುಕೊಳ್ಳುತ್ತಿದ್ದಾಗ ಅವರಲ್ಲಿ ಒಬ್ಬಾತ ಸಿಗರೇಟ್ ಹಚ್ಚಿದ್ದಾರೆ. ಇದರಿಂದಾಗಿ ಬೆಂಕಿ ತಗುಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಬೆಂಕಿಯಿAದಾಗಿ ನಾಲ್ಕು ಡ್ರಮ್‌ಗಳು ಸ್ಫೋಟಗೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಅವಿನಾಶ್ ಸಾವಂತ್ ಹೇಳಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ನಿಜಾಂಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಗುಲ್ಮಾರ್ಗ್ನಲ್ಲಿ ಭಾರೀ ಹಿಮಕುಸಿತ-ಇಬ್ಬರು ವಿದೇಶಿ ಪ್ರವಾಸಿಗರು ಸಾವು
ಗುಲ್ಮಾರ್ಗ್, ಫೆ. ೧: ಜಮ್ಮು ಮತ್ತು ಕಾಶ್ಮೀರದ ಗುಲ್ಮಾರ್ಗ್ನ ಸ್ಕೀ ರೆಸಾರ್ಟ್ನ ಮೇಲ್ಭಾಗದಲ್ಲಿ ಬುಧವಾರ ಸಂಭವಿಸಿದ ಭಾರೀ ಹಿಮಕುಸಿತದಲ್ಲಿ ಇಬ್ಬರು ಪೋಲಿಷ್ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಮಕುಸಿತ ಸಂಭವಿಸಿದಾಗ ಸ್ಕೀಯರ್‌ಗಳು, ವಿದೇಶಿಗರು ಮತ್ತು ಸ್ಥಳೀಯರು, ಇಳಿಜಾರುಗಳಲ್ಲಿ ಇದ್ದರು ಎನ್ನಲಾಗಿದೆ. ಕನಿಷ್ಟ ೧೯ ವಿದೇಶಿ ಪ್ರವಾಸಿಗರನ್ನು ಇದುವರೆಗೆ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಇಬ್ಬರು ಪೋಲಿಷ್ ಪ್ರಜೆಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವೈದ್ಯಕೀಯ-ಕಾನೂನು ಪ್ರಕ್ರಿಯೆಗಳಿಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಹಿಮಪಾತ ಸಂಭವಿಸಿದ ಪ್ರದೇಶದಲ್ಲಿ ರಕ್ಷಣಾ ಪಡೆಗಳು ಬೀಡುಬಿಟ್ಟಿದ್ದು, ಹಿಮದಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಅದಾನಿ ಸಮೂಹದ ತೆಕ್ಕೆಗೆ ಹೈಫಾ ಪೋರ್ಟ್
ಹೈಫಾ, ಫೆ. ೧: ಇಸ್ರೇಲಿನ ಆಯಕಟ್ಟಿನ ಹೈಫಾ ಪೋರ್ಟ್ ಪೋರ್ಟ್ನ್ನು ಅದಾನಿ ಸಮೂಹ ೧.೨ ಬಿಲಿಯನ್ ಡಾಲರ್‌ಗೆ ಪಡೆದಿದೆ. ಟೆಲ್ ಅವೀವ್‌ನಲ್ಲಿ ಕೃತಕ ಬುದ್ಧಿಮತ್ತೆ ಪ್ರಯೋಗಾಲಯವೂ ಸೇರಿದಂತೆ ಇಸ್ರೇಲ್‌ನಲ್ಲಿನ ಹೂಡಿಕೆಯ ನಿರ್ಧಾರ ಭಾಗವಾಗಿ ಅದಾನಿ ಸಮೂಹ ಈ ಹೈಫಾ ಪೋರ್ಟ್ನ ಒಪ್ಪಂದಕ್ಕೆ ಮುಂದಾಗಿದೆ. ಇತ್ತೀಚೆಗೆ ಅಮೇರಿಕಾದ ಶಾರ್ಟ್ ಸೆಲ್ಲರ್ ಹಿಂಡನ್ ಬರ್ಗ್ ರಿಸರ್ಚ್ನ ವರದಿಯಲ್ಲಿ ಅದಾನಿ ಸಮೂಹದ ಬಗ್ಗೆ ಅಕ್ರಮಗಳ ಆರೋಪ ಕೇಳಿಬಂದಿತ್ತು. ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ-ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಇಬ್ಬರೂ ಹೈಫಾ ಪೋರ್ಟ್ ಒಪ್ಪಂದಕ್ಕೆ ಸಹಿ ಮಾಡಿದ್ದು, ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ್ದಾರೆ. ಹೈಫಾ ಪೋರ್ಟ್ ಒಪ್ಪಂದದ ಬಗ್ಗೆ ಮಾತನಾಡಿರುವ ನೇತನ್ಯಾಹು ಅದಾನಿ ಸಮೂಹದ ಜೊತೆಗಿನ ಒಪ್ಪಂದವನ್ನು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದು, ಹಲವು ವಿಧಗಳಲ್ಲಿ ಈ ಒಪ್ಪಂದ ಉಭಯ ರಾಷ್ಟçಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.