ಮಡಿಕೇರಿ: ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ. ಜವರಪ್ಪ ಡಿ.ಜೆ. ಅವರು ವಿದ್ಯಾರ್ಥಿಗಳಿಗೆ ಮತದಾನದ ಅರಿವು ಮೂಡಿಸಿದರು. ಕಾಲೇಜಿನ ರಾಜ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕ ನಿರ್ಮಲ ಹೆಚ್.ವಿ. ಅವರು ಮತದಾನ ದಿನಾಚರಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಪೊನ್ನಂಪೇಟೆ: ಇಲ್ಲಿನ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭ ಪ್ರಾಶುಪಾಲೆ ಗೀತಾ ನಾಯ್ಡು ಅವರು ವಿದ್ಯಾರ್ಥಿಗಳಿಗೆ ಮತದಾರರ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ಮಾತನಾಡಿ, ಮತದಾನ ಭಾರತೀಯ ಪ್ರಜೆಯ ಸಂವಿಧಾನಿಕ ಹಕ್ಕು, ಒಂದು ಪ್ರಜ್ಞಾವಂತ ಮತಕ್ಕೆ ಇಡೀ ದೇಶದ ಭವಿಷ್ಯವನ್ನು ಬದಲಿಸುವ ಶಕ್ತಿ ಇದೆ. ಹಣದ ಆಮಿಷಗಳಿಗೆ ಬಲಿಯಾಗದೆ, ಮತದಾನವನ್ನು ಬಹಿಷ್ಕರಿಸದೆ ವಿದ್ಯಾವಂತ ಯುವಜನತೆ ಅಭಿವೃದ್ಧಿಗೆ ತನ್ನ ಮತವನ್ನು ನೀಡುತ್ತಾ ದೇಶದ ಸರ್ವತೋಮುಖ ಬದಲಾವಣೆಗೆ ಸಹಕರಿಸಬೇಕಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ರಾಜಕೀಯ ಪಕ್ಷಗಳ ಮತಯಾಚನೆ, ಪ್ರಜೆಯು ಮತದಾನದ ಸಂದರ್ಭ ಎಸಗುವ ಸಾಮಾನ್ಯ ತಪ್ಪುಗಳು, ಕಡ್ಡಾಯ ನಿಯಮಗಳನ್ನು ಒಳಗೊಂಡ ಅಣಕು ಮತದಾನ ಪ್ರಕ್ರಿಯೆಯನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಉಪನ್ಯಾಸಕರಾದ ನೀಲಂ, ಸ್ಮಿಷಿತ, ಲೀಲಾವತಿ, ದಿವ್ಯ, ಸಬಿಯ, ಚಂದ್ರಿಕಾ, ಕುಶ ಮತ್ತು ವಿದ್ಯಾರ್ಥಿ ವೃಂದ ಇದ್ದರು.