ಕೂಡಿಗೆ, ಫೆ. ೧: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಸನ ಹೆದ್ದಾರಿ ಮತ್ತು ಸೋಮವಾರಪೇಟೆ ಸಂಪರ್ಕ ರಸ್ತೆಯಾದ ಭೈರಪ್ಪನಗುಡಿ ರಸ್ತೆ ಮತ್ತು ಚಿಕ್ಕ ಅಳುವಾರದಲ್ಲಿರುವ ಸ್ನಾತಕೋತ್ತರ ಕೇಂದ್ರದ ರಸ್ತೆ ಸೇರಿದಂತೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ೩.೮೦ ಕೋಟಿ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ರಸ್ತೆಯ ಅಭಿವೃದ್ಧಿಯಾದಲ್ಲೀ ಗ್ರಾಮದ ಪ್ರಗತಿಗೆ ಪೂರಕವಾಗುವುದು. ಈಗಾಗಲೇ ಗ್ರಾಮಾಂತರ ಪ್ರದೇಶಗಳ ರಸ್ತೆಯ ಅಭಿವೃದ್ಧಿ ವಿವಿಧ ಇಲಾಖೆಯ ಮೂಲಕ ಹೆಚ್ಚಿನ ಅನುದಾನವನ್ನು ನೀಡಲಾಗಿ ಉತ್ತಮ ಗುಣಮಟ್ಟದ ರಸ್ತೆಯ ನಿರ್ಮಾಣ ಕಾರ್ಯವಾಗಿದೆ .ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶದ ರಸ್ತೆಗೆ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಅಲ್ಲದೆ ವಸತಿ ಯೋಜನೆಯ ಅಡಿಯಲ್ಲಿ ನಿವೇಶನ ರಹಿತರಿಗೆ ನಿವೇಶನವನ್ನು ಸರಕಾರದ ವಿವಿಧ ಯೋಜನೆಯ ಅಡಿಯಲ್ಲಿ ನೀಡಲಾಗುವುದು. ಇದರ ಜೊತೆಯಲ್ಲಿ ಸರಕಾರದಿಂದ ಸಿಗುವ ಎಲ್ಲಾ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಮಹೇಶ್, ಉಪಾಧ್ಯಕ್ಷ, ಬೀಬಿಯಣ್ಣ, ಸದಸ್ಯರಾದ ದೇವರಾಜ್, ಶಿವಕುಮಾರ್, ಪ್ರಕಾಶ್, ನಿಂಗಜಮ್ಮ ಯಶೋಧÀ ಶಿವರಾಜ್, ತೊರೆನೂರು ಶಕ್ತಿ ಕೇಂದ್ರದ ಅಧ್ಯಕ್ಷ ಮಹೇಶ್, ದೇವಾಲಯ ಸಮಿತಿಯ ಅಧ್ಯಕ್ಷ ಚಂದ್ರಪ್ಪ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ, ಧರ್ಮಪ್ಪ, ಸಹಕಾರ ಸಂಘದ ನಿರ್ದೇಶಕ ಟಿ ಕೆ ಪಾಂಡುರAಗ, ಹಾರಂಗಿ ನೀರಾವರಿ ಇಲಾಖೆಯ ಅಧೀಕ್ಷಕ ಅಭಿಯಂತರ ಕೆ, ಕೆ, ರಘುಪತಿ, ಸಹಾಯಕ ಅಭಿಯಂತರ ಪುಟ್ಟಸ್ವಾಮಿ, ಇಂಜಿನಿಯರ್ ಸಿದ್ದರಾಜು, ಸತ್ಯಕುಮಾರ್, ಸೇರಿದಂತೆ ತೊರೆನೂರು ಅಳುವಾರ ವ್ಯಾಪ್ತಿಯ ಬಿಜೆಪಿ ವಿವಿಧ ಘಟಕದ ಅಧ್ಯಕ್ಷರುಗಳು, ಬೂತ್ ಸಮಿತಿಯ ಅಧ್ಯಕ್ಷರು, ಹೆಬ್ಬಾಲೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀನಿವಾಸ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಮಾರಿ ಸೇರಿದಂತೆ ಮಹಿಳೆಯರು, ಪುರುಷರು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.