ಮುಳ್ಳೂರು, ಫೆ. ೧: ಗುಡುಗಳಲೆ ಜಯದೇವ ಜಾನುವಾರು ಜಾತ್ರಾ ಮಹೋತ್ಸವ ಪ್ರಯುಕ್ತ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಯನ್ನು ಜಾತ್ರಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾಕೂಟವನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹರಪಳ್ಳಿ ರವೀಂದ್ರ ಉದ್ಘಾಟಿಸಿ ಮಾತನಾಡಿ, ಜಾನಪದ ಸೊಗಡು ನಮ್ಮ ದೇಶದ ದೇಶಿಯ ಸಂಸ್ಕೃತಿ ಯಾಗಿದ್ದು ಜಾತ್ರೋತ್ಸವಗಳಲ್ಲಿ ಪಾಲ್ಗೊಳ್ಳುವುದರಿಂದ ಜಾನಪದ ಸೊಗಡನ್ನು ಉಳಿಸಿದಂತಾಗುತ್ತದೆ ಎಂದರು. ಉದ್ಯಮಿ ಚಾಮೇರ ಪವನ್ ದೇವಯ್ಯ ಮಾತನಾಡಿ, ನಶಿಸುತ್ತಿರುವ ಕಬಡ್ಡಿ, ಖೋಖೋಗಳಂತಹ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕೆಂದರು.

ತಾ.ಪA. ಮಾಜಿ ಸದಸ್ಯ ಬಿ.ಎಸ್. ಅನಂತ್‌ಕುಮಾರ್ ಮಾತನಾಡಿ, ಗ್ರಾಮೀಣ ಸೊಗಡಿನ ಜಾತ್ರೋತ್ಸ ಗಳನ್ನು ನಶಿಸಲು ಬಿಡಬಾರದು ಎಂದರು.

ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‌ಕುಮಾರ್, ಕಾರ್ಯದರ್ಶಿ ಹೆಚ್.ಎಸ್. ಎಂದರು. ಉದ್ಯಮಿ ಚಾಮೇರ ಪವನ್ ದೇವಯ್ಯ ಮಾತನಾಡಿ, ನಶಿಸುತ್ತಿರುವ ಕಬಡ್ಡಿ, ಖೋಖೋಗಳಂತಹ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕೆಂದರು.

ತಾ.ಪA. ಮಾಜಿ ಸದಸ್ಯ ಬಿ.ಎಸ್. ಅನಂತ್‌ಕುಮಾರ್ ಮಾತನಾಡಿ, ಗ್ರಾಮೀಣ ಸೊಗಡಿನ ಜಾತ್ರೋತ್ಸ ಗಳನ್ನು ನಶಿಸಲು ಬಿಡಬಾರದು ಎಂದರು.

ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‌ಕುಮಾರ್, ಕಾರ್ಯದರ್ಶಿ ಹೆಚ್.ಎಸ್. ಅಶೋಕ್, ಪ್ರಮುಖರಾದ ಶಿವಕುಮಾರ್, ಮಂಜುನಾಥ್, ರಂಗಸ್ವಾಮಿ, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಮಹದೇವಮ್ಮ ಮುಂತಾದವರಿದ್ದರು.

ಪAದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆ (ಪ್ರಥಮ) ವೀರಾಜಪೇಟೆ ರಿದ್ಯಾ ಫ್ರೆಂಡ್ಸ್ (ದ್ವಿತೀಯ), ಶನಿವಾರಸಂತೆ ಶ್ರೀ ಬಾಲಜಿ ಪವರ್ ಟೂಲ್ಸ್ (ತೃತೀಯ) ಹಾಗೂ ಕೊಡಗು ಜಿಲ್ಲಾ ಒಕ್ಕಲಿಗರ ಯುವ ವೇದಿಕೆಯ ‘ಬಿ’ ಟೀಮ್ (ಚರ್ಥುತ) ಸ್ಥಾನ ಪಡೆದುಕೊಂಡಿತು.