ಚೆಟ್ಟಳ್ಳಿ, ಜ. ೩೧: ಈಗಲ್ ಐಸ್ ಶೂಟರ್ಸ್ ಬಟ್ಟೀರ ಎಂಬ ಹೆಸರಿನಲ್ಲಿ ತೆಂಗಿನಕಾಯಿ ಗುಂಡುಹೊಡೆಯುವ ಸ್ಪರ್ಧೆಯನ್ನು ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಬಟ್ಟೀರ ಕುಟುಂಬಸ್ಥರು ಆಯೋಜಿಸಿದ್ದರು.
ಚೆಟ್ಟಳ್ಳಿಯ ಬಟ್ಟೀರ ಕುಟುಂಬದವರು ಕೊಡವ ಸಂಪ್ರದಾಯ ಉಡುಪಿನಲ್ಲಿ ಪಾಲ್ಗೊಂಡಿದ್ದರು. ಹಿರಿಯರಾದ ಬಟ್ಟೀರ ದೇವಯ್ಯ, ನಿವೃತ್ತ ವಾಯುಸೇನೆ ಅಧಿಕಾರಿ ಪುತ್ತರಿರ ಗಣೇಶ್ ಭೀಮಯ್ಯ, ಬಟ್ಟೀರ ಬೋಪಯ್ಯ, ಬಟ್ಟೀರ ರಕ್ಷು ಕಾಳಪ್ಪ, ಮಂಗಳೂರು ಬಜ್ಪೆಯ ಸಿಮ್ಸ್ ಗನ್ನ್ ಹೌಸ್ನ ಮಾಲೀಕ ರಾಯ್ ಪ್ರಕಾಶ್ ಸಿಮ್ಸನ್ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಟ್ಟೀರ ರಕ್ಷು ಕಾಳಪ್ಪ, ಸಿಮ್ಸನ್, ಬಟ್ಟೀರ ಮುತ್ತಣ್ಣ ತೆಂಗಿನಕಾಯಿಗೆ ಗುಂಡುಹೊಡೆದು ಶೂಟಿಂಗ್ ಸ್ಪರ್ಧೆಗೆ ಚಾಲನೆ ನೀಡಿದರು.
ಸಮಾರೋಪ: ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದ ವೇದಿಕೆಯಲ್ಲಿ ನಡೆದ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪುತ್ತರಿರ ರೂಪಾ ತಿಮ್ಮಯ್ಯ ಪ್ರಾರ್ಥಿಸಿದರು.
ಕೊಡಗಿನಲ್ಲಿ ಕೋವಿ ಹಕ್ಕಿಗೆ ಹೆಚ್ಚಿನ ಮಾನ್ಯತೆ ಇದೆ. ಆದ್ದರಿಂದ ನಾಪೋಕ್ಲುವಿನಲ್ಲಿ ಒಳಾಂಗಣ ಹಾಗೂ ಹೊರಾಂಗಣ ಶೂಟಿಂಗ್ ಕೇಂದ್ರ ಸ್ಥಾಪಿಸಲು ಸರಕಾರಕ್ಕೆ ಒತ್ತಾಯಿಸಿದ್ದು, ಚುನಾವಣೆ ಕಳೆದ ನಂತರ ಶೂಟಿಂಗ್ ಕೇಂದ್ರ ಸ್ಥಾಪನೆಗೆ ಹೆಚ್ಚಿನ ಮುತುವರ್ಜಿ ವಹಿಸುವುದಾಗಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವುಕುಮಾರ್ ನಾಣಯ್ಯತಿ ಳಿಸಿದರು. ಚೆಟ್ಟಳ್ಳಿ ಪ್ರೌಢಶಾಲಾ ಸಂಚಾಲಕ ಹಾಗು ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ, ಚೆಟ್ಟಳ್ಳಿ ಪುಟ್ಟ ಗ್ರಾಮವಾದರೂ ಹಿಂದಿನಿAದಲೂ ಕ್ರೀಡೆಗೆ ಹೆಸರು ವಾಸಿಯಾಗಿದೆ. ಬಟ್ಟೀರ ಕುಟುಂಬಸ್ಥರು ಆಯೋಜಿಸಿರುವ ಶೂಟಿಂಗ್ ಸ್ಪರ್ಧೆ ಪ್ರಶಂಶನಿಯ ಎಂದರು.
ಬಟ್ಟೀರ ರಕ್ಷು ಕಾಳಪ್ಪ ಮಾತನಾಡಿ, ಊರಿನವರ ದಾನಿಗಳ ಸಹಕಾರ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲು ಕಾರಣವಾಯಿತೆಂದರು. ರಾಷ್ಟçಮಟ್ಟದ ರಿನೋಂಡ್ ಶೂಟರ್ ನಲ್ಲಿ ಸಾಧನೆಗೈದ ಸ್ಯಾಮಿಯಲ್ ಸಿಮ್ಮನ್ ಅವರನ್ನು ಬಟ್ಟೀರ ಕುಟುಂಬಸ್ಥರ ಪರಾವಾಗಿ ತೇಲಪಂಡ ಶಿವುಕುಮಾರ್ ನಾಣಯ್ಯನವರು ಸನ್ಮಾನಿಸಿದರು.
ಅತಿಥಿಗಳಾಗಿ ಪುತ್ತರಿರ ಸುಜು ಬಿದ್ದಪ್ಪ, ಪುತ್ತರಿರ ಗಣೇಶ್ ಭೀಮಯ್ಯ, ಕೇಚೆಟ್ಟೀರ ಶಿವು, ಪುತ್ತರಿರ ಪ್ರೇಮಾ ಭೀಮಯ್ಯ, ಬಟ್ಟೀರ ಅಯ್ಯಪ್ಪ, ಬಟ್ಟೀರ ದೇವಯ್ಯ, ಬಟ್ಟೀರ ಪೂರ್ಣಚ್ಚ, ಪುತ್ತರಿರ ಶಿವು ನಂಜಪ್ಪ, ಬಟ್ಟೀರ ಕಾರ್ಯಪ್ಪ, ಬಟ್ಟೀರ ಪಳಂಗಪ್ಪ, ಬಟ್ಟೀರ ಮುತ್ತಣ್ಣ, ಬಟ್ಟೀರ ವೇಣುಗೋಪಾಲ್, ಪುತ್ತರಿರ ರೂಪಾ ತಿಮ್ಮಯ್ಯ, ಮಂಗಳೂರು ಬಜ್ಪೆಯ ಉದ್ಯಮಿ ಸಿಮ್ಸನ್ ರಾಯ್, ಪ್ರಕಾಶ್ ಸಿಮ್ಸನ್ ವೇದಿಕೆಯಲ್ಲಿದ್ದರು.
ಬಟ್ಟೀರ ಬೋಜಣ್ಣ ಸ್ವಾಗತಿಸಿ, ಅಪ್ಪುಟ ನಾಣಯ್ಯ, ಪುತ್ತರಿರ ಪಪ್ಪು ತಿಮ್ಮಯ್ಯ ನಿರೂಪಿಸಿದರು.
ಸ್ಪರ್ಧಾ ವಿಜೇತರು: ೧೨ ಬೋರ್ ಶೂಟಿಂಗ್ನಲ್ಲಿ ೧೨೭ ಸ್ಪರ್ಧೆಗಳು, ೨೨ ಸ್ಪರ್ಧೆಯಲ್ಲಿ ೧೪೫, ಏರ್ಗನ್ ಸ್ಪರ್ಧೆಯಲ್ಲಿ ೧೨೩ ಸ್ಪರ್ಧಿಗಳು ಭಾಗವಹಿಸಿದರು. ೧೨ ಬೋರ್ ಸ್ಪರ್ಧೆಯಲ್ಲಿ ಅಜ್ಜೇಟಿರ ಗೌತಮ್ ಪ್ರಥಮ, ಅರಂಬೂರು ರಾಹುಲ್ ದ್ವಿತೀಯ, ಕೇಚಿರ ಶಬ್ದ್ ತೃತೀಯ, ಪುತ್ತರಿರ ಕಾರ್ತಿಕ್ ಕಾರ್ಯಪ್ಪ ನಾಲ್ಕನೇ ಸ್ಥಾನ, .೨೨ ರೈಫಲ್ ಸ್ಪರ್ಧೆಯಲ್ಲಿ ಜೋಸೇಫ್ ಸಾಜಿತ್ ಪ್ರಥಮ, ಕನ್ನಿಕಂಡ ಅಮೂಲ್ಯ ದ್ವಿತೀಯ, ಕೇಚಿರ ಶಬ್ದ್ ತೃತೀಯ, ಚೇರುವಾಳಂಡ ರಶಿ ಅಯ್ಯಪ್ಪ ನಾಲ್ಕನೇ ಸ್ಥಾನ ಪಡೆದರು.
ಏರ್ ಗನ್ ಸ್ಪರ್ಧೆಯಲ್ಲಿ ಕೇಚಿರ ಶಬ್ದ್ ಪ್ರಥಮ, ರಮೇಶ್ ಬಾಬು ದ್ವಿತೀಯ, ಮಹೇಶ್ ತೃತೀಯ ಪಟ್ಟಡ ಬೋಪಣ್ಣ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಪ್ರಥಮ ದ್ವಿತೀಯ ಜಾಗು ತೃತೀಯ ವಿಜೇತರಿಗೆ ನಗದು ಹಾಗೂ ಟ್ರೋಫಿ ನೀಡಲಾಯಿತು.
ನಾಲ್ಕನೆ ವಿಜೇತರಿಗೆ ಮುಳಿಯ ಜ್ಯುವೆಲ್ಲರಿಯಿಂದ ಬೆಳ್ಳಿಯ ನಾಣ್ಯ ನೀಡಲಾಯಿತು. ಪುತ್ತರಿರ ರಿಶಾಂಕ್ ನಂಜಪ್ಪ, ಮಣವಟ್ಟಿರ ವಚನ್ ಕಾಳಪ್ಪ ಹಾಗೂ ಪುಟ್ಟ ಬಾಲಕಿ ಮೇರಿಗೆ ಅಪ್ ಕಮ್ಮಿಂಗ್ ಶೂಟರ್ ಬಹುಮಾನವನ್ನು ಅತಿಥಿಗಳು ನೀಡಿದರು.