ಚೆಯ್ಯಂಡಾಣೆ, ಜ. ೩೧: ಚೇಲಾವರ ಗ್ರಾಮದ ವಾರ್ಡ್ ಸಭೆ ತಾ. ೧ ರಂದು (ಇಂದು) ಅಪರಾಹ್ನ ೨ ಗಂಟೆಗೆ ಗ್ರಾ.ಪಂ. ಸದಸ್ಯ ಎಂ.ಬಿ. ಈರಪ್ಪ ಅವರ ಅಧ್ಯಕ್ಷತೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೊನ್ನೋಲ ಚೇಲಾವರದಲ್ಲಿ ನಡೆಯಲಿದೆ.

ತಾ. ೨ ರಂದು ಕೋಕೇರಿ ಗ್ರಾಮದ ವಾರ್ಡ್ ಸಭೆ ಪೂರ್ವಾಹ್ನ ೧೦.೩೦ ಗಂಟೆಗೆ ಗ್ರಾ.ಪಂ. ಸದಸ್ಯೆ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ ಕಟ್ಟಡ ಕೋಕೇರಿಯಲ್ಲಿ, ಕರಡ ಗ್ರಾಮದ ವಾರ್ಡ್ ಸಭೆಯು ಅಪರಾಹ್ನ ೨ ಗಂಟೆಗೆ ಗ್ರಾ.ಪಂ. ಸದಸ್ಯರಾದ ವಿಲಿನ್ ಬೇಪುಡಿಯಂಡ ಅಧ್ಯಕ್ಷತೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣ ಕರಡದಲ್ಲಿ ನಡೆಯಲಿದೆ. ತಾ. ೩ ರಂದು ಅರಪಟ್ಟು ಗ್ರಾಮದ ವಾರ್ಡ್ ಸಭೆ ಪೂರ್ವಾಹ್ನ ೧೦.೩೦ ಗಂಟೆಗೆ ಗಾ.ಪ. ಸದಸ್ಯೆ ಯು.ಪಿ. ಕವಿತ ಅಧ್ಯಕ್ಷತೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.