ನಾಪೋಕ್ಲು, ಜ. ೩೦: ಕಾಫಿ ಮಂಡಳಿಯಿAದ ಕೊಡಗು ಜಿಲ್ಲೆಯಲ್ಲಿ ಕಾಫಿ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಅಗತ್ಯವಾದ ನೀರಾವರಿ ಸೌಲಭ್ಯ ಪೈಪುಗಳು ಹಾಗೂ ಪಂಪ್ ಸೆಟ್‌ಗಳನ್ನು ಖರೀದಿಸಲು ಅಗತ್ಯ ಸಹಾಯಧನ ನೀಡಲಾಗುವುದು. ಮಾತ್ರವಲ್ಲದೆ ಹಳೆತೋಟವನ್ನು ಹೊಸ ತೋಟವನ್ನಾಗಿ ಮಾರ್ಪಡಿಸಲು ಸಹಾಯಧನ ಪಡೆಯಲು ಮಾರ್ಚ್ ೩೧ರೊಳಗೆ ಬೆಳೆಗಾರರು ಅರ್ಜಿ ಸಲ್ಲಿಸಿ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾಫಿ ಮಂಡಳಿಯ ಉಪನಿರ್ದೇಶಕ ಡಾ. ಚಂದ್ರಶೇಖರ್ ತಿಳಿಸಿದರು. ನಾಪೋಕ್ಲುವಿನಲ್ಲಿ ಸೋಮವಾರ ಕಾಫಿ ಮಂಡಳಿ ಹಾಗೂ ಬೆಳೆಗಾರರ ನಡುವೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರೈತರಿಗೆ ಸಿಗುವ ಸೌಲಭ್ಯಗಳು ಮತ್ತು ಕಾಫಿ ತೋಟದ ನಿರ್ವಹಣೆ, ಮಣ್ಣು ಪರೀಕ್ಷೆ ಸಮಗ್ರ ಮಾಹಿತಿ ಹಾಗೂ ಮುಂದಿನ ದಿನಗಳಲ್ಲಿ ರೈತರ ತೋಟಗಳಿಗೆ ಭೇಟಿ ನೀಡಿ ಮಣ್ಣು ಪರೀಕ್ಷೆ ಮಾಡುವುದು ಹಾಗೂ ಕಪಾತು ತರಬೇತಿ ನೀಡುವುದು ಸೇರಿದಂತೆ ಕಾಫಿ ತೋಟದ ನಿರ್ವಹಣೆಯ ಬಗ್ಗೆ ಹಾಗೂ ಮಂಡಳಿಯ ಮೂಲಕ ದೊರಕುವ ಸೌಲಭ್ಯಗಳ ಬಗ್ಗೆ ಅವರು ಮಾಹಿತಿ ಯನ್ನು ಬೆಳೆಗಾರರಿಗೆ ನೀಡಿದರು.

ಈ ಸಂದರ್ಭ ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ.ಸಣ್ಣುವಂಡ ಕಾವೇರಪ್ಪ ಮಾತನಾಡಿ, ಕಾಫಿ ಬೆಳೆಗಾರರು ವರ್ಷವಿಡಿ ಕಷ್ಟಪಟ್ಟು ದುಡಿದು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ ವ್ಯಾಪಾರಿಗಳಿಂದ ಶೋಷಣೆ ಗೊಳಗಾಗುತ್ತಿದ್ದಾರೆ. ಮಾಯಿಶ್ಚರ್, ಔಟ್ ಟರ್ನ್ ನೆಪದಲ್ಲಿ ಬೆಳೆಗಾರರು ವ್ಯಾಪಾರಸ್ಥರಿಂದ ಶೋಷಣೆ ಗೊಳಗಾಗುತ್ತಿದ್ದಾರೆ ಇದನ್ನು ತಪ್ಪಿಸುವಲ್ಲಿ ಮಂಡಳಿ ಕಾರ್ಯೋನ್ನುಖವಾಗಬೇಕು ಎಂದರು. ಕಾಫಿ ಗಿಡಗಳ ಚಿಗುರು ಕಸಿ ಮಾಡುವ ಸಂಬAಧ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ತರಬೇತಿ ನೀಡುವ ಅಗತ್ಯವಿದೆ. ಕಾಫಿ ತೋಟಗಳ ಮಣ್ಣಿನ ಪರೀಕ್ಷೆಯನ್ನು ಕೈಗೊಳ್ಳುವುದಕ್ಕೆ ಸೂಕ್ತ ವ್ಯವಸ್ಥೆಯಾಗಬೇಕು ಎಂದರು.

ಕಾಫಿ ಬೆಳೆಗಾರ ನೂರಂಬಾಡ ಉದಯಶಂಕರ್ ಮಾತನಾಡಿ ಭಾರತದಲ್ಲಿ ಕೃಷಿಯಿಂದಾಗಿ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿದೆ. ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಮಂಡಳಿ ಹಾಗೂ ಸರ್ಕಾರ ಕ್ರಮ ಕೈಗೊಳ್ಳಬೇಕು ಉತ್ಪನ್ನಕ್ಕೆ ತಕ್ಕ ದರ ದೊರೆತಲ್ಲಿ ಬೆಳೆಗಾರರಿಗೆ ಸಾಲದ ಅಗತ್ಯವಿಲ್ಲ ಎಂದರು. ಬೆಳೆಗಾರ ಕುಂಡ್ಯೋಳAಡ ರಮೇಶ್ ಮುದ್ದಯ್ಯ ಮಾತನಾಡಿ ಕಾಫಿ ಬೆಳೆಗಾರರಿಗೆ ಇಳುವರಿಗೆ ತಕ್ಕ ದರ ಲಭಿಸುತ್ತಿಲ್ಲ ಎಂದರು.

ಕಾಫಿ ಮಂಡಳಿಯ ಅಧಿಕಾರಿ ಗಳಾದ (ಜೆಎಲ್‌ಓ) ಅಜಿತ್ ಕುಮಾರ್ ರಾವತ್, ಚೆÀಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಮಂಜುನಾಥ್ ರೆಡ್ಡಿ ಇದ್ದರು.

ಈ ಸಂದರ್ಭ ಬೆಳೆಗಾರರಾದ ಬಿದ್ದಾಟಂಡ ಜಿನ್ನು ನಾಣಯ್ಯ, ಶಿವಚಾಳಿಯಂಡ ಜಗದೀಶ್, ಕಿಶೋರ್, ಕುಲ್ಲೇಟ್ಟೀರ ಅರುಣ್ ಬೇಬ, ಅಜಿತ್ ನಾಣಯ್ಯ, ಪಾಡಿಯಮ್ಮಂಡ ಮನು ಮಹೇಶ್, ಕನ್ನಂಬೀರ ಸುದಿ ತಿಮ್ಮಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.