ಕುಶಾಲನಗರ, ಜ.೩೦: ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭಗೊAಡಿದೆ. ರಾಜ್ಯಕ್ಕೆ ಮುಖ್ಯಮಂತ್ರಿಗಳನ್ನು ನೀಡಿದ ಹೆಮ್ಮೆಯ ಕುಶಾಲನಗರ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಪ್ರಥಮ ಕನ್ನಡ ಹಬ್ಬ ಫೆ. ೩ ರಂದು ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆಯಲಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚುರಂಜನ್ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ರಚನೆಗೊಂಡಿದ್ದು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ ಕೇಶವ ಕಾಮತ್ ಸಮಿತಿಯ ಗೌರವಾಧ್ಯಕ್ಷರಾಗಿ, ತಾಲೂಕು ಅಧ್ಯಕ್ಷರಾದ ಕೆ.ಎಸ್ ಮೂರ್ತಿ ಕಾರ್ಯಾಧ್ಯಕ್ಷತೆಯಲ್ಲಿ ವಿವಿಧ ಉಪ ಸಮಿತಿಗಳು ರಚನೆಗೊಂಡಿದ್ದು, ಅದ್ಧೂರಿಯ ಸಮ್ಮೇಳನಕ್ಕೆ ಪೂರ್ವ ಸಿದ್ಧತೆ ನಡೆದಿದೆ.

ಫೆ.೩ ರಂದು ಬೆಳಿಗ್ಗೆ ೮ ಗಂಟೆಗೆ ರೈತ ಸಹಕಾರ ಭವನ ಆವರಣದಲ್ಲಿ ಕುಶಾಲನಗರ ಪುರಸಭೆ ಅಧ್ಯಕ್ಷರಾದ ಬಿ.ಜಯವರ್ಧನ್ ರಾಷ್ಟç ದ್ವಜಾರೋಹಣ, ಜಿಲ್ಲಾಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಕನ್ನಡ ಸಾಹಿತ್ಯ ಪರಿಷತ್ ಧ್ವಜಾರೋಹಣ ನೆರವೇರಿಸುವರು. ಕನ್ನಡ ಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷ ಕೆ.ಎಸ್ ಮೂರ್ತಿ ನೆರವೇರಿಸಲಿದ್ದಾರೆ. ಇದೇ ಸಂದರ್ಭ ಕುಶಾಲನಗರ ಪಟ್ಟಣದಲ್ಲಿ ಗಣ್ಯರ ನೆನಪಿನ ದ್ವಾರಗಳ ಉದ್ಘಾಟನೆ ಏಕ ಕಾಲಕ್ಕೆ ನಡೆಯಲಿದೆ. ಎಸ್.ಎನ್. ನರಸಿಂಹ ಮೂರ್ತಿ, ವಾಲ್ನೂರು ವೀರಪ್ಪಗೌಡ, ಕೂಡಿಗೆ ಮೂಡ್ಲಿಗೌಡ, ಗುಡ್ಡೆಹೊಸೂರು ಬಿ.ಟಿ ವಿಶ್ವನಾಥ, ಎಸ್.ಎನ್ ಲಕ್ಷಣ ಶೆಟ್ಟಿ ಹೆಸರಿನದ್ವಾರ ನಿರ್ಮಿಸಲಾಗಿದ್ದು, ತಾಲೂಕಿನ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಇದೇ ವೇಳೆಗೆ ಗುಂಡೂರಾವ್ ಹೆಸರಿನ ಸಭಾಂಗಣವನ್ನು ಹಿರಿಯ ನಾಗರಿಕರಾದ ಜಿ.ಎ¯.ï ನಾಗರಾಜ್ ಉದ್ಘಾಟಿಸಲಿದ್ದು, ಕೊಡಗಿನ ಗೌರಮ್ಮ ವೇದಿಕೆ ಉದ್ಘಾಟನೆಯನ್ನು ಕಸಾಪ ವಿಶೇಷ ಆಹ್ವಾನಿತರಾದ ಬಿ.ಬಿ ಭಾರತೀಶ್ ಉದ್ಘಾಟಿಸಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ ಕುಶಾಲನಗರ ಕೊಪ್ಪ ಗಡಿ ಭಾಗದ ಕಾವೇರಿ ನದಿ ದಂಡೆಯಿAದ ಮುಖ್ಯರಸ್ತೆ ಮೂಲಕ ರೈತ ಸಹಕಾರ ಭವನದ ವೇದಿಕೆವರೆಗೆ ಸಾಗಲಿದೆ. ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ಬಿ.ಆರ್ ನಾರಾಯಣ ಅವರನ್ನು ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಗುವುದು. ಈ ಸಂದರ್ಭ ಮೆರವಣಿಗೆಯನ್ನು ಹಿರಿಯ ಸಾಹಿತಿಗಳಾದ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಉದ್ಘಾಟಿಸುವರು.

ಕಲಾತಂಡಗಳ ಉದ್ಘಾಟನೆಯನ್ನು ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ನೆರವೇರಿಸುವರು. ಸಭಾಂಗಣದ ಬಳಿ ವಿವಿಧ ಮಳಿಗೆಗಳ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿಸುರೇಶ್, ಚಿತ್ರಕಲಾ ಮಳಿಗೆಗಳನ್ನು ವೃತ್ತ ನಿರೀಕ್ಷಕರಾದ ಬಿ.ಜಿ ಮಹೇಶ್ ಉದ್ಘಾಟಿಸಲಿದ್ದಾರೆ.

ಅಂದು ಬೆಳಗ್ಗೆ ೧೦.೩೦ ಕ್ಕೆ ಕುಶಾಲನಗರ ರೈತ ಸಹಕಾರ ಭವನದಲ್ಲಿ ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೆರವೇರಿಸುವರು. ಕ್ಷೇತ್ರ ಶಾಸಕರಾದ ಎಂ.ಪಿ ಅಪ್ಪಚ್ಚುರಂಜನ್‌ಆಶಯ ನುಡಿಗಳನ್ನಾಡಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಎಂ.ಪಿ ಕೇಶವ ಕಾಮತ್ ಅವರ ಪ್ರಾಸ್ತಾವಿಕ ನುಡಿಗಳೊಂದಿಗೆ ಸಮ್ಮೇಳನಾಧ್ಯಕ್ಷರಾದ ಹಿರಿಯ ಪತ್ರಕರ್ತರು ಸಾಹಿತಿಗಳಾದ ಬಿ.ಆರ್ ನಾರಾಯಣ ಅವರ ಭಾಷಣ ನಡೆಯಲಿದೆ. ಮುಖ್ಯ ಭಾಷಣಕಾರರಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲ ಸಚಿವರಾದ ಡಾ. ಪಿ.ಎಲ್‌ಧರ್ಮ ಅವರು ಪಾಲ್ಗೊಳ್ಳಲಿದ್ದಾರೆ. ಸ್ಮರಣ ಸಂಚಿಕೆಯ ಮುಖಪುಟವನ್ನು ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಬಿಡುಗಡೆಗೊಳಿಸಲಿದ್ದಾರೆ.

೧೨.೩೦ ರಿಂದ ಗೀತಾಗಾಯನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹಿರಿಯ ಕಲಾವಿದರಾದ ವಿದ್ವಾನ್ ಬಿ.ಸಿ. ಶಂಕ್ರಯ್ಯ ಅವರು ಉದ್ಘಾಟಿಸಲಿದ್ದಾರೆ. ಕುಶಾಲನಗರ ತಾಲೂಕಿನ ಉದಯೋನ್ಮುಖ ಗಾಯಕರು ಪಾಲ್ಗೊಳ್ಳುವರು. ಮಧ್ಯಾಹ್ನ ೨ ಗಂಟೆಯಿAದ ನಡೆಯಲಿರುವ ವಿಚಾರಗೋಷ್ಠಿ ಕುಶಾಲನಗರ ವಕೀಲರ ಸಂಘದ ಅಧ್ಯಕ್ಷರಾದ ಆರ್.ಕೆ ನಾಗೇಂದ್ರಬಾಬು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕುಶಾಲನಗರ ತಾಲೂಕಿನ ಅಭಿವೃದ್ಧಿಯ ಆಶೋತ್ತರಗಳು ವಿಷಯದ ಬಗ್ಗೆ ತಾಲೂಕು ರಚನಾ ಹೋರಾಟಗಾರ ವಿ.ಪಿ ಶಶಿಧರ್ ಆಶಯ ನುಡಿಗಳನ್ನಾಡಲಿದ್ದಾರೆ. ಕುಶಾಲನಗರ ತಾಲೂಕಿನ ಸಾಹಿತಿಗಳ ಅವಲೋಕನ ವಿಷಯದ ಬಗ್ಗೆ ಉಪನ್ಯಾಸಕ ಮೇ.ನ ವೆಂಕಟನಾಯಕ, ಗ್ರಾಮೀಣ ಮಹಿಳೆ ಮತ್ತು ಸಬಲೀಕರಣ ವಿಷಯದ ಬಗ್ಗೆ ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ಹೆಚ್, ರೋಹಿತ್ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ೩ ರಿಂದ ೪ ಗಂಟೆವರೆಗೆ ಕವಿಗೋಷ್ಠಿ ಆಯೋಜಿಸಲಾಗಿದ್ದು, ಸಾಹಿತಿ ಫ್ಯಾನ್ಸಿ ಮುತ್ತಣ್ಣ ಉದ್ಘಾಟಿಸಲಿದ್ದಾರೆ. ಚುಟುಕು ಕವಿ ಹಾ.ತಿ. ಜಯಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ತಾಲೂಕಿನ ಹಲವು ಕವಿಗಳು ಕವನ ವಾಚಿಸಲಿದ್ದಾರೆ. ಬಹಿರಂಗ ಅಧಿವೇಶನ ೪ ಗಂಟೆಗೆ ಹಮ್ಮಿಕೊಳ್ಳಲಾಗಿದ್ದು, ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಕೆ.ಎಸ್. ಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ನಾಗರಾಜು, ಟಿ.ವಿ ಶೈಲ ಮತ್ತು ಕೋಶಾಧಿಕಾರಿ ಕೆ.ವಿ ಉಮೇಶ್ ನಿರ್ಣಯ ಮಂಡಿಸಲಿದ್ದಾರೆ.

ಸಮಾರೋಪ ಸಮಾರಂಭ ಸಂಜೆ ೫ ಗಂಟೆಗೆ ಸಮ್ಮೇಳನ ಕಾರ್ಯಾಧ್ಯಕ್ಷ ಕೆ.ಎಸ್. ಮೂರ್ತಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರಾದ ಬಿ.ಆರ್. ನಾರಾಯಣ ಆಶಯ ನುಡಿಗಳನ್ನಾಡುವರು. ಕಸಾಪ ಮಾಜಿ ಜಿಲ್ಲಾಧ್ಯಕ್ಷರಾದ ಟಿ.ಪಿ ರಮೇಶ್ ಸಮಾರೋಪ ಭಾಷಣ ಮಾಡಲಿದ್ದು, ವಿಶೇಷ ಅತಿಥಿಗಳಾಗಿ ಕಸಾಪ ಹಾಸನ ಜಿಲ್ಲಾಧ್ಯಕ್ಷರಾದ ಡಾ, ಮಲ್ಲೇಶ್‌ಗೌಡ ಪಾಲ್ಗೊಳ್ಳುವರು. ಸಮ್ಮೇಳನದ ಗೌರವಾಧ್ಯಕ್ಷರಾದ ಎಂ.ಪಿ ಕೇಶವ ಕಾಮತ್ ಮಾತನಾಡಲಿದ್ದಾರೆ. ಸಂಜೆ ೬ ಗಂಟೆಯಿAದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಫಿ ಬೆಳೆಗಾರರಾದ ಡಾ.ಮಂಥರ್‌ಗೌಡ ಉದ್ಘಾಟಿಸಲಿದ್ದಾರೆ. ಜಲ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ ಚಂದ್ರಕಲಾ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲಾಗುತ್ತಿದ್ದು, ಸಹಕಾರ ಕ್ಷೇತ್ರದಲ್ಲಿ ಎಂ.ಎನ್. ಕುಮಾರಪ್ಪ, ಟಿ.ಆರ್ ಶರವಣಕುಮಾರ್, ಸಾಹಿತ್ಯ ಕ್ಷೇತ್ರದಲ್ಲಿ ಟಿ.ಕೆ. ಚಿನ್ನಸ್ವಾಮಿ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್.ಎನ್ ನಾಗಾಚಾರಿ, ಪತ್ರಿಕಾ ಕ್ಷೇತ್ರದಲ್ಲಿ ಸುನೀಲ್ ಪೊನ್ನೆಟ್ಟಿ, ಸಿನಿಮಾ ಕ್ಷೇತ್ರದಲ್ಲಿ ಸಿಂಚನಾ ಪ್ರೀತಂ ಶೆಟ್ಟಿ, ಸಮಾಜ ಸೇವೆಯಲ್ಲಿ ಆರ್.ಕೆ. ನಾಗೇಂದ್ರ ಬಾಬು, ಎಂ.ಕೆ ದಿನೇಶ್, ಮಹಿಳಾ ಕ್ಷೇತ್ರದಲ್ಲಿ ಲೀಲಾ ಮೇದಪ್ಪ, ಕಲಾ ಕ್ಷೇತ್ರದಲ್ಲಿ ಆರ್.ರವಿ, ಕೃಷಿ ಕ್ಷೇತ್ರದಲ್ಲಿ ಮಿನಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಇದೇ ಸಂದರ್ಭ ೨೦೨೨-೨೩ ನೇ ಸಾಲಿನ ೧೦ ನೇ ತರಗತಿಯಲ್ಲಿ ಕನ್ನಡ ಭಾಷೆಯಲ್ಲಿ ಶೇ.೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತದೆ.