ಬೆಂಗಳೂರು, ಜ. ೩೦: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಮ್ಮಾ ಕಾಣೆ, ಬಾಣೆ ಜಮೀನು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಟ್ಟ ಹಾಡಿ, ಮೈಸೂರು ಪ್ರಾಂತ್ಯದಲ್ಲಿ ಕಾಣೆ, ಸೊಪ್ಪಿನಬೆಟ್ಟ, ಕೊಡಗು ಜಿಲ್ಲೆಯಲ್ಲಿ ಜಮ್ಮಾ ಮತ್ತು ಬಾಣೆ ಜಮೀನುಗಳನ್ನು ಅಧಿಬೋಗದಾರರಿಗೆ ಮಂಜೂರು ಮಾಡುವ ಸಂಬAಧ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೭೯(೨)ಕ್ಕೆ ತಿದ್ದುಪಡಿ ತರಲು ರಾಜ್ಯ ಸಚಿವ ಸಂಪುಟ ಉಪ ಸಮಿತಿ ಸೂಚಿಸಿದೆ.

ಗೋಮಾಳ, ಗಾಯರಾಣ, ಹುಲ್ಲಬನ್ನಿ, ಸೊಪ್ಪಿನ ಬೆಟ್ಟ ಸೇರಿದಂತೆ ಗ್ರಾಮೀಣ ಪ್ರದೇಶದ ಸರಕಾರಿ ಜಮೀನುಗಳನ್ನು ಮಂಜೂರು ಮಾಡುವ ಕುರಿತು ನೀತಿ ರೂಪಿಸಲು ರಚಿಸಲು ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಅವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯು ಜನವರಿ ೨೪ ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೭೯(೨)ರಲ್ಲಿರುವ ವಿಶೇಷಾಧಿಕಾರಿಗಳನ್ನು ಮುಂದುವರೆಸುತ್ತಾ ಅವುಗಳನ್ನು ಅಧಿಭೋಗದಾರರಿಗೆ ಅವರ ಹಿಡುವಳಿ ಜಮೀನನ್ನು ಹೊರತುಪಡಿಸಿ ೫ ಎಕರೆಗೆ ಮೀರದಂತೆ ಸರಕಾರವು ನಿರ್ಧರಿಸಬಹುದಾದಂತಹ ಗುತ್ತಿಗೆ ಮೌಲ್ಯವನ್ನು ವಿಧಿಸಿ ೩೦ ವರ್ಷಗಳ ಅವದಿಗೆ ಗುತ್ತಿಗೆಗೆ ನೀಡಲು ಅನುವಾಗುವಂತೆ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಅವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿರುವುದು ಸಭಾ ನಡಾವಳಿಯಿಂದ ತಿಳಿದು ಬಂದಿದೆ.

ಅದೇ ರೀತಿ ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೭೯(೨)ರ ಅಡಿ ಯಾವುದೇ ಭೂಮಿಯನ್ನು ಅರಣ್ಯವೆಂದು ವರ್ಗೀಕರಿಸಲ್ಪಟ್ಟಿಲ್ಲ. ಇದೇ ಕಾಯ್ದೆ ಕಲಂ ೯೪ ಬಿ ಅಡಿ ಅನಧಿಕೃತ ಸಾಗುವಳಿದಾರರಿಗೆ ಸರಕಾರಿ ಜಮೀನುಗಳನ್ನು ಮಂಜೂರು ಮಾಡುವಾಗ ಕಲಂ ೯೪ ಬಿ (೩)ರಡಿ ಅರಣ್ಯ ಭೂಮಿಯೆಂದು ವರ್ಗೀಕೃತವಾಗಿರುವ ೭೯ನೇ ಪ್ರಕರಣದ ಎರಡನೇ ಉಪ ಪ್ರಕರಣದಲ್ಲಿ ಯಾವುದೇ ಭೂಮಿಯನ್ನು ಹೊರತುಪಡಿಸಿ ಇತರ ಅರಣ್ಯ ಭೂಮಿಗೆ ಅನ್ವಯಿಸತಕ್ಕದ್ದಲ್ಲ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಕಲಂ ೭೯(೨)ರಡಿಯಲ್ಲಿ ಉಲ್ಲೇಖಿಸಿರುವ ಎಲ್ಲಾ ಭೂಮಿಗಳನ್ನು ಅರಣ್ಯ ಎಂದು ಪರಿಗಣಿಸಲು ಬರುವುದಿಲ್ಲ ಎಂದು ಭೂಮಾಪನಾ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಆಯುಕ್ತರು ಸಭೆ ಗಮನಕ್ಕೆ ತಂದಿರುವುದು ನಡಾವಳಿಯಿಂದ ಗೊತ್ತಾಗಿದೆ.

ಆದರೆ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತç ಇಲಾಖೆಯ ಅಧಿಕಾರಿಗಳು ಕರ್ನಾಟಕ ಭೂ ಕಂದಾಯ ಕಾಯ್ದೆ ೩ ೧೯೬೪ರ ಕಲಂ ೯೪ ಬಿ (೩)ರಡಿ ಅರಣ್ಯ ಭೂಮಿಯೆಂದು ವರ್ಗೀಕೃತವಾದ ೭೯ನೇ ಪ್ರಕರಣದ ಉಪ ಪ್ರಕರಣದಡಿಯಲ್ಲಿ ತಿಳಿಸಿರುವುದರಿಂದ ಸದರಿ ಭೂಮಿಯ ಮಂಜೂರಾತಿಗೆ ಅರಣ್ಯ ಸಂರಕ್ಷಣಾ ಕಾಯ್ದೆ ೧೯೮೦ರ ಅಡಿಯಲ್ಲಿ ಕೇಂದ್ರ ಸರಕಾರದ ಪೂರ್ವಾನುಮೋದನೆ ಅವಶ್ಯಕತೆ ಇದೆ ಎಂದು ಅಭಿಪ್ರಾಯಿಸಿರುವುದು ತಿಳಿದು ಬಂದಿದೆ.

ಜಮ್ಮಾ ಬಾಣೆ, ಬೆಟ್ಟ, ಸೊಪ್ಪಿನ ಬೆಟ್ಟ, ಕಾಣೆಯಂತಹ ವಿಶೇಷ ಹಕ್ಕಿನ ಜಮೀನುಗಳನ್ನು ಅಧಿಭೋಗದಾರರಿಗೆ ಮಂಜೂರು ಮಾಡಲು ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ರ ಕಲಂ ೭೯(೨)ರಲ್ಲಿ ವಿಶೇಷಾಧಿಕಾರ ನೀಡಲಾಗಿದೆ.