ಮಡಿಕೇರಿ, ಜ. ೩೦: ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾ. ಎಂ.ಎ. ಅಯ್ಯಪ್ಪ ವರ್ಗಾವಣೆಗೊಂಡಿದ್ದಾರೆ. ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಯ್ಯಪ್ಪ ಅವರನ್ನು ನಿಯುಕ್ತಿಗೊಳಿಸಲಾಗಿದೆ. ಜಿಲ್ಲೆಯ ನೂತನ ಎಸ್ಪಿಯಾಗಿ ಬೆಂಗಳೂರು ನಗರ ಕಮಾಂಡ್ ಸೆಂಟರ್‌ನ ಡಿಸಿಪಿ ಆಗಿದ್ದ ಕೆ. ರಾಮರಾಜನ್ ಅವರನ್ನು ನೇಮಕಗೊಳಿಸಿದ್ದು,

(ಮೊದಲ ಪುಟದಿಂದ) ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪೊಲೀಸ್ ಗೌರವ ರಕ್ಷೆಯೊಂದಿಗೆ ನಿಕಟಪೂರ್ವ ವರಿಷ್ಠಾಧಿಕಾರಿ ಕ್ಯಾ. ಮಲಚೀರ ಎ ಅಯ್ಯಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಎಸ್.ಪಿ. ರಾಮರಾಜನ್, ಕೊಡಗು ದೇವರ ಭೂಮಿ. ಉತ್ತಮ ವಾತಾವರಣ ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿ ಕೆಲಸ ಮಾಡಲು ಉತ್ಸಾಹ ಇದೆ. ಇಲ್ಲಿನ ಕಾನೂನು ಹಾಗೂ ಸುವ್ಯವಸ್ಥೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗುವುದು ಎಂದ ಅವರು, ಜಿಲ್ಲೆಯ ಭದ್ರತೆಯ ಹಿತದೃಷ್ಟಿಯಿಂದ ಜನತೆಯ ಸಹಕಾರ ಅಗತ್ಯ ಎಂದು ಹೇಳಿದರು.

ನಿರ್ಗಮಿತ ಎಸ್.ಪಿ. ಅಯ್ಯಪ್ಪ ಮಾತನಾಡಿ, ನನ್ನದೇ ಜಿಲ್ಲೆಯಲ್ಲಿ ಕೆಲಸ ಮಾಡಿರುವುದು ಹೆಮ್ಮೆ ತಂದಿದೆ. ಸವಾಲಿನ ನಡುವೆ ಜನಪರವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಇನ್ನೂ ಕೆಲವೊಂದು ಕೆಲಸ ಮಾಡುವುದು ಬಾಕಿ ಇತ್ತು. ಕಾನೂನು, ಸುವ್ಯವಸ್ಥೆ ಪಾಲನೆಗೆ ಕೊಡಗಿನ ಜನ ನೂತನ ಅಧಿಕಾರಿಯೊಂದಿಗೆ ಕೈಜೋಡಿಸುವಂತೆ ಕೋರಿದ ಅವರು, ಘಂಟೆ ಕಳ್ಳತನ, ಮಾದಕ ವ್ಯಸನ ಜಾಲ ಸೇರಿದಂತೆ ಇನ್ನಿತರ ಅಪರಾಧಗಳನ್ನು ಪತ್ತೆ ಮಾಡಿರುವುದು ವೃತ್ತಿ ಜೀವನದಲ್ಲಿ ಅವಿಸ್ಮರಣೀಯ. ಜಿಲ್ಲೆಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ತನ್ನೊಂದಿಗೆ ಕೈಜೋಡಿಸಿದ್ದಾರೆ ಎಂದರು.

ಪೊಲೀಸ್ ಗೌರವ ವಂದನೆಯೊAದಿಗೆ ಅಯ್ಯಪ್ಪ ಅವರನ್ನು ಬೀಳ್ಕೊಡಲಾಯಿತು.