ಮಡಿಕೇರಿ, ಜ. ೩೦: ವಿಧಾನಸಭಾ ಚುನಾವಣೆ ಹಿನ್ನೆಲೆ ಹೈದರಬಾದ್‌ನಿಂದ ೭೬೮ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಜಿಲ್ಲೆಗೆ ಆಗಮಿಸಿದ್ದು, ಜಿಲ್ಲಾಡಳಿತ ಭವನದ ‘ಸ್ಟಾçಂಗ್ ರೂಂ’ನಲ್ಲಿ ಭದ್ರತೆಯಲ್ಲಿ ಇಡಲಾಗಿದೆ.

ಅಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ಹೈದರಬಾದ್‌ನಿಂದ ೨ ಕಂಟೈನರ್‌ನಲ್ಲಿ ಬಂದ ಇ.ವಿ.ಎಂ. ಗಳನ್ನು ಇಳಿಸಿ, ಬಳಿಕ ಬಾರ್ ಕೋಡ್ ಸ್ಕಾö್ಯನ್ ಮಾಡಿ ಸ್ಟಾçಂಗ್ ರೂಂಗೆ ರವಾನಿಸಿ ಸೀಲ್ ಮಾಡಲಾಯಿತು.

ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಡಾ. ನಂಜುAಡೇಗೌಡ, ಉವಿಭಾಗಧಿಕಾರಿ ಯತೀಶ್ ಉಲ್ಲಾಳ, ಇವಿಎಂ ನೋಡೇಲ್ ಅಧಿಕಾರಿ ಬಸಪ್ಪ, ಭಾರತೀಯ ಜನತಾ ಪಕ್ಷ ಜಿಲ್ಲಾ ಕಾರ್ಯದರ್ಶಿ ಎಸ್.ಸಿ. ಸತೀಶ್, ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಸೇರಿದಂತೆ ಇನ್ನಿತರರು ಹಾಜರಿದ್ದರು.