ಮಡಿಕೇರಿ, ಜ. ೨೮: ಬಾಳೆಲೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವ ಬಾಳೆಲೆ, ಸುಳುಗೋಡು, ದೇವನೂರು ಎ ಮತ್ತು ದೇವನೂರು ಬಿ ಗ್ರಾಮಗಳ ೨೦೨೨-೨೩ನೇ ಸಾಲಿನ ಗ್ರಾಮಸಭೆ ತಾ. ೩೦ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಬಾಳೆಲೆ ಕೊಡವ ಸಮಾಜದ ಸಭಾಂಗಣದಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪೋಡಮಾಡ ಸುಖೇಶ್ ಭೀಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದೆ.