ಸಿದ್ದಾಪುರ, ಜ. ೨೮: ಸಿದ್ದಾಪುರದ ಸಂತ ಜೋಸೆಫರ ಸೇವಾ ಸಂಘದ ವತಿಯಿಂದ ಬಡ ವಿಶೇಷಚೇತನರಿಗೆ ಗಾಲಿ ಕುರ್ಚಿ ವಿತರಣಾ ಕಾರ್ಯಕ್ರಮವು ತಾ. ೨೯ರಂದು (ಇಂದು) ಸಂಜೆ ೫ ಗಂಟೆಗೆ ಸಿದ್ದಾಪುರದ ಸೆಂಟನರಿ ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚೆಟ್ಟಳ್ಳಿಯ ಸಂತ ಸಬಾಷ್ಟಿನ್ ಚರ್ಚ್ನ ಧರ್ಮ ಗುರು ಜೇರಾಲ್ಡ್ ಸಿಕ್ವೇರಾ, ಸಂತ ಜೋಸೆಫರ ಸೇವಾ ಸಂಘದ ಅಧ್ಯಕ್ಷರಾದ ಕುರಿಯ ಕೋಸ್, ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|| ರಾಘವೇಂದ್ರ ಮತ್ತಿತರರು ಭಾಗವಹಿಸಲಿದ್ದಾರೆ.