ಸೋಮವಾರಪೇಟೆ, ಜ. ೨೭: ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ನಿಶಾಂತ್ ಟರ‍್ಸ್ ಸಂಕೀರ್ಣದಲ್ಲಿ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ೧೯ನೇ ಶಾಖೆಯನ್ನು ತೆರೆಯಲಾಗಿದ್ದು, ಕಾಂಗ್ರೆಸ್ ಮುಖಂಡರಾದ ಡಾ. ಮಂಥರ್ ಗೌಡ ಅವರು ನೂತನ ಶಾಖೆಯನ್ನು ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಣಕಾಸು ವ್ಯವಹಾರ ನಡೆಸುವ ಸೊಸೈಟಿಗಳು ಮೊದಲಿಗೆ ತಮ್ಮ ಗ್ರಾಹಕರುಗಳಿಗೆ ಸಾಲದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.

ಗ್ರಾಮೀಣ ಭಾಗಗಳಿಗೆ ಬ್ಯಾಂಕಿAಗ್ ಸೌಲಭ್ಯಗಳನ್ನು ವಿಸ್ತರಿಸುವ ಮೂಲಕ ಜನಸಾಮಾನ್ಯರಲ್ಲಿ ಆರ್ಥಿಕ ವಹಿವಾಟುಗಳ ಬಗ್ಗೆ ತಿಳುವಳಿಕೆ ನೀಡಬೇಕು. ಸಾಲವನ್ನು ನಿರ್ದಿಷ್ಟ ಉದ್ದೇಶಕ್ಕೆ ಬಳಸಿದರೆ ಮಾತ್ರ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು. ಈ ನಿಟ್ಟಿನಲ್ಲಿ ಸಿಬ್ಬಂದಿಗಳು ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ವಹಿವಾಟುಗಳ ಬಗ್ಗೆ ಸಮಗ್ರ ತಿಳುವಳಿಕೆ ನೀಡಬೇಕೆಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸೊಸೈಟಿಯ ನಿರ್ದೇಶಕ ಚಂದ್ರ ಕೋಲ್ಚಾರ್, ನೆರೆಯ ಸುಳ್ಯದಲ್ಲಿ ಆರಂಭಗೊAಡ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ೨೫ನೇ ವರ್ಷ ಪೂರೈಸುತ್ತಿದ್ದು, ಇಂದು ೧೯ನೇ ಶಾಖೆಯಾಗಿ ಸೋಮವಾರಪೇಟೆ ಯಲ್ಲಿ ಕಾರ್ಯಾರಂಭ ಮಾಡಿದೆ. ಕೇವಲ ಹಣಕಾಸು ವ್ಯವಹಾರ ಮಾತ್ರವಲ್ಲದೇ ಶೈಕ್ಷಣಿಕ ರಂಗದಲ್ಲೂ ಸೇವೆ ಸಲ್ಲಿಸುತ್ತಿದೆ ಎಂದರು.

ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂದರ್ಭ ೮.೫೦ ಲಕ್ಷ ಹಣವನ್ನು ಸಹಾಯ ಹಸ್ತವಾಗಿ ನೀಡಲಾಗಿದೆ. ನಷ್ಟ ಅನುಭವಿಸಿದ ಗ್ರಾಹಕರ ಬಡ್ಡಿ ಮನ್ನಾ ಮಾಡಿ, ನೂತನ ಸಾಲ ನೀಡಿ ಆರ್ಥಿಕವಾಗಿ ಮೇಲೆತ್ತುವ ಪ್ರಯತ್ನ ನಡೆಸಿದೆ. ಸದಸ್ಯರುಗಳಿಗೆ ವಾರ್ಷಿಕ ಶೇ. ೧೫ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಸೊಸೈಟಿ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ಪಿ.ಸಿ. ಜಯರಾಮ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯ ಬಿ.ಆರ್. ಮಹೇಶ್, ಕಾಫಿ ಬೆಳೆಗಾರರಾದ ಸುವಿನ ಕೃಪಾಲ್, ಉದ್ಯಮಿ ಜಿ.ಎಸ್. ಮೋಹನ್, ಸೊಸೈಟಿ ನಿರ್ದೇಶಕ ನಿತ್ಯಾನಂದ ಮುಂಡೋಡಿ, ಪಿ.ಎಸ್. ಗಂಗಾಧರ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ. ವಿಶ್ವನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.