ಕುಶಾಲನಗರ, ಜ. ೨೬: ಶ್ರೀ ಪುರಂದರದಾಸರು ಮತ್ತು ಶ್ರೀ ತ್ಯಾಗರಾಜರ ಆರಾಧನೆ ಪ್ರಯುಕ್ತ ಕುಶಾಲನಗರ ಸಮಸ್ತ ಭಜನಾ ಮಂಡಳಿಗಳು ಮತ್ತು ಗಾನಯಾನ ಸಂಸ್ಥೆಗಳ ಆಶ್ರಯದಲ್ಲಿ ನಿರಂತರ ಭಜನೆ ಮತ್ತು ಸಂಗೀತ ಸೇವೆ ಕಾರ್ಯಕ್ರಮಗಳು ಜರುಗಿದವು.
ತಾ. ೨೫ ರಂದು ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೮ ಗಂಟೆತನಕ ವಾದ್ಯ ಸಂಗೀತ, ಭಜನೆ, ಕೀರ್ತನೆ ಕಾರ್ಯಕ್ರಮಗಳು ನಡೆದವು. ಬೆಳಿಗ್ಗೆ ದೀಪ ಪ್ರಜ್ವಲನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಮಾಡಲಾಯಿತು. ಗಾನಯಾನ ಸಂಸ್ಥೆಯ ಪ್ರಮುಖರಾದ ಜನಾರ್ಧನ್ ಮತ್ತಿತರರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಭಜನಾ ಮಂಡಳಿ, ವಿವಿಧ ಭಜನಾ ಮಂಡಳಿ ಕಾರ್ಯಕರ್ತರು ಪಾಲ್ಗೊಂಡಿದ್ದರು.