ಸುಂಟಿಕೊಪ್ಪ, ಜ. ೨೬: ಸುಂಟಿಕೊಪ್ಪ ಕೊಡಗರಹಳ್ಳಿಯ ನೇತಾಜಿ ಯುವಕ ಸಂಘದ ವತಿಯಿಂದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ನೇತಾಜಿ ಸಮುದಾಯಭವನದಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಂಡುವAಡ ಪುನಿತ್ ಪೂಣಚ್ಚ ಅವರ ನೇತೃತ್ವದಲ್ಲಿ ನೇತಾಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಕುರಿತಾಗಿ ಸಂಘದ ಮಾಜಿ ಅಧ್ಯಕ್ಷ ಬಿ.ಸಿ. ದಿನೇಶ್ ಮಾತನಾಡಿ, ಸ್ವಾತಂತ್ರö್ಯ ಹೋರಾಟದಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ಅನನ್ಯವಾದದ್ದು, ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಕಟ್ಟುವ ಮೂಲಕ ಹೋರಾಟ ಮತ್ತು ಕ್ರಾಂತಿಯ ಮೂಲಕ ಸ್ವಾತಂತ್ರö್ಯಗಳಿಕೆಯನ್ನು ಸಾಧಿಸಬಹುದೆಂದು ಅವರು ನಂಬಿದರು. ಅವರ ವ್ಯಕ್ತಿತ್ವ ಮತ್ತು ಬದುಕು ಅತ್ಯಂತ ಸಂಘರ್ಷಮಯವಾಗಿದ್ದು, ಅವರ ಸಾವಿನ ಕುರಿತು ಇಂದಿಗೂ ಒಂದು ತಾರ್ಕಿಕ ಅಂತ್ಯಕ್ಕೆ ಬರಲಾಗದಿರುವುದು ಇದಕ್ಕೆ ಸಾಕ್ಷಿ ಎಂದು ಅವರು ಸ್ಮರಿಸಿದರು.
ಕಾರ್ಯಕ್ರಮದ ಅಂಗವಾಗಿ ಸಮುದಾಯಭವನದಲ್ಲಿ ಗಣಹೋಮವನ್ನು ಶ್ರೀ ಬೈತೂರಪ್ಪ ದೇವಾಲಯದ ಮುಖ್ಯ ಅರ್ಚಕ ಭಾನುಪ್ರಕಾಶ್ ಭಟ್ ಮತ್ತು ರಘುಪತಿ ಭಟ್ ನೇರವೇರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ಸುನಿಲ್ ಕುಮಾರ್ ಕೆ.ವಿ. ಖಜಾಂಚಿ ಮಿಲನ್ ರಾಮಣ್ಣ, ಸಂಘದ ಮಾಜಿ ಅಧ್ಯಕ್ಷ ಡಾ. ಶಶಿಕಾಂತ ರೈ, ಹಿರಿಯರಾದ ಕೆ.ಎಸ್. ಮಂಜುನಾಥ್, ಎಂ.ಎಸ್. ಸುರೇಶ್ ಚಂಗಪ್ಪ, ಪಿ.ಕೆ. ಜಗದೀಶ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.