ವೀರಾಜಪೇಟೆ, ಜ. ೨೬: ನಮ್ಮ ಸಂಸ್ಕೃತಿ ಅತ್ಯಂತ ಪ್ರಾಚೀನವಾದದ್ದು. ಒಂದು ವಿಶಿಷ್ಟ ಪರಂಪರೆ, ಹತ್ತಾರು ಧರ್ಮಗಳು, ನೂರಾರು ಜಾತಿಗಳು, ಸಾವಿರಾರು ಭಾಷೆಗಳನ್ನು ಹೊಂದಿರುವ ವಿಭಿನ್ನ ಸಂಸ್ಕೃತಿಯಿAದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧತೆಯಲ್ಲಿ ಏಕತೆ ಇದೆ. ಸರ್ಕಾರದ ಅಧಿಕಾರ, ಪೌರರ ಹಕ್ಕು ಕರ್ತವ್ಯಗಳು ಹಾಗೂ ಸರ್ಕಾರ ಮತ್ತು ಪ್ರಜೆಗಳ ಮಧ್ಯೆ ಇರುವ ಸಂಬAಧವನ್ನು ತಿಳಿಸುವ ದಾಖಲೆ ಸಂವಿಧಾನವಾಗಿದೆ ಎಂದು ವೀರಾಜಪೇಟೆ ತಹಶೀಲ್ದಾರ್ ಅರ್ಚನಾ ಭಟ್ ಅಭಿಪ್ರಾಯಪಟ್ಟರು.
ರಾಷ್ಟಿçಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಒಂದು ಪರಮಾಧಿಕಾರದ, ಸಮಾಜವಾದಿ ಸರ್ವಧರ್ಮ ಸಮನ್ವಯ ನಾಗರಿಕರಿಗೆ ಸಾಮಾಜಿಕ, ಆರ್ಥಿಕ, ಮತ್ತು ರಾಜಕೀಯ ನ್ಯಾಯ ಮತ್ತು ವಿಚಾರ ಅಭಿವ್ಯಕ್ತಿ ಸ್ವಾತಂತ್ರö್ಯ, ಧರ್ಮ, ಶ್ರದ್ಧೆಯ ಈ ಮೂಲಕ ಜನವರಿ ೨೬ ಜನವರಿ ೧೯೫೦ ರಂದು ಭಾರತದ ಸಂವಿಧಾನ ವನ್ನು ಅಂಗೀಕರಿಸಿ ಭಾರತವನ್ನು ಗಣರಾಜ್ಯ ಎಂದು ಘೋಷಿಸಲಾ ಯಿತು. ರಾಷ್ಟç ರಕ್ಷಣೆ, ನಮ್ಮ ನೆಲ ಜಲ ಇವುಗಳನ್ನು ರಕ್ಷಿಸಲು ನಾವೆಲ್ಲರೂ ಪಣ ತೊಡೋಣ ಎಂದು ಹೇಳಿದರಲ್ಲದೆ ಇಂದು ಕೊಡಗಿನ ಜಾನಪದ ಕಲಾವಿದೆ ರಾಣಿ ಮಾಚಯ್ಯ ಅವರು ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಮುಖ್ಯ ಅತಿಥಿ ಮಹಾವೀರಚಕ್ರ ಪಡೆದ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಗಣಪತಿ ಸಮಾರಂಭ ವನ್ನುದ್ದೇಶಿಸಿ ಮಾತನಾಡಿ ಸಂವಿಧಾನದ ಪ್ರಮುಖ ಆಶಯಗಳಾದ ಸೌಹಾರ್ದತೆ, ಸಹಿಷ್ಣುತೆ ಹಾಗೂ ಸಹಬಾಳ್ವೆಯನ್ನು ಪ್ರತಿಯೊಬ್ಬ ಭಾರತೀಯನು ಚಾಚೂತಪ್ಪದೆ ಪಾಲಿಸಬೇಕಿದೆ. ನಮ್ಮಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಕೇವಲ ಸರಕಾರಿ ಮಾದರಿಯಿಂದ ಕೂಡಿಲ್ಲ. ಅದೊಂದು ಸಂಯೋಜಿತವಾದ ಸಂವಿಧಾನ ಹಾಗೂ ಪ್ರಜಾ ಪ್ರಭುತ್ವಕ್ಕೆ ಮಾರ್ಗದರ್ಶನವಾಗಿದೆ. ಇದನ್ನು ಪ್ರತಿಯೊಬ್ಬರೂ ಅರಿತು ನಡೆದು ಕೊಂಡಾಗ ಮಾತ್ರ ಗಣತಂತ್ರ ವ್ಯವಸ್ಥೆಗೆ ಅರ್ಥಬರುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲಾವಿದ ಬಿ.ಆರ್ ಸತೀಶ್ ಅವರ ರಾಜ್ಯೋತ್ಸವ ಪ್ರಶಸ್ತಿ ಪಡೆದ ಚಿತ್ರಕಲೆಯನ್ನು ಅನಾವರಣಗೊಳಿಸಿ ಅವರನ್ನು ಹಾಗೂ ಮಹಾವೀರಚಕ್ರ ಪಡೆದ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಗಣಪತಿ ಅವರನ್ನು ಸನ್ಮಾನಿಸಲಾ ಯಿತು. ಹ್ಯಾಂಡ್ ಬಾಲ್ ಕ್ರೀಡಾಕೂಟ ದಲ್ಲಿ ರಾಷ್ಟçವನ್ನು ಪ್ರತಿನಿಧಿಸಿದ ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು, ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರು ವವರನ್ನು, ಮತದಾರರ ಗುರುತಿನ ಚೀಟಿ ಒದಗಿಸುವಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ಬೂತ್ ಮಟ್ಟದ ಅಧಿಕಾರಿಗಳನ್ನು, ಪುರಸಭೆಯ ತುಳಸಿ, ಸುಬ್ಬಮ್ಮ, ಶಂಕರಮ್ಮ ಎಂಬ ಮೂವರು ಪೌರಕಾರ್ಮಿಕರು ಸೇರಿದಂತೆ ಸಾಧನೆಗೈದ ಇನ್ನಿತರರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭ ರಾಷ್ಟಿçÃಯ ಮತದಾರರ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ವಿವಿಧ ಸ್ಪರ್ದೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
೨೦೨೧-೨೨ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಹೆಚ್ಚು ಅಂಕ ಪಡೆದ ಎಂ.ಎಸ್. ಸ್ವಸ್ತಿಕ್, ಪಿ.ಜೆ. ಜೇಮ್ಸ್, ಎಸ್.ಆರ್. ಐಶ್ವರ್ಯ ಇವರಿಗೆ ಶಿಕ್ಷಣ ಇಲಾಖೆಯಿಂದ ಲ್ಯಾಪ್‌ಟಾಪ್ ಹಾಗೂ ಪ್ರೋತ್ಸಾಹ ಧನ ವಿತರಿಸಲಾಯಿತು.
ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ೧೦ನೇ ತರಗತಿಯಲ್ಲಿ ಓದುತ್ತಿರುವ ೫ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ ಮಾಡಲಾಯಿತು.
ನಗರ ಠಾಣಾಧಿಕಾರಿ ಬಿ. ಎಸ್. ಶ್ರೀಧರ್ ನೇತೃತ್ವದಲ್ಲಿ ಪೊಲೀಸ್ ಪಥಸಂಚಲನ, ಸ್ಕೌಟ್ಸ್, ಗೈಡ್ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.
ಜೆಪಿಎನ್‌ಎಂ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಎಸ್. ಲಾಲ್ ಕುಮಾರ್ ಮತ್ತು ವಿದ್ಯಾರ್ಥಿಗಳ ತಂಡ ರೈತಗೀತೆ ಪ್ರಸ್ತುತಪಡಿಸಿದರು.
ವಿನಾಯಕ ಶಾಲೆ ಮತ್ತು ಬ್ರೆöÊಟ್ ವಿದ್ಯಾಸಂಸ್ಥೆಯ ಸ್ತಬ್ಧಚಿತ್ರ ಸೇರಿದಂತೆ ವೀರಾಜಪೇಟೆಯ ಸಂತ ಅನ್ನಮ್ಮ ವಿದ್ಯಾಸಂಸ್ಥೆ, ಕಾವೇರಿ ಶಾಲೆ, ತ್ರಿವೇಣಿ ಶಾಲೆ, ಪ್ರಗತಿ ಶಾಲೆ, ಸೇರಿದಂತೆ ಇನ್ನಿತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮಕ್ಕೂ ಮೊದಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಶಾಂತಾ ಚಿತ್ರಮಂದಿರದಿAದ ಮೆರವಣಿಗೆ ಹೊರಟು ದೊಡ್ಡಟ್ಟಿ ಚೌಕಿ, ಗಡಿಯಾರ ಕಂಬ ಮೂಲಕ ತಾಲೂಕು ಮೈದಾನದವರೆಗೆ ದೇಶಭಕ್ತಿಯನ್ನು ಸಾರುವ ವಿವಿಧ ಸಂದೇಶಗಳನ್ನು ಸಾರಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ಪೊಲೀಸ್ ವೃತ್ತ ನಿರೀಕ್ಷಕರಾದ ಶಿವರುದ್ರ, ಕಂದಾಯ ಪರಿವೀಕ್ಷಕ ಎಂ.ಎಲ್. ಹರೀಶ್, ಮಾಜಿ ಸೈನಿಕರ ಸಂಘದ ಅಧ್ಯಕ್ಷರಾದ ಚಪ್ಪಂಡ ಹರೀಶ್, ಮಾಜಿ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಟಿ. ನರೇಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜೇಶ್ ಪದ್ಮನಾಭ, ಕಾರ್ಮಿಕ ಇಲಾಖೆ ಅಧಿಕಾರಿ ಎಂ. ಸಿ. ಮಾದಪ್ಪ, ಸಬ್ ರಿಜಿಸ್ಟಾçರ್ ಆಲಿ, ಗ್ರೇಡ್ ೨ ತಹಶೀಲ್ದಾರ್ ಪ್ರದೀಪ್ ಕುಮಾರ್, ಉಪ ತಹಶೀಲ್ದಾರ್ ಪೊನ್ನು, ಲೋಕೋಪಯೋಗಿ ಇಲಾಖೆ ಅಭಿಯಂತರ ವೈ. ಸಿದ್ದೆಗೌಡ, ಉಪಸ್ಥಿತರಿದ್ದರು.
ತಿತಿಮತಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಾರ್ಲ್ಸ್ ಡಿಸೋಜಾ ನಿರೂಪಿಸಿದರೆ, ಜೆಪಿಎನ್‌ಎಂ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಎಸ್. ಲಾಲ್ ಕುಮಾರ್ ವಂದಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ ಸ್ವಾಗತಿಸಿದರು.
ಪುರಸಭೆ ಸದಸ್ಯರು, ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು, ಶಿಕ್ಷಣ ಇಲಾಖೆ ಸಿಬ್ಬಂದಿಗಳು, ಪೊಲೀಸ್ ಇಲಾಖೆ ಸಿಬ್ಬಂದಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರುಗಳು, ಕಾರ್ಮಿಕ ಇಲಾಖೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.