ಗೋಣಿಕೊಪ್ಪ ವರದಿ, ಜ. ೨೬: ಭಾರತೀಯ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಅನ್ಯಾಯದಿಂದ ಹೊರಬರಲು ಸಾಧ್ಯವಿದೆ ಎಂದು ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಹೇಳಿದರು.

ಗೋಣಿಕೊಪ್ಪ ವರದಿ, ಜ. ೨೬: ಭಾರತೀಯ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಅನ್ಯಾಯದಿಂದ ಹೊರಬರಲು ಸಾಧ್ಯವಿದೆ ಎಂದು ಪೊನ್ನಂಪೇಟೆ ತಹಶೀಲ್ದಾರ್ ಎನ್.ಎಸ್. ಪ್ರಶಾಂತ್ ಹೇಳಿದರು.

ನೆರವೇರಿಸಿ ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಸತ್ಯ, ನ್ಯಾಯ ಪರ ಶಿಕ್ಷಣ ಅಗತ್ಯವಾಗಿದ್ದು, ಪ್ರಜೆಯು ತಮ್ಮ ಹಕ್ಕುಗಳನ್ನು ಭಯವಿಲ್ಲದೆ, ಮುಕ್ತವಾಗಿ ಚಲಾಯಿಸಿ ಸೌಲಭ್ಯ ಪಡೆಯುವಂತಾಗಬೇಕಿದೆ. ಇದಕ್ಕೆ ನಮ್ಮ ಸಂವಿಧಾನದಲ್ಲಿರುವ ಕಾನೂನು ಪಾಲನೆ ಮುಖ್ಯ ಎಂದರು. ಭಾರತೀಯರು ಸ್ವಾಭಿಮಾನದಿಂದ ಹೆಜ್ಜೆ ಇಡಲು ಅನುವು ಮಾಡಿಕೊಟ್ಟ ದಿನವಾಗಿದ್ದು, ಸರ್ಕಾರಿ ದಿನಾಚರಣೆ ರಜ ದಿನ ಎಂಬ ಭಾವನೆಯಿಂದ ಹೊರ ಬರಬೇಕಿದೆ. ಭಾರತೀಯ ಪ್ರಜೆಗೆ ಸಮಾನವಾಗಿ ನೀಡಿರುವ ವೈಯಕ್ತಿಕ ಹಕ್ಕುಗಳನ್ನು ಚಲಾಯಿಸುವ ಮತ್ತು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕಿದೆ. ಸಂವಿಧಾನಕ್ಕೆ ದಕ್ಕೆಯಾಗದಂತೆ ದೇಶದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವುದು, ಸಂವಿಧಾನ ಬದ್ಧ ಸಾಮಾಜಿಕ ಬದುಕು ನಮ್ಮದಾಗಬೇಕಿದೆ ಎಂದು ಅವರು ಹೇಳಿದರು.

ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ರಾಷ್ಟçಗೀತೆ, ನಾಡಗೀತೆ, ರೈತಗೀತೆ ಮತ್ತು ಗಣರಾಜ್ಯೋತ್ಸವ ಸಂದೇಶ ಸಾರಲಾಯಿತು. ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.

ವೀರಾಜಪೇಟೆ ತಾ.ಪಂ. ಇಒ ಕೊಣಿಯಂಡ ಸಿ. ಅಪ್ಪಣ್ಣ, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಗಿರಿಜಾ ವೆಂಕಟೇಶ್, ಉಪಾಧ್ಯಕ್ಷೆ ಬೊಟ್ಟಂಗಡ ದಶಮಿ, ಬಗರ್‌ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಗಿರೀಶ್ ಗಣಪತಿ, ಗೋಣಿಕೊಪ್ಪ ಕಾವೇರಿ ಕಾಲೇಜು ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಐ.ಡಿ. ಲೇಪಾಕ್ಷಿ, ಲೆ. ಎಂ.ಆರ್. ಅಕ್ರಂ ಇದ್ದರು.