ಸೋಮವಾರಪೇಟೆ, ಜ. ೨೬: ಸಂವಿಧಾನದ ಆಶೋತ್ತರಗಳಿಗೆ ಬದ್ಧರಾಗಿ ಜೀವನ ಸಾಗಿಸುವುದು ಭಾರತೀಯರಾದ ಎಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ತಮ್ಮ ಹಕ್ಕುಗಳು ಹಾಗೂ ಕರ್ತವ್ಯದ ಬಗ್ಗೆ ಜಾಗೃತರಾಗಿರಬೇಕೆಂದು ತಾಲೂಕು ತಹಶೀಲ್ದಾರ್ ಎಸ್.ಎನ್. ನರಗುಂದ್ ಹೇಳಿದರು.

ತಾಲೂಕು ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ೭೪ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟçಧ್ವಜಾರೋಹಣ ನೆರವೇರಿಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಗಣರಾಜ್ಯೋತ್ಸವದ ಸಂದೇಶ ನೀಡಿದರು.

ಸ್ವಾತಂತ್ರಾö್ಯಪೂರ್ವದಲ್ಲಿ ದೇಶದಲ್ಲಿದ್ದ ಹತ್ತು ಹಲವು ಅನಿಷ್ಠ ಪದ್ಧತಿಗಳು, ಬ್ರಿಟೀಷರ ದಾಸ್ಯದಿಂದ ನಾವುಗಳು ಹೊರಬಂದಿದ್ದೇವೆ. ಸಮಾಜದಲ್ಲಿದ್ದ ಅಸಮಾನತೆಗಳನ್ನು ತೊಡೆದು ಹಾಕಲು ಡಾ. ಬಿ.ಆರ್. ಅಂಬೇಡ್ಕರ್‌ರAತೆ ಹಲವು ಮಹನೀಯರು ಶ್ರಮಿಸಿದ್ದಾರೆ ಎಂದರು.

ಭಾರತ ಸಂವಿಧಾನದ ಪೂರ್ವ ಪೀಠಿಕೆಯೇ ಮಹತ್ವದ್ದಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ರಾಷ್ಟಿçÃಯ ಸಮಗ್ರತೆಗೆ ಆದ್ಯತೆ ನೀಡಬೇಕಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತದ ಭವ್ಯ ಪರಂಪರೆಯ ಜೀವಾಳ ಸಂವಿಧಾನವಾಗಿದೆ. ಇಂತಹ ಸಂವಿಧಾನದ ಆಶೋತ್ತರಗಳಿಗೆ ಚ್ಯುತಿಯಾಗದಂತೆ ಎಲ್ಲರೂ ಜೀವಿಸಬೇಕೆಂದು ತಾಲೂಕು ದಂಡಾಧಿಕಾರಿಗಳು ಕರೆ ನೀಡಿದರು.

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂವಿಧಾನದ ಧ್ವನಿ ತಲುಪಬೇಕು. ಎಲ್ಲಾ ವರ್ಗದ ಮಂದಿಗೂ ಸಂವಿಧಾನದ ಬಗ್ಗೆ ಅರಿವು ಇರಬೇಕು. ಆಗ ಮಾತ್ರ ಸಂವಿಧಾನದ ಆಶಯಗಳಿಗೆ ಅರ್ಥ ಬರುತ್ತದೆ ಎಂದರು.

ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ದೇಶವು ಇಂದು ಬಾಹ್ಯ ಹಾಗೂ ಆಂತರಿಕವಾಗಿ ಸುಭದ್ರವಾಗಿದೆ. ಕೋವಿಡ್‌ನಂತರ ಸಾಂಕ್ರಾಮಿಕ ರೋಗವನ್ನು ಒಗ್ಗಟ್ಟಿನಿಂದ ನಿಗ್ರಹಿಸಿದ್ದೇವೆ. ದೇಶದ ವಿಜ್ಞಾನ-ತಂತ್ರಜ್ಞಾನವೂ ಏರುಗತಿಯಲ್ಲಿದೆ. ರಾಜಕೀಯ ಕಾರಣಗಳಿಗಾಗಿ ರಾಷ್ಟçದ ಹಿತಾಸಕ್ತಿಯನ್ನು ಬಲಿನೀಡುವ ಕೆಲಸಗಳು ಆಗಬಾರದು ಎಂದರಲ್ಲದೆ, ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಮೂವತ್ತೊಕ್ಲು ಗ್ರಾಮದ ಲ್ಯಾನ್ಸ್ನಾಯಕ್ ಎಂ.ಡಿ. ತಿಮ್ಮಯ್ಯ, ಶಾಂತಳ್ಳಿಯ ಹವಾಲ್ದಾರ್ ಜಿ.ಡಿ. ಬಸವರಾಜು, ರಾಷ್ಟಿçÃಯ ಹಾಕಿ ಆಟಗಾರ ಗೌಡಳ್ಳಿ ಪೃಥ್ವಿ, ಗ್ರಾಮ ಒನ್ ಕೇಂದ್ರಗಳಲ್ಲಿ ಉತ್ತಮ ಸೇವೆ ನೀಡಿದ ದುಂಡಳ್ಳಿ ರಾಜಶೇಖರ್, ಐಗೂರು ಹರಿದಾಸ್, ಹಂಡ್ಲಿ ಹೋಮೇಶ್ ಅವರುಗಳನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರನಾಯಕ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಪ.ಪಂ. ಮುಖ್ಯಾಧಿಕಾರಿ ನಾಚಪ್ಪ, ಸದಸ್ಯ ಬಿ.ಆರ್. ಮಹೇಶ್, ಎಸ್.ಆರ್. ಸೋಮೇಶ್, ಶರತ್‌ಚಂದ್ರ, ಚೌಡ್ಲು ಗ್ರಾ.ಪಂ. ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಅಬಕಾರಿ ಇನ್ಸ್ಪೆಕ್ಟರ್ ಲೋಕೇಶ್, ಸಮಾಜ ಕಲ್ಯಾಣ ಇಲಾಖೆಯ ಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಣ್ಣಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ ರಮೇಶ್‌ಕುಮಾರ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು, ಮಾಜಿ ಸೈನಿಕರು, ಸ್ಕೌಟ್ ಮತ್ತು ಗೈಡ್ಸ್ ತಂಡ, ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡಗಳಿAದ ಆಕರ್ಷಕ ಪಥಸಂಚಲನ, ಧ್ವಜವಂದನೆ ನಡೆಯಿತು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ದೇಶಭಕ್ತಿ ಗೀತೆಗಾಯನ, ನೃತ್ಯ ರೂಪಕಗಳು ಮೂಡಿಬಂದವು. ಎಸ್.ಜೆ.ಎಂ. ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ರಾಷ್ಟಾçಭಿಮಾನದ ರೂಪಕ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.