ಮಡಿಕೇರಿ, ಜ. ೨೬: ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ವರಾದ ಕುಪ್ಪಡೀರ ಐ. ಕಾಳಪ್ಪ ಅವರು ೧೦೦ ವರ್ಷಗಳನ್ನು ಪೂರೈಸಿದ್ದು, ಜ. ೧೭ಕ್ಕೆ ೧೦೧ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಹಿರಿಯರ ಜನ್ಮ ಶತಮಾನೋತ್ಸವ ವನ್ನು ಕುಟುಂಬ ವರ್ಗದವರು ಹಾಗೂ ಬಂಧು ಬಳಗದವರು ಸೇರಿ ಸಂಭ್ರಮದಿAದ ಆಚರಿಸಿದರು.

ಕಾಳಪ್ಪ ಅವರ ಸಂಸಾರ, ಬಂಧುಮಿತ್ರರು ಪಾಲ್ಗೊಂಡು ಕೇಕ್ ಕತ್ತರಿಸುವ ಮೂಲಕ ಪ್ರೀತಿಯ ಅಜ್ಜನಿಗೆ ಶುಭ ಕೋರಿದರು. ಕಾಳಪ್ಪ ಅವರು ಗ್ರಾಮದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದು, ಈ ಹಿಂದೆ ಸಾಮಾಜಿಕ ಸೇವೆಯಲ್ಲೂ ಗುರುತಿಸಿ ಕೊಂಡವರಾಗಿದ್ದಾರೆ.