*ಗೋಣಿಕೊಪ್ಪ, ಜ. ೨೬: ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ಜಿಲ್ಲೆಯಲ್ಲಿ ೪೫೯ ರೈತರು ಭತ್ತ ಖರೀದಿಗೆ ನೋಂದಾವಣೆ ಯಾಗಿದ್ದು, ಸುಮಾರು ೧೫೭೧೯ ಕ್ವಿಂಟಾಲ್ ಭತ್ತ ಖರೀದಿಗೆ ನೋಂದಾ ಯಿಸಲಾಗಿದೆ. ವೀರಾಜಪೇಟೆ ತಾಲೂಕಿನ ಗೋಣಿಕೊಪ್ಪದ ಎ.ಪಿ. ಎಂ.ಸಿ. ಆವರಣದಲ್ಲಿ ೨೬೮, ಮಡಿಕೇರಿ ಯಲ್ಲಿ ೧೬, ಸೋಮವಾರಪೇಟೆ ಉಪ ಪ್ರಾಂಗಾಣದಲ್ಲಿ ೯೮, ಕುಶಾಲನಗರ ಎ.ಪಿ.ಎಂ.ಸಿ. ಆವರಣದಲ್ಲಿ ೭೮ ರೈತರು ನೋಂದಾಯಿಸಿಕೊAಡಿದ್ದಾರೆ ಎಂದು ಶಾಸಕರು ಈ ಸಂದರ್ಭ ಮಾಹಿತಿ ನೀಡಿದರು. ಜನವರಿ ೩೦ ರಿಂದ ಭತ್ತ ಖರೀದಿ ಪ್ರಾರಂಭಿಸಲಾಗುವುದು ಎಂದು ತಾಲೂಕು ಕೃಷಿ ಅಧಿಕಾರಿ ಶಿವಮೂರ್ತಿ ತಿಳಿಸಿದ್ದಾರೆ. ಉದ್ಯಮಿ ಗುಮ್ಮಟೀರ ಕಿಲನ್ ಗಣಪತಿ, ಪ್ರಮುಖ ರಾದ ಪಂದ್ಯAಡ ಹರೀಶ್, ನೂರೇರ ರಂಜಿ ಪೂಣಚ್ಚ, ಕಟ್ಟೇರ ಜೀವನ್, ಎ.ಪಿಎಂ.ಸಿ. ಕಾರ್ಯದರ್ಶಿ ಎ.ಜಿ. ಬಸವಣ್ಣ, ಖರೀದಿ ಕೇಂದ್ರ ಅಧಿಕಾರಿ ಮಮತಾ, ಸೋಮಯ್ಯ ಇದ್ದರು.